IMG-20250930-WA0084_copy_1043x782

 

 

ಮೂಡಿಗೆರೆ ಲಯನ್ಸ್ ಸಂಸ್ಥೆ ವತಿಯಿಂದ ಶಿಕ್ಷಕರ ದಿನಾಚರಣೆ ಅಂಗವಾಗಿ ಮೂಡಿಗೆರೆ ವಿದ್ಯಾನಗರ ವಾಸಿಯಾದ ನಿವೃತ್ತ ಶಿಕ್ಷಕ ಡಿ.ಎಂ.ಕೊಮಾರಯ್ಯ (93) ಮತ್ತು ಶಾರದಮ್ಮ (85) ದಂಪತಿಗಳನ್ನು ಅವರ ನಿವಾಸದಲ್ಲಿ ಗೌರವಿಸಲಾಯಿತು..

‎ಈ ಶಿಕ್ಷಕ ದಂಪತಿಗಳು ಮೂಡಿಗೆರೆ ತಾಲೂಕಿನ ಅನೇಕ ಕಡೆ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದವರು. ಈ ಶಿಕ್ಷಕ ದಂಪತಿಗಳು ಮೂಡಿಗೆರೆ ವಕೀಲರಾದ. ಡಿ.ಕೆ.ಪ್ರಸನ್ನರವರ ತಂದೆ ತಾಯಿಗಳು

ಈ ಸಂದರ್ಭದಲ್ಲಿ ಮೂಡಿಗೆರೆ ಲಯನ್ ಸಂಸ್ಥೆ ಅದ್ಯಕ್ಷರಾದ ಬಿ.ಎಲ್.ದೀನೇಶ್..ಕಾರ್ಯದರ್ಶಿ. ಕೆ.ಜಿ.ಅಣ್ಣೆಗೌಡ…ಖಜಾಂಚಿ.ಎಂ.ಹೆಚ್.ಹರ್ಷ.. ಹಳೇಕೋಟೆ ರಮೇಶ್.. ಬಿ.ಜಗದೀಶ್..ಎಂ.ಬಿ.ಗೋಪಾಲಗೌಡ…ಪೂರ್ವದ್ಯಕ್ಷರಾದ..ಎಂ.ಈ.ಜಯಕುಮಾರ್.ಹೆಚ್.ಕೆ.ಶಿವಕಕುಮಾರ್  ಮುಂತಾದವರು ಇದ್ದರು.

ನಿವೃತ ಮುಖ್ಯ ಶಿಕ್ಷಕ ಡಿ.ಎಂ. ಕುಮಾರಯ್ಯ ರವರ ಕಿರು ಪರಿಚಯ

ಶ್ರೀಯುತರು ದಿನಾಂಕ:07-04-1932 ರಂದು ಮೂಡಿಗೆರೆ ತಾಲ್ಲೋಕ್ ದಾರದಹಳ್ಳಿ ಗ್ರಾಮದ ದಿ.ಮೋಟಯ್ಯ ಮತ್ತು ದಿ.ಬಾಸಮ್ಮ ದಂಪತಿಗಳಿಗೆ ಎರಡನೆ ಮಗನಾಗಿ ಜನಿಸಿದ್ದು, ಕುಟುಂಬದ ಬಡತನದಿಂದ ಶಾಲೆಯಲ್ಲಿ ವಿಧ್ಯಾಬ್ಯಾಸ ಕಷ್ಟವಿದ್ದರು ಅವರ ಹೆತ್ತವರು ಪ್ರಾಥಮಿಕ ವಿಧ್ಯಭ್ಯಾಸವನ್ನು ದಾರದಹಳ್ಳಿ ಸರ್ಕಾರಿ ಶಾಲೆಯಲ್ಲಿ ಮಾಡಿಸಿರುತ್ತಾರೆ.ಅನಂತರ ಶ್ರೀಯತರು ಪ್ರೌಡಶಾಲಾ ಶಿಕ್ಷಣವನ್ನು ಮೂಡಿಗೆರೆಯಲ್ಲಿ ಮುಗಿಸಿದರು. ಕುಟುಂಬದ ಬಡತನದಿಂದ ಮುಂದಿನ ವಿಧ್ಯಾಭ್ಯಾಸವನ್ನು ಮುಂದುವರಿಸಲಾಗದೆ ಶಿಕ್ಷಣವನ್ನು ಅಲ್ಲಿಗೆ ಮುಕ್ತಾಯಗೊಳಿಸಿರುತ್ತಾರೆ.

ದಿನಾಂಕ:01-08-1960 ರಂದು ಸರ್ಕಾರದಿಂದ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಅಯ್ಕೆಯಾಗುತ್ತಾರೆ. ಶ್ರೀಯುತರು ಮೊದಲಿಗೆ ಸರ್ಕಾರಿ ಕರ್ತವ್ಯವನ್ನು ಸಹ ಶಿಕ್ಷಕರಾಗಿ ಕಳಸ ಹೋಬಳಿ ಮುನ್ನೂರುಪಾಲ್ ಗ್ರಾಮದ ಶಾಲೆಯಲ್ಲಿ ಪ್ರಾರಂಭಿಸಿ, ಕೊಪ್ಪದ ಸೋಮಪುರ ಶಾಲೆ, ಕಡೂರಿನ ತಿಮ್ಮಾಪುರ ಶಾಲೆ, ಗೌಡಹಳ್ಳಿ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಸುಮಾರು 15 ವರ್ಷ ಕರ್ತವ್ಯ ನಿರ್ವಹಿಸಿರುತ್ತಾರೆ.

ನಂತರ 1969-1970 ಇಸವಿಯಲ್ಲಿ ಚಿಕ್ಕಮಗಳೂರಿನಲ್ಲಿ ಟಿ.ಸಿ.ಹೆಚ್ ತರಬೇತಿ ಪಡೆದಿರುತ್ತಾರೆ. ಅನಂತರ 1979-1980 ಇಸವಿಯಲ್ಲಿ ಕುದುರೆಮುಖದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷರಾಗಿ ಕರ್ತವ್ಯ ನಿರ್ವಹಿಸಿ ಕನ್ನಡ ಶಾಲೆಯ ಅಭಿವೃದ್ಧಿಗೆ ಕುದುರೆಮುಖದ ಅದಿರು ಕಂಪೆನಿ ಸಹಕಾರದೊಂದಿಗೆ ಸಾಕಷ್ಟು ಶ್ರಮಿಸಿರುತ್ತಾರೆ. ನಂತರ ಚಿನ್ನಿಗ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿ, 1985 ಇಸವಿಯಲ್ಲಿ ಮೂಡಿಗೆರೆ ತಾಲ್ಲೋಕ್ ಶಿಕ್ಷಕರ ಸಂಘದ ಉಪಾಧ್ಯಕ್ಷರಾಗಿ ಚುನಾವಣೆ ಮುಖಾಂತರ ಅಯ್ಕೆಯಾಗಿರುತ್ತಾರೆ. ನಂತರ ಮೂಡಿಗೆರೆಯ ಬಾಲಕರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಾಗೂ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷರಾಗಿ ಕರ್ತವ್ಯ ನಿರ್ವಹಿಸಿ ದಿನಾಂಕ:30-04-1990 ರಂದು ಸರ್ಕಾರಿ ಸೇವೆಯಿಂದ ಸದರಿ ಶಾಲೆಯಲ್ಲಿ ನಿವೃತ್ತಿಯಾಗಿರುತ್ತಾರೆ.

ಮೂಡಿಗೆರೆ ತಾಲ್ಲೋಕ್ ನಿವೃತ ಸರ್ಕಾರಿ ನೌಕರರ ಸಂಘ ಸಂಸ್ಥಾಪನೆ:-

ದಿನಾಂಕ:30-04-1994 ರಲ್ಲಿ ಮೂಡಿಗೆರೆಯ ನಿವೃತ ಸರ್ಕಾರಿ ನೌಕರರಾದ ಮಂಜೇಗೌಡ, ಅಣ್ಣಿಗೌಡ, ವೆಂಕಟರಮಣ, ಸಿದ್ದಯ್ಯ ಮತ್ತು ಇತರರ ಸಹಕಾರ ಮತ್ತು ಮುಂದಾಳತ್ವದಲ್ಲಿ ಮೂಡಿಗೆರೆ ತಾಲ್ಲೋಕ್ ನಿವೃತ ಸರ್ಕಾರಿ ನೌಕರರ ಸಂಘ ಸ್ಥಾಪನೆ, ಹಾಗೂ ಸಂಘದ ಸಂಸ್ಥಾಪಕ ಅಧ್ಯಕ್ಷರಾಗಿ ಸೇವೆ ಮತ್ತು ಸುಮಾರು ಸತತ 08 ವರ್ಷಗಳವರೆಗೆ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಕೆ. ಸಂಘದ ಅಭಿವೃದ್ದಿ ಮತ್ತು ಸದಸ್ಯರ ಕ್ಷೇಮಕ್ಕಾಗಿ ಸರ್ಕಾರದಿಂದ ಬರಬೇಕಾದ ಸವಲತ್ತುಗಳಗೆ ಸತತವಾಗೆ ಹೋರಾಟ.

ಸಾರ್ವಜನಿಕ ಸೇವೆ ಮತ್ತು ರಾಜಕಾರಣ:-

ಮೂಡಿಗೆರೆ ತಾಲ್ಲೋಕ್ ಗೃಹ ನಿರ್ಮಾಣ ಸಹಕಾರ ಸಂಘದಲ್ಲಿ ನಿರ್ದೇಶಕರಾಗಿ ಸೇವೆ.

ಮೂಡಿಗೆರೆ ತಾಲ್ಲೋಕ್ ಜಾತಿತ್ಯ ಜನತಾದಳ ಪಕ್ಷದಲ್ಲಿ ಕಾರ್ಯದರ್ಶಿಯಾಗಿ ಸೇವೆ.

ಕುಟುಂಬದ ಪರಿಚಯ:-

ದಿನಾಂಕ:07-04-1932 ರಂದು ಮೂಡಿಗೆರೆ ತಾಲ್ಲೋಕ್ ದಾರದಹಳ್ಳಿ ಗ್ರಾಮದಲ್ಲಿ ದಿ:ಮೋಟಯ್ಯ ಮತ್ತು ಬಾಸಮ್ಮ ದಂಪತಿಗಳಗೆ ಜಿನಿಸಿದ ಶ್ರೀಯುತರು ದಿನಾಂಕ:02-05-1963 ರಂದು ಹಾಲೂರು ಗ್ರಾಮದ ಸ್ವಾತಂತ್ರ ಹೋರಾಟಗಾರರಾದ ಹಾಲೂರುಗಿಡ್ಡಪ್ಪ ರವರ ಪುತ್ರಿ ಶ್ರೀಮತಿ.ಹೆಚ್.ಜಿ.ಶಾರದಮ್ಮ ರವರನ್ನು ವಿವಾಹವಾಗಿರುತ್ತಾರೆ.

ಶ್ರೀಮತಿ.ಶಾರದಮ್ಮ ರವರು ಮುಖ್ಯ ಶಿಕ್ಷಕಿಯಾಗಿ ಹೆಸಗಲ್ ಶಾಲೆಯಲ್ಲಿ 1998 ಇಸವಿಯಲ್ಲಿ ನಿವೃತ್ತಿಯಾಗಿರುತ್ತಾರೆ. ಶ್ರೀಯುತರಿಗೆ ಮೂರು ಮಕ್ಕಳ್ಳಿದ್ದು, ಮಗಳು ಚಿಕ್ಕಮಗಳೂರಿನ ಐ.ಡಿ.ಎಸ್.ಜಿ. ಕಾಲೇಜ್‌ನಲ್ಲಿ ಉಪನ್ಯಾಸಕರಾಗಿ, ಹಾಗೂ ಹಿರಿಯ ಮಗ ಡಿ.ಕೆ.ಪ್ರಸನ್ನ ಕುಮಾರ್ ರವರು ಮೂಡಿಗೆರೆ ಮತ್ತು ಚಿಕ್ಕಮಗಳೂರು ನ್ಯಾಯಾಲಯದಲ್ಲಿ ಸುಮಾರು 22 ವರ್ಷದಿಂದ ವಕೀಲರಾಗಿ ವೃತ್ತಿಯನ್ನು ನಿರ್ವಹಿಸುರುತ್ತಾರೆ ಮತ್ತು ಇವರ ಕಿರಿಯ ಮಗ ಡಿ.ಕೆ.ಚೈತನ್ನ ಕುಮಾರ್ ರವರು ಬೆಂಗಳೂರಿನಲ್ಲಿ ಖಾಸಗಿ ಕಂಪೆನಿಯಲ್ಲಿ ಸೀನಿಯರ್ ಮೇನೆಜರ್ ಆಗಿ ಸೇವೆ ಸಲ್ಲಿಸುತ್ತಿರುತ್ತಾರೆ.

ಸನ್ಮಾನ ಮತ್ತು ಪರಸ್ಕರಾಗಳು:-

ಶ್ರೀಯುತರ ಶಿಕ್ಷಣ ಕ್ಷೇತ್ರದಲ್ಲಿನ ಸೇವೆಯನ್ನು ಪರಿಗಣಿಸಿ,

-2007 ಇಸವಿಯಲ್ಲಿ ಬೆಂಗಳೂರಿನ ಸ್ಪೂರ್ತಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ “ಸುವರ್ಣರತ್ನ” ಅವಾರ್ಡ ಪುರಸ್ಕಾರ.

-2008 ಇಸವಿಯಲ್ಲಿ ಮೂಡಿಗೆರೆ ತಾಲ್ಲೋಕ್ ರಾಷ್ಟ್ರೀಯ ಹಬ್ಬಗಳ ಅಚರಣೆ ಸಮಿತಿ ಮತ್ತು ತಾಲ್ಲೋಕ್ ಅಡಳಿತದಿಂದ “ಉತ್ತಮ ಶಿಕ್ಷಕ” ಸನ್ಮಾನ.

-2009 ಇಸವಿಯಲ್ಲಿ ಮೂಡಿಗೆರೆ ತಾಲ್ಲೋಕ್ ಸರ್ಕಾರಿ ನಿವೃತ ನೌಕರ ಸಂಘದಿಂದ ಸನ್ಮಾನ ಪುರಸ್ಕಾರ.

-2010 ಇಸವಿಯಲ್ಲಿ ಡಿ.ಎಸ್.ಬಿಳಿಗೌಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ವಿಧ್ಯಾರ್ಥಿ ಸಂಘದವತಿಯಿಂದ “ಗುರವಂದನ” ಪುರಸ್ಕಾರ ಮತ್ತು ಮೂಡಿಗೆರೆ ಎಸ್.ಬಿ.ಎಮ್ ಬ್ಯಾಂಕ್ ರವರು “ಉತ್ತಮ ಶಿಕ್ಷಕ” ಪ್ರಶಸ್ತಿ ನೀಡಿ ಗೌರವಿಸಿಲಾಗಿದೆ.

-2012 ಇಸವಿಯಲ್ಲಿ ಕುದುರೆಮುಖದ ಸರ್ಕಾರಿ ಶಾಲೆಯ ಹಳೆವಿಧ್ಯಾರ್ಥಿ ಸಂಘದವತಿಯಿಂದ “ಗುರವಂದನ” ಪುರಸ್ಕಾರ.

ಡಿ ಎಂ ಕೊಮಾರಯ್ಯ ಮತ್ತು ಶಾರದಮ್ಮ ದಂಪತಿಗಳು ಪ್ರಸ್ತುತ ವಿದ್ಯಾನಗರದ ತಮ್ಮ ನಿವಾಸದಲ್ಲಿ ಕುಟುಂಬ ಸದಸ್ಯರೊಂದಿಗೆ ತಮ್ಮ ಇಳಿವಯಸ್ಸಿನಲ್ಲಿ ಜೀವನ ನಡೆಸುತ್ತಿರುತ್ತಾರೆ.

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ