ಜೆಸಿ ಸಪ್ತಾಹ 2025 ರ ಅಂಗವಾಗಿ ಜೇಸಿಐ ಗೋಣಿಬೀಡು ಹೊಯ್ಸಳದ ಸಮಾರೋಪ ಸಮಾರಂಭ ಜೆಸಿ ಹಾಲ್ ನಲ್ಲಿ ವಲಯ ಅಧ್ಯಕ್ಷ ವಿಜಯ ಕುಮಾರ್ ಅವರ ಉಪಸ್ಥಿತಿಯಲ್ಲಿ ನೆರವೇರಿತು.
ಮುಖ್ಯ ಅತಿಥಿಗಳಾಗಿ ಸುಧೀರ್ ಜೈನ್ ಹಾಗೂ ಗಿರೀಶ್ ಎಂ ಜೆ ಅವರ ಉಪಸ್ಥಿತಿಯಲ್ಲಿ ಅಧ್ಯಕ್ಷ ಜೆ ಸಿ ಜಗತ್ ಬಿ ಎಂ, ನಿಕಟ ಪೂರ್ವ ಅಧ್ಯಕ್ಷ ಆದರ್ಶ ಹೆಚ್ ಜಿ. ಕಾರ್ಯದರ್ಶಿ ಹೆಚ್ ಎಂ ಸಂತೋಷ್ ಹಾಗೂ ಎಲ್ಲಾ ಪೂರ್ವ ಅಧ್ಯಕ್ಷರು ಮತ್ತು ಸದಸ್ಯರು 200 ಕ್ಕೂ ಹೆಚ್ಚು ಜನ ಸೇರಿ ಸಮಾರೋಪ ಸಮಾರಂಭ ಯಶಸ್ವಿಯಾಗಿ ನೆರೆವೇರಿಸಿ ಕೊಟ್ಟರು
ಈ ಸಂದರ್ಭದಲ್ಲಿ ಜೆ ಸಿ ಸಂಸ್ಥೆಯಯಲ್ಲಿ ಉತ್ತಮ ಸೇವೆ ಸಲ್ಲಿಸಿದ ಪ್ರಕೃತಿ ಜೀ ಇವರಿಗೆ ಕಮಲ ಪತ್ರ ನೀಡಲಾಗಿದೆ ಹಾಗೇ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಸರ್ಕಾರಿ ಪ್ರೌಢಶಾಲೆ ಅಂಗಡಿ ಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿನಿ ಅಕ್ಷತಾ ಅವರನ್ನು ಗುರುತಿಸಿ ಸನ್ಮಾನಿಸಲಾಯಿತು. ಹಾಗೇ ಉತ್ತಮ ಗಾಯನ ಮತ್ತು ನೃತ್ಯ ಮಾಡುವ ಮೂಲಕ ಎಲ್ಲರನ್ನೂ ರಂಜಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ವ್ಯಾಪಾರ ಕ್ಷೇತ್ರದಲ್ಲಿ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಿರೀಶ್ ಮಣ್ಣೀಕೆರೆ ಅವರನ್ನು ಸನ್ಮಾನಿಸಲಾಯಿತು, ಹಾಗೇ ಜೆಸಿ ಸಪ್ತಾಹ ದಲ್ಲಿ ಪೂರ್ವ ಅಧ್ಯಕ್ಷರುಗಳಿಗೆ ಅಭಿನಂದನ ಪತ್ರ ನೀಡಿ ಗೌರವಿಸಲಾಯಿತು
ಈ ಸಂದರ್ಭದಲ್ಲಿ ಜೆ ಸಿ ಸಪ್ತಾಹದ 7 ದಿನದ ಕಾರ್ಯಕ್ರಮದ ವರದಿ ಓದಿ ತಿಳಿಸಲಾಯಿತು. ಕಾರ್ಯಕ್ರಮದಲ್ಲಿ ಗಣ್ಯರಿಗೆ ಸನ್ಮಾನ ಮಾಡಲಾಯಿತು



