ಮೂಡಿಗೆರೆ ಟೈಲರ್ ಸಂಘದಿಂದ ಸ್ವಾತಂತ್ರ್ಯೋತ್ಸವದ ನೆನಪಿಗಾಗಿ ಮೂಡಿಗೆರೆ ಕಸಬಾ ಹೋಬಳಿ ದುಂಡುಗ ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತ ಸಮವಸ್ತ್ರ ನೀಡಿ ಪ್ರೋತ್ಸಾಹಿಸಲಾಯಿತು.
ಸಂಘದ ಕ್ಷೇತ್ರ ಅಧ್ಯಕ್ಷರಾದ ಹೆಚ್.ಎಂ ಶಿವೆಗೌಡ ಮಾತನಾಡಿ ಟೈಲರ್ ಸಂಘಗಳು ರಾಜ್ಯದಾದ್ಯಂತ ಅನೇಕ ಜನೋಪಯೋಗಿ ಕೆಲಸಗಳನ್ನು ಮಾಡುತ್ತಾ ಬರುತ್ತಿದೆ. ಟೈಲರ್ ವೃತ್ತಿ ಬಹಳ ಜವಾಬ್ದಾರಿಯುತವಾದ ಕೆಲಸವಾಗಿದೆ. ಗ್ರಾಹಕರ ನಂಬಿಕೆ ಮತ್ತು ಪ್ರೋತ್ಸಾಹವೇ ಟೈಲರ್ ವೃತ್ತಿ ಮಾಡುವವರಿಗೆ ಮುಖ್ಯ. ಟೈಲರ್ ಗಳು ತಮ್ಮ ವೃತ್ತಿಯೊಂದಿಗೆ ಸಾಮಾಜಿಕ ಕಾರ್ಯಗಳಲ್ಲಿಯೂ ತೊಡಗಿಸಿಕೊಳ್ಳುತ್ತಿರುವುದು ಪ್ರಶಂಸನೀಯ, ಈ ನಿಟ್ಟಿನಲ್ಲಿ ಮೂಡಿಗೆರೆ ತಾಲ್ಲೂಕು ಟೈಲರ್ ಸಂಘದವರ ಕಾರ್ಯ ಶ್ಲಾಘನೀಯ ಎಂದರು.
ಸಂಘದ ಪದಾಧಿಕಾರಿಗಳಾದ ಉಮಾ ಶಂಕರ್, ಷಣ್ಮುಖಾನಂದ, ಗಿರೀಶ್, ಸತೀಶ್, ಮಂಜುಳಾ, ಮೋಹನ್, ಮಂಜು ವಾಸು, ಸುರೇಶ್, ಶೃತಿ, ನರಸಿಂಹ ಟೈಲರ್ ಮತ್ತು ಶಾಲೆಯ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.



