ಮೂಡಿಗೆರೆ ತಾಲ್ಲೂಕಿನ ಬಣಕಲ್ ನಜರತ್ ಶಾಲೆಯಲ್ಲಿ ವ್ಯಾಸಾಂಗ ಮಾಡಿ ICSE SSLC ಪರೀಕ್ಷೆಯಲ್ಲಿ 92% ಅಂಕ ಗಳಿಸಿ ಸಾಧನೆ ಮಾಡಿದ ವಿದ್ಯಾರ್ಥಿ ಬಾಳೂರು ಹೆಡ್ ಕಾನ್ಸ್ಟೆಬಲ್ ನಂದೀಶ್ ಅವರ ಪುತ್ರ ಸಮೃದ್ಧ್ ಅವರನ್ನು ಪೊಲೀಸ್ ಇಲಾಖೆಯಿಂದ ಗೌರವಿಸಲಾಯಿತು.
ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಂ ಅಮಟೆ ಅವರು ಮಾತನಾಡಿ “ಪೊಲೀಸ್ ಇಲಾಖೆಯ ಮಕ್ಕಳಲ್ಲಿ ಇಂತಹ ಶೈಕ್ಷಣಿಕ ಸಾಧನೆ ಕಂಡು ಹೆಮ್ಮೆಯಾಗುತ್ತದೆ. ಸಮೃದ್ಧ್ ಅವರ ಪರಿಶ್ರಮ ಇತರ ವಿದ್ಯಾರ್ಥಿಗಳಿಗೆ ಮಾದರಿಯಾಗಲಿ,” ಎಂದು ಹೇಳಿದರು.
ಬಾಳೂರು ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ದಿಲೀಪ್ ಅವರು, “ಸಮೃದ್ಧ್ ಅವರ ಸಾಧನೆ ಪೊಲೀಸ್ ಕುಟುಂಬಕ್ಕೆ ಪ್ರೇರಣೆ. ಭವಿಷ್ಯದಲ್ಲೂ ಇದೇ ರೀತಿಯಾಗಿ ಮೆರುಗನ್ನು ತೋರಲಿ,” ಎಂದು ಆಶಿಸಿದರು.

ಇದೇ ಸಂದರ್ಭದಲ್ಲಿ, PSI ದಿಲೀಪ್ ಅವರು ಸಮೃದ್ಧ್ ಅವರಿಗೆ 10,000 ರೂ. ಮೌಲ್ಯದ ಫಾಸ್ಟ್‌ಟ್ರಾಕ್ ವಾಚ್ ಉಡುಗೊರೆಯಾಗಿ ನೀಡಿ ಗೌರವ ಸಲ್ಲಿಸಿದರು.



