goni 1

 

 

ಕನ್ನಡ ಸಾಹಿತ್ಯ ಪರಿಷತ್ತು ಗೋಣಿಬೀಡು ಹೋಬಳಿ ವತಿಯಿಂದ ಗೋಣಿಬೀಡಿನ ಹೊಸಪುರದ ವಾಲ್ಮೀಕಿ ಬುಡಕಟ್ಟು ಆಶ್ರಮ ಶಾಲೆಯಲ್ಲಿ ಶಿಕ್ಷಣದ ಜೊತೆಗೆ ಸಾಹಿತ್ಯದ ಬೆಸುಗೆ ಎಂಬ ಧ್ಯೇಯ ವಾಕ್ಯದೊಂದಿಗೆ ಕುವೆಂಪು ಸವಿನೆನಪು ಮತ್ತು ನಾಡಗೀತೆಯ ಶತಮಾನೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.

ಶತಮಾನೋತ್ಸವ ಕಾರ್ಯಕ್ರಮ ದ ಉದ್ಘಾಟನೆಯನ್ನು ನಿಲಯ ಪಾಲಕರಾದ  ತಿರುಮಲೇಶ್ ಉದ್ಘಾಟಿಸಿ ಕುವೆಂಪುರವರು ಮಹಾನ್ ಚೇತನ ಮತ್ತು ಅವರ ಆದರ್ಶ ಇಡೀ ಮಾನವ ಕುಲಕ್ಕೆ ಮಾದರಿ ಎಂದರು.

ನಾಡ ದೇವಿಗೆ ಪುಷ್ಪ ನಮನವನ್ನು ಸಲ್ಲಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತು ಮೂಡಿಗೆರೆ ತಾಲೂಕಿನ ಅಧ್ಯಕ್ಷರಾದ ಡಿ.ಕೆ. ಲಕ್ಷ್ಮಣ್ ಗೌಡ ರವರು ಮಾತನಾಡಿ ಈ ಸುಸಂದರ್ಭದಲ್ಲಿ ರಾಷ್ಟ್ರಕವಿಯನ್ನು ನೆನಪು ಮಾಡಿಕೊಂಡು ಅವರ ಸಾಹಿತ್ಯದ ಅಭಿರುಚಿಯನ್ನು ತಿಳಿಯಲು ಈ ಕಾರ್ಯಕ್ರಮದಿಂದ ಸಾಧ್ಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಾದ ರಾಜಕುಮಾರ್ ಅವರು ಕುವೆಂಪು ಸಂದೇಶ ಹಾಗೂ ಕುವೆಂಪು ಸವಿ ನೆನಪು ವಿಷಯದ ಬಗ್ಗೆ ಅವರ ಜನನ ಬಾಲ್ಯ ಶಿಕ್ಷಣ ಸಾಹಿತ್ಯ ಮತ್ತು ಸಾಮಾಜಿಕ ಕಳಕಳಿ ವಿಶ್ವಮಾನವ ಸಂದೇಶಗಳ ಬಗ್ಗೆ ಉಪನ್ಯಾಸವನ್ನು ನೀಡಿದರು.

ಗೋಣಿಬೀಡಿನ ಉಸ್ತುವಾರಿ ಸಂಚಾಲಕರಾದ ವಿ.ಪಿ ನಾರಾಯಣ್ ರವರು ನಾಡಗೀತೆಯ ಮಹತ್ವ ಮತ್ತು ನಾಡಗೀತೆಗೆ ಶತಮಾನೋತ್ಸವ ಆಚರಣೆ ಕುರಿತಂತೆ ಮಾಹಿತಿಯನ್ನು ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಗೋಣಿಬೀಡು, ಹೋಬಳಿ ಅಧ್ಯಕ್ಷರಾದ ನವೀನ್ ಆನೆದಿಬ್ಬ ವಹಿಸಿದ್ದರು .

ಮಕ್ಕಳ ಸಾಂಸ್ಕೃತಿಕ ನೃತ್ಯಗಳು ಮತ್ತು ಕುವೆಂಪುರವರ ಕವನ ವಚನವು ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗು ತಂದಿತು. ಶಾಲಾ ಮಕ್ಕಳಿಗೆ ಅಂದವಾದ ಕನ್ನಡ ಬರಹ ಸ್ಪರ್ಧೆ ನಡೆಸಿ ವಿಜೇತರಿಗೆ ಪ್ರಶಸ್ತಿ ಯನ್ನು ನೀಡಲಾಯಿತು.

ಕಾರ್ಯಕ್ರಮದಲ್ಲಿ ಗೋಣಿಬೀಡು ಸಾಂಸ್ಕೃತಿಕ ಕಾರ್ಯದರ್ಶಿ, ವೀಣಾ ಎನ್ ಟಿ ನಿಕಟ ಪೂರ್ವ ಅಧ್ಯಕ್ಷರಾದ ಭಾಗ್ಯ ಲಕ್ಷ್ಮಣ್ ಗೌಡ, ಬಣಕಲ್ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಲೋಕೇಶ್ ಬೆಟ್ಟಗೆರೆ, ಅಂಗನವಾಡಿ ಕಾರ್ಯಕರ್ತೆ ಆಶ್ರಿತ .ಸರೋಜಾ, ಶಾಲಾ ಶಿಕ್ಷಕಿರಾದ ರೇಖಾ, ಆಶಾ, ಶ್ವೇತಾ, ಸವಿತಾ, ಸುಧಾ, ಅರ್ಪಿತ, ವನಜಾಕ್ಷಿ, ಭಾನುಮತಿ, ನೇತ್ರ, ಪ್ರೇಮಾ, ಗ್ರಾಮಸ್ಥರು ಮತ್ತು ಮಕ್ಕಳು ಹಾಜರಿದ್ದರು

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ