viswakarma1

 

 

ವಿಶ್ವಕರ್ಮ ದಿನಾಚರಣೆ ಅಂಗವಾಗಿ ಮೂಡಿಗೆರೆ ತಾಲ್ಲೂಕು ಕಚೇರಿಯಲ್ಲಿ ತಾಲೂಕು ಆಡಳಿತದಿಂದ ಬುಧವಾರ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೂಡಿಗೆರೆ ತಹಸಿಲ್ದಾರ್ ಶ್ರೀಮತಿ ಅಶ್ವಿನಿ ಅವರು ಮಾತನಾಡಿ : ವಿಶ್ವಕರ್ಮರು ಸಮಾಜಕ್ಕೆ ನೀಡಿದ ಕೊಡುಗೆ ಅನನ್ಯವಾಗಿದೆ, ವಿಶ್ವಕರ್ಮ ಜನಾಂಗ ಸಮಾಜದ ವಿವಿಧ ರಂಗಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದ್ದಾರೆ. ಸಹಬಾಳ್ವೆಗೆ ಹೆಸರಾಗಿದ್ದಾರೆ. ಸಮಾಜದಲ್ಲಿ ಎಲ್ಲಾ ಜನಾಂಗದವರು ಒಗ್ಗಟ್ಟಾಗಿ ಕಾರ್ಯನಿರ್ವಹಿಸಿದಾಗ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ ಈ ನಿಟ್ಟಿನಲ್ಲಿ ನಮ್ಮ ಮಹನೀಯರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದರು.

ಮೂಡಿಗೆರೆ ವಿಶ್ವಕರ್ಮ ಸಂಘದ ತಾಲೂಕು ಅಧ್ಯಕ್ಷ ಪಟೇಲ್ ಮಂಜು ಮಾತನಾಡಿ : ವಿಶ್ವಕರ್ಮ ಮಹರ್ಷಿಗಳಿಗೆ ಸಂಬಂಧಿಸಿದಂತೆ ದೊಡ್ಡ ಐತಿಹ್ಯವೇ ಇದೆ. ವಿಶ್ವಕರ್ಮರ ಐವರು ಪುತ್ರರು ಒಂದೊಂದು ವೃತ್ತಿಯಲ್ಲಿ ಪರಿಣಿತಿ ಹೊಂದಿದ್ದರು, ಮರದ ಕೆಲಸ, ಕಬ್ಬಿಣದ ಕೆಲಸ, ಚಿನ್ನದ ಕೆಲಸ, ಕಂಚು ತಾಮ್ರದ ಕೆಲಸ, ಶಿಲ್ಪಿಗಳ ಕೆಲಸದಲ್ಲಿ ನಿರತರಾಗಿ ಸಮಾಜದ ಎಲ್ಲಾ ಜನರಿಗೆ ಅಗತ್ಯವಾಗಿ ಬೇಕಾದ ವೃತ್ತಿಯಲ್ಲಿ ತೊಡಗಿದ್ದಾರೆ ಎಂದರು.

ವಿಶ್ವಕರ್ಮ ಸಂಘದ ರಮೇಶ್ ಕಡಿದಾಳು ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ವೇದಿಕೆಯಲ್ಲಿ ವಿಶ್ವಕರ್ಮ ಸಂಘದ ಗೌರವ ಅಧ್ಯಕ್ಷ ಜಿ.ಡಿ. ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಕನ್ನೇಹಳ್ಳಿ, ಮಹಿಳಾ ಘಟಕದ ಅಧ್ಯಕ್ಷೆ ಚಂದ್ರಾವತಿ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಗಜೇಂದ್ರ ತರುವೆ, ದೌರ್ಜನ್ಯ ತಡೆ ಸಮಿತಿ ಅಣ್ಣೇಗೌಡ ಮುಂತಾದವರು ಇದ್ದರು.

ಸಾಹಸ ಮೆರೆದು ಸ್ನೇಹಿತೆಯ ಜೀವ ಉಳಿಸಿದ ವಿಶ್ವಕರ್ಮ ಸಮುದಾಯದ ವಿದ್ಯಾರ್ಥಿನಿಗೆ ಸನ್ಮಾನ

ಮೂಡಿಗೆರೆ ಹಿಂದುಳಿದ ವರ್ಗದ ಮೆಟ್ರಿಕ್ ನಂತರದ ಬಾಲಕೀಯರ ವಿದ್ಯಾರ್ಥಿ ನಿಲಯದಲ್ಲಿ ತನ್ನ ಸಹಪಾಠಿಯೊಬ್ಬಳು ವಿದ್ಯುತ್ ಅವಘಡಕ್ಕೆ ಒಳಗಾಗಿದ್ದಾಗ ಸಮಯಪ್ರಜ್ಞೆ ಮೆರೆದು ರಕ್ಷಿಸಿದ ವಿದ್ಯಾರ್ಥಿನಿ ಚಿಂತನಳನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.

ಚಿಂತನ ತನ್ನ ಸ್ನೇಹಿತೆಗೆ ಸ್ನಾನದ ಗೃಹದಲ್ಲಿ ಬಟ್ಟೆ ಹರಡುವ ತಂತಿಯಲ್ಲಿ ವಿದ್ಯುತ್ ಪ್ರವಹಿಸಿ ಅಲ್ಲಿ ಬಟ್ಟೆ ಒಣಗಿಸಲು ಹಾಕುವಾಗ ವಿದ್ಯುತ್ ತಗುಲಿತ್ತು. ತಕ್ಷಣ ಸಮಯಪ್ರಜ್ಞೆ ಮೆರೆದ ಚಿಂತನ ಕಸಗುಡಿಸುವ ಪೊರಕೆಯಿಂದ ಬಡಿದು ಸ್ನೇಹಿತೆಯ ಜೀವ ಉಳಿಸಿದ್ದಳು.

ಇವರ ಸಮಯಪ್ರಜ್ಞೆ ಮತ್ತು ಸಾಹಸ ಮನೋಭಾವನೆ ಗುರುತಿಸಿ ತಾಲ್ಲೂಕು ಆಡಳಿತದಿಂದ ಗೌರವಿಸಲಾಯಿತು. ಚಿಂತನ ಪ್ರಸ್ತುತ ಮೂಡಿಗೆರೆ ಬಿಜಿಎಸ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಾಂಗ ಮಾಡುತ್ತಿದ್ದಾಳೆ. ಮೂಡಿಗೆರೆ ತಾಲ್ಲೂಕು ಚಕ್ಕುಡಿಗೆ ಗ್ರಾಮದ ಜಗನ್ನಾಥ ಮತ್ತು ರೂಪ ದಂಪತಿಗಳ ಪುತ್ರಿ.

ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಸಂದೇಶ್, ಸಮಾಜಕಲ್ಯಾಣ ಇಲಾಖೆಯ ಅಧಿಕಾರಿ ರಾಜೇಶ್ ಮುಂತಾದವರು ಇದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ