12Mudigere1A

 

 

ಮೂಡಿಗೆರೆ ತಾಲ್ಲೂಕಿನ ಹೆಸಗಲ್ ಗ್ರಾ.ಪಂ. ವ್ಯಾಪ್ತಿಯ ಹೊಸನಗರ ಸಮುದಾಯ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಗ್ರಾಮಸಭೆಗೆ 9 ಇಲಾಖೆ ಅಧಿಕಾರಿಗಳನ್ನು ಹೊರತುಪೊಡಿಸಿ ಉಳಿದ ಇಲಾಖೆ ಅಧಿಕಾರಿಗಳು ಗೃರು ಹಾಜರಾಗಿದ್ದ ಹಿನ್ನಲೆಯಲ್ಲಿ ಹೆಸಗಲ್ ಗ್ರಾ.ಪಂ. ಸದಸ್ಯರು ಹಾಗೂ ಸಾರ್ವಜನಿಕರು ಒಗಟ್ಟು ಪ್ರದರ್ಶಿಸಿ ಗ್ರಾಮಸಭೆಗೆ ಬಹಿಷ್ಕಾರ ಹಾಕಿದರು.

ಹೆಸಗಲ್ ಗ್ರಾ.ಪಂ. ವ್ಯಾಪ್ತಿ ದೊಡ್ಡದಾಗಿದೆ. ಅನೇಕ ಕಡೆ ಕುಡಿಯುವ ನೀರು, ನಿವೇಶನದಂತಹ ಗಂಭೀರ ಸಮಸ್ಯೆಗಳಿವೆ. ಜಲಜೀವನ್ ಕುಡಿಯುವ ನೀರಿನ ಕಾಮಗಾರಿಯಿಂದ ಸಮರ್ಪಕವಾಗಿ ಕುಡಿಯುವ ನೀರಿನ ಪೂರೈಕೆಯಾಗುತ್ತದೆ ಎಂದು ಭಾವಿಸಿದ್ದೆವು. ಆದರೆ ಜೆಜೆಎಂ ಕಾಮಗಾರಿ ಕೇವಲ ಬಿಲ್ ಮಾಡಿಕೊಳ್ಳಲು ಕಾಟಾಚಾರಕ್ಕೆ ಮಾಡಲಾಗಿದೆ. ಕೆಲ ಕಡೆ ಟ್ಯಾಂಕ್ ಕೂಡ ನಿರ್ಮಾಣ ಮಾಡದೇ, ಮನೆ ಮನೆಗೆ ನಲ್ಲಿ ಹಾಕಿದ್ದು ಬಿಟ್ಟರೆ, ಕುಡಿಯುವ ನೀರು ಪೂರೈಕೆ ಇದೂವರೆಗೂ ಮಾಡಿಲ್ಲ.

ಹೆಸಗಲ್ ಗ್ರಾ.ಪಂ. ವ್ಯಾಪ್ತಿಯಲ್ಲಿ ಇಲ್ಲಿ ಅನೇಕ ವರ್ಷದಿಂದ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ನಿವೇಶನ ನೀಡಲು ಜಾಗ ಕಾಯ್ದಿರಿಸುವ ಬಗ್ಗೆ ಪ್ರಶ್ನೆ ಮಾಡಲು ಕಂದಾಯ ಅಧಿಕಾರಿಳು ಕೂಡ ಗೈರಾಗಿದ್ದಾರೆ. ಯಾವುದೇ ಸಮಸ್ಯೆಗಳಿ ಪರಿಹಾರ ಕಂಡು ಕೊಳ್ಳಲು ಸಾಧ್ಯವಾಗದ ಗ್ರಾಮಸಭೆ ಅವಶ್ಯಕತೆ ಇಲ್ಲವೆಂದು ಸಭೆಯಲ್ಲಿದ್ದ ಗ್ರಾ.ಪಂ. ಸದಸ್ಯರು ಹಾಗೂ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ಸಭೆ ಬಹಿಷ್ಕರಿಸಿದರು. ಇದರಿಂದ ಗ್ರಾಮಸಭೆ ನಡೆಯದೇ ಮುಂದೂಡಲಾಯಿತು.

ಗ್ರಾ.ಪಂ. ಅಧ್ಯಕ್ಷೆ ನಜ್ಮಾ ಬೇಗಂ, ಸದಸ್ಯರಾದ ಪ್ರಶಾಂತ್, ಶಿವಣ್ಣ, ರಾಧಾ, ಅಖಿಲಕೃಷ್ಣ, ಅರವಿಂದ್, ಕಲೀಮ್ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ