ಕರ್ನಾಟಕ ರಾಜ್ಯ ಅಮೆಚೂರ್ ಕಬ್ಬಡಿ ಅಸೋಸಿಯೇಷನ್ ಸೀನಿಯರ್ ಸರ್ಕಲ್ ರಾಜ್ಯ ತಂಡಕ್ಕೆ ಮೂಡಿಗೆರೆ ತಾಲೂಕು ಬೆಟ್ಟಗೆರೆ ಗ್ರಾಮದ. ನಿತೀನ್ ಕುಟ್ಟಿ ಆಯ್ಕೆಯಾಗಿದ್ದಾರೆ.
ಬೆಂಗಳೂರಿನ ಕಂಠೀರವ ಒಳಂಗಣ ಕ್ರೀಡಾಂಗದಲ್ಲಿ ಜನವರಿ 6ರಂದು ಆಯ್ಕೆ ಪ್ರಕ್ರಿಯೆ ಜರಗಿತು. ಉತ್ತರಖಂಡದಲ್ಲಿ ಜನವರಿ 10 11 ಮತ್ತು 12ರಂದು ನಡೆಯುವ ಸೀನಿಯರ್ ಸರ್ಕಲ್ ರಾಷ್ಟ್ರೀಯ ಕಬಡ್ಡಿ ಪಂದ್ಯಾವಳಿಗೆ ಕರ್ನಾಟಕ ರಾಜ್ಯ ಅಮೆಚೂರು ಕಬಡ್ಡಿ ಅಸೋಸಿಯೇಷನ್ ತಂಡದಿಂದ ಪಾಲ್ಗೊಳ್ಳುತ್ತಿದ್ದಾರೆ
ನಿತಿನ್ ಅವರಿಗೆ ಚಿಕ್ಕಮಗಳೂರು ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಮತ್ತು ಬಿಸಿ ಸುರೇಶ್ ಅಕಾಡೆಮಿ ಬೆಟ್ಟಿಗೆರೆ ಯ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಹಾಗೂ ತರಬೇತುದಾರರು ಮತ್ತು ಪದಾಧಿಕಾರಿಗಳು ಹಾಗೂ ಎಲ್ಲಾ ಆಟಗಾರರು ಶುಭಕೋರಿದ್ದಾರೆ.



