ಹಿಂದೂ ಮಹಾಸಭಾ ಗಣೇಶೋತ್ಸವ ಸಮಿತಿ ವತಿಯಿಂದ ಮೂಡಿಗೆರೆ ಅಡ್ಯಂತಾಯ ರಂಗಮಂದಿರದಲ್ಲಿ 13 ದಿನಗಳ ಕಾಲ ಗಣೇಶ ಉತ್ಸವವನ್ನು ವಿಜೃಂಭಣೆಯಿಂದ ನೆರವೇರಿಸಲಾಗಿತ್ತು, ವಿಸರ್ಜನಾ ಮೆರವಣಿಗೆಯಲ್ಲಿ ಸುಮಾರು 20 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿ ವೈಭವದಿಂದ ಕಾರ್ಯಕ್ರಮ ನೆರವೇರಿಸಲಾಗಿತ್ತು.
ಗಣೇಶೋತ್ಸವ ಸಮಿತಿಯಿಂದ ಸೆಪ್ಟಂಬರ್ 12ರಂದು ಶುಕ್ರವಾರ ಮೂಡಿಗೆರೆ ಪಟ್ಟಣದ ಹೊರವಲಯದ ಕೃಷ್ಣಾಪುರ ಆಶ್ವಮೇದ ಸಭಾಂಗಣದಲ್ಲಿ ಲೆಕ್ಕಪತ್ರ ಮಂಡನೆ ಮತ್ತು ಉತ್ಸವದಲ್ಲಿ ಸಹಕಾರ ನೀಡಿದ ಸಮಿತಿಯ ಸದಸ್ಯರು, ಕಾರ್ಯಕರ್ತರಿಗೆ ಅಭಿನಂದನೆ ಕಾರ್ಯಕ್ರಮ ಏರ್ಡಿಸಲಾಗಿತ್ತು.
ಸಮಾರಂಭದಲ್ಲಿ ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ.ದಿನೇಶ್, ಮುಖಂಡರಾದ ಬಿ.ಎನ್. ಜಯಂತ್, ಕೇಶವ್ ಕೆಂಜಿಗೆ, ಜೆ.ಎಸ್. ರಘು, ಭರತ್ ಬಾಳೂರು, ವಿಕ್ರಂ ಬಣಕಲ್ ಮುಂತಾದವರು ಮಾತನಾಡಿ ಗಣೇಶೋತ್ಸವವನ್ನು ಶ್ರದ್ಧಾ ಭಕ್ತಿ ಮತ್ತು ವಿಜೃಂಭಣೆಯಿಂದ ನೆರವೇರಿಸಿದ ಸಮಿತಿಯ ಕಾರ್ಯವನ್ನು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಸಮಿತಿಯ ಪದಾಧಿಕಾರಿಗಳಾದ ಭರತ್ ಕನ್ನೇಹಳ್ಳಿ, ವಿನಯ್ ಹಳೇಕೋಟೆ, ದಿನೇಶ್ ಬೆಟ್ಟಗೆರೆ, ಕಲ್ಲೇಶ್ ಬಾಳೂರು, ಪ.ಪಂ. ಸದಸ್ಯ ಸುಧೀರ್, ಪ್ರಶಾಂತ್ ಬಿದರಹಳ್ಳಿ, ಸಿದ್ದಯ್ಯ ವಕೀಲರು, ಮಂಜು ಪಟೇಲ್, ಪ್ರವೀಣ್, ಸುಜಿತ್ ಹಳೇಮೂಡಿಗೆರೆ, ಯೋಗೆಶ್ ಪೂಜಾರಿ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸಮಿತಿ ಕೋಶಾಧ್ಯಕ್ಷ ವಿನಯ್ ಹಳೇಕೋಟೆ ಸಮಿತಿಯ ಲೆಕ್ಕಾಚಾರ ಮಂಡಿಸಿದರು. ಉತ್ಸವಕ್ಕೆ ಸಾರ್ವಜನಿಕ ದೇಣಿಗೆ, ಕಾಣಿಕೆ ಸೇರಿ ಒಟ್ಟು 43.5 ಲಕ್ಷ ರೂ. ಸಂಗ್ರಹವಾಗಿದ್ದು, ಒಟ್ಟು 36 ಲಕ್ಷ ವೆಚ್ಚವಾಗಿದ್ದು, 7.5 ಲಕ್ಷ ಹಣ ಉಳಿತಾಯವಾಗಿದೆ ಎಂದು ಮಾಹಿತಿ ಮಂಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಮಿತಿಯ ಅಧ್ಯಕ್ಷ ಪಿ.ಆರ್. ಅನುಕುಮಾರ್ ಮಾತನಾಡಿ ; ಕಳೆಎ ಮೂರು ವರ್ಷಗಳಿಂದ ಅಧ್ಯಕ್ಷ ಸ್ಥಾನವನ್ನು ಜವಾಬ್ದಾರಿಯುತವಾಗಿ ನಿರ್ವಹಿಸುತ್ತಿದ್ದು, ಈ ವರ್ಷ ಹಿರಿಯರ ಮಾರ್ಗದರ್ಶನ ಮತ್ತು ಸ್ನೇಹಿತರ ಬಳಗದ ಸಹಕಾರದಿಂದ ವಿಭಿನ್ನವಾಗಿ ಉತ್ಸವವನ್ನು ಆಚರಿಸಲಾಗಿದೆ. ಹೋಬಳಿ ಮತ್ತು ಗ್ರಾಮ ಮಟ್ಟದಲ್ಲಿ ಸಮಿತಿಗಳನ್ನು ರಚಿಸಿ ಇಡೀ ತಾಲ್ಲೂಕು ವ್ಯಾಪ್ತಿಯ ಜನರು ಪಾಲ್ಗೊಳ್ಳುವಂತೆ ಮಾಡಲಾಗಿದೆ. ವಿವಿಧ ಹೋಬಳಿ ಮತ್ತು ಪಟ್ಟಣದ ಸಮಿತಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ನೆರವಿನಿಂದ ಅತಿಹೆಚ್ಚಿನ ದೇಣಿಗೆ ಸಂಗ್ರಹಿಸಲಾಗಿದೆ. ಅನೇಕ ಉತ್ತಮ ಮನೋರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಕೊನೆಯ ದಿನ ವಿಸರ್ಜನಾ ಮಹೋತ್ಸವದ ಮೆರವಣಿಗೆಯಲ್ಲಿ ದಾಖಲೆಯ ಪ್ರಮಾಣದ ಜನರು ಸೇರಿದ್ದು ವಿಶೇಷವಾಗಿತ್ತು. ಈ ಸಂದರ್ಭದಲ್ಲಿ ಸಹಕಾರ ನೀಡಿದ ಸರ್ವರಿಗೂ ಅಭಿನಂದನೆ ಸಲ್ಲಿಸಿದರು.
ಕೆಂಪೇಗೌಡ ಒಕ್ಕಲಿಗರ ವೇದಿಕೆ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಬಕ್ಕಿ ಕಾರ್ಯಕ್ರಮ ನಿರೂಪಿಸಿದರು.



