ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಕೆಳಗೂರು ಚಿಕ್ಕಮಗಳೂರು ತಾಲೂಕು 2024-25ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ದಿನಾಂಕ 19-09-2025 ಸಂಘದ ಸಭಾಂಗಣದಲ್ಲಿ ನಡೆಯಿತು.
ಸಂಘದ ಅಧ್ಯಕ್ಷರು ಮತ್ತು ಚಿಕ್ಕಮಗಳೂರು ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರಾದ ಎಚ್ ಬಿ ಸತೀಶ್ ಇವರ ಅಧ್ಯಕ್ಷತೆಯಲ್ಲಿ ಸಹಾಸಭೆ ನಡೆಯಿತು.
ಅಧ್ಯಕ್ಷರು ಸಭೆಯನ್ನು ಉದ್ದೇಶಿಸಿ ಮಾತನಾಡಿ ಸಂಘವು ಈ ವರ್ಷ ನೂತನ ಕಟ್ಟಡ ನಿರ್ಮಾಣ ಮಾಡಿಯೂ 18 ಲಕ್ಷಕ್ಕೂ ಅಧಿಕ ಲಾಭವನ್ನು ಗಳಿಸಿದೆ ಹಾಗೂ ಉತ್ತಮ ಆಡಳಿತ ಅವಧಿಯನ್ನು ಮುಂದುವರಿಸಿದ್ದು ಮುಂದಿನ ದಿನಗಳಲ್ಲಿ ರೈತರಿಗೆ ಸಕಾಲಕ್ಕೆ ಗೊಬ್ಬರ ಹಾಗೂ ಇನ್ನಿತರ ಸಾಮಗ್ರಿಗಳನ್ನು ಸಂಘದ ವತಿಯಿಂದ ನಿಗದಿತ ಬೆಲೆಯಲ್ಲಿ ನೀಡಲಾಗುವುದು ಎಂದರು.
ಸಭೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಪುರಸ್ಕೃತ ರೈತರನ್ನು ಸನ್ಮಾನಿಸಲಾಯಿತು. ರಾಷ್ಟ್ರಮಟ್ಟದಲ್ಲಿ ಪುರಸ್ಕೃತರಾದ ಅಮರ್ ಡಿಸೋಜ ಮಡೇನೇರಲು ಹಾಗೂ ರಾಜ್ಯಮಟ್ಟದಲ್ಲಿ ಪುರಸ್ಕೃತರಾದ ಶ್ರೀಮತಿ ಕೆ.ಪಿ ಪ್ರವೀಣೆ ಇವರನ್ನು ಸನ್ಮಾನಿಸಲಾಯಿತು.
ಸಭೆಯಲ್ಲಿ ಆಡಳಿತ ಮಂಡಳಿ ಉಪಾಧ್ಯಕ್ಷರಾದ ಶ್ರೀಮತಿ ಸಿ.ಆರ್ ಪ್ರೇಮಾ, ನಿರ್ದೇಶಕರುಗಳಾದ ಕೆ.ಸಿ ಮಂಜೇಗೌಡ, ಎಸ್ ಆರ್ ಧರ್ಮೇಶ್, ಕೆ ಪಿ ಉದಯ್ ಕುಮಾರ್, ಎಂ ಜೆ ತಿಮ್ಮೇಗೌಡ, ಎಸ್.ಎಂ. ಪ್ರವೀಣ್, ಡಿ.ಎಂ ಪ್ರದೀಪ್, ಡಿ.ಆರ್ ಪೂರ್ಣೇಶ್, ಹೆಚ್ ಎಂ. ವೀಣಾ, ಕೆ ಆರ್ ಸಗನಯ್ಯ, ಎಂ.ಕೆ ಕೃಷ್ಣಪ್ಪ, ಪವನ್ ಕುಮಾರ್, ಡಿ.ಸಿ. ಕಿರಣ್, ಸಂಘದ ಕಾರ್ಯದರ್ಶಿ ಶ್ರೀಮತಿ ರೇಣುಕಾ, ಸಂಘದ ಸಿಬ್ಬಂದಿಗಳು ಇದ್ದರು, ವಿಜಯ್ ಕುಮಾರ್ ಸ್ವಾಗತಿಸಿ ವಂದಿಸಿದರು.




