ಮೂಡಿಗೆರೆ ಚೈತನ್ಯ ಪರಿಶಿಷ್ಟ ಜಾತಿ ಮಹಿಳಾ ಸಹಕಾರ ಸಂಘದ ಸರ್ವಸದಸ್ಯರ ವಾರ್ಷಿಕ ಮಹಾಸಭೆ ದಿನಾಂಕ 19/09/2025ರಂದು ನೆರವೇರಿತು.
ಮೂಡಿಗೆರೆ ಪಟ್ಟಣದ ದೀನ್ ದಯಾಳ್ ಉಪಾಧ್ಯಾಯ ಸಭಾಂಗಣ ತಾಲೂಕು ಪಂಚಾಯತ್ ಮೂಡಿಗೆರೆ ಇಲ್ಲಿ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ಶ್ರೀಮತಿ ಸರೋಜ ಹೆಚ್.ಬಿ. ವಹಿಸಿದ್ದರು.
ಉಪಾಧ್ಯಕ್ಷೆ ಶ್ರೀಮತಿ ಹೆಚ್.ಕೆ. ನೀಲಾ ಅನಂತ್, ನಿರ್ದೇಶಕರುಗಳು ಶ್ರೀಮತಿ ಮೋಟಮ್ಮ ಮಾಜಿ ಸಚಿವರು, ಶ್ರೀಮತಿ ನಯನ ಮೋಟಮ್ಮ ಶಾಸಕರು ಮೂಡಿಗೆರೆ ವಿಧಾನ ಸಭಾ ಕ್ಷೇತ್ರ. ಶ್ರೀಮತಿ ಲಕ್ಷ್ಮಿ ರಾಮಯ್ಯ, ಶ್ರೀಮತಿ ರತ್ನ ರಮೇಶ್, ಶ್ರೀಮತಿ ಸಿತಮ್ಮ, ಶ್ರೀಮತಿ ರಾದ, ಶ್ರೀಮತಿ ಕಾಳಮ್ಮ, ಶ್ರೀಮತಿ ರುಕ್ಮಿಣಿ, ಶ್ರೀಮತಿ ಸುಶೀಲ, ಶ್ರೀಮತಿ ಜಾನಕಿ, ಶ್ರೀಮತಿ ಜಯಂತಿ, ಶ್ರೀಮತಿ ಸುನೀತ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಉಪಸ್ಥಿತರಿದ್ದರು.



