January 15, 2026

 

 

4ನೇ ಆವೃತ್ತಿಯ ಮಹಿಳಾ ಪ್ರೀಮಿಯರ್‌ ಲೀಗ್‌ (WPL 2026) ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಮೊದಲ ಪಂದ್ಯ ಜನವರಿ 9 ರಿಂದ (ಇಂದಿನಿಂದ) ಆರಂಭ ಆಗಲಿದೆ. ಉದ್ಘಾಟನಾ ಪಂದ್ಯದಲ್ಲೇ ಹಾಲಿ ಚಾಂಪಿಯನ್ಸ್‌ ಮುಂಬೈ ಇಂಡಿಯನ್ಸ್‌ ಹಾಗೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ  ಸೆಣಸಲಿವೆ.

ಇಂದು ಸಂಜೆ 6:30 ರಿಂದ ಮುಂಬೈನ ಡಿವೈ ಪಾಟೀಲ ಕ್ರೀಡಾಂಗಣದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದ್ದು, 7:30ಕ್ಕೆ ಪಂದ್ಯ ಶುರುವಾಗಲಿದೆ.

2025 ರಲ್ಲಿ ಮುಂಬೈ ಇಂಡಿಯನ್ಸ್‌   ಚಾಂಪಿಯನ್ಸ್ ಆಗಿ ಹೊರಹೊಮ್ಮಿದ್ರೆ, 2024ರಲ್ಲಿ ಆರ್‌ಸಿಬಿ  ಟ್ರೋಫಿ ಗೆದ್ದಿದೆ. ಕಳೆದ ಬಾರಿ ಬೆಂಗಳೂರು ತಂಡ ಸೋಲನುಭವಿಸಿ ಲೀಗ್‌ ಸುತ್ತಿನಲ್ಲೇ ಟೂರ್ನಿಯಿಂದ ಹೊರಬಿದ್ದಿದ್ದು.  ಮುಂಬೈ ಇಂಡಿಯನ್ಸ್‌ ನಡೆದ ಮೂರು ಸೀಸನ್‌ಗಳಲ್ಲಿ ಎರಡು ಬಾರಿ ಟ್ರೋಫಿ ಎತ್ತಿ ಹಿಡಿದಿದೆ. ಆರ್‌ಸಿಬಿ ಒಂದು ಬಾರಿ ಗೆದ್ದಿದೆ. ಈ ಬಾರಿ 4ನೇ ಆವೃತ್ತಿಯಲ್ಲಿ ಟ್ರೋಫಿ ಗೆಲ್ಲುವ ಸಾಲಿನಲ್ಲಿ ಇವೆರಡು ತಂಡಗಳ ಹೆಸರುಗಳು ಮುಂಚೂಣಿಯಲ್ಲಿವೆ.

ಇನ್ನೂ ಈ ಬಾರಿ ಇವರೆಡು ತಂಡಗಳನ್ನು ಹೊರತುಪಡಿಸಿ ಉಳಿದ 3 ತಂಡಗಳಿಗೆ ಹೊಸ ನಾಯಕಿಯರನ್ನ ಆಯ್ಕೆ ಮಾಡಲಾಗಿದೆ. ಒಟ್ಟು 5 ಟೀಂ ಗಳು ಟ್ರೋಫಿಗಾಗಿ ಕಾದಾಟ ನಡೆಸಲಿವೆ.

ಯಾರು ಹೊಸ ನಾಯಕಿಯರು?
ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕಿಯಾಗಿ ಈ ಬಾರಿ ಜೆಮಿಮಾ ರೊಡ್ರಿಗಸ್, ಯುಪಿ ವಾರಿಯರ್ಸ್‌ಗೆ ಆಸ್ಟ್ರೇಲಿಯನ್ ಆಟಗಾರ್ತಿ ಮೆಗ್ ಲ್ಯಾನಿಂಗ್ ಹಾಗೂ ಆ್ಯಶ್ಲೀ ಗಾರ್ಡ್ನರ್ ಅವರು ಗುಜರಾತ್ ಜೈಂಟ್ಸ್ ತಂಡವನ್ನ ಮುನ್ನಡೆಸಲಿದ್ದಾರೆ. ಇನ್ನೂ ಆರ್‌ಸಿಬಿ ಮತ್ತು ಮುಂಬೈ ಇಂಡಿಯನ್ಸ್ ತಂಡದ ನಾಯಕಿಯರಾಗಿ ಕ್ರಮವಾಗಿ ಸ್ಮೃತಿ ಮಂಧಾನ ಮತ್ತು ಹರ್ಮನ್‌ ಪ್ರೀತ್‌ ಕೌರ್ ಅವರೇ ಮುಂದುವರಿದಿದ್ದಾರೆ.

 

09-01-2026 ಮುಂಬೈ ಇಂಡಿಯನ್ಸ್ vs ಆರ್​ಸಿಬಿ ನವಿ ಮುಂಬೈ
10-01-2026 ಯುಪಿ ವಾರಿಯರ್ಸ್ vs ಗುಜರಾತ್ ಜೈಂಟ್ಸ್ ನವಿ ಮುಂಬೈ
10-01-2026 ಮುಂಬೈ ಇಂಡಿಯನ್ಸ್ vs ದೆಹಲಿ ಕ್ಯಾಪಿಟಲ್ಸ್ ನವಿ ಮುಂಬೈ
11-01-2026 ದೆಹಲಿ ಕ್ಯಾಪಿಟಲ್ಸ್ vs ಗುಜರಾತ್ ಜೈಂಟ್ಸ್ ನವಿ ಮುಂಬೈ
12-01-2026 ಆರ್​ಸಿಬಿ vs ಯುಪಿ ವಾರಿಯರ್ಸ್ ನವಿ ಮುಂಬೈ
13-01-2026 ಮುಂಬೈ ಇಂಡಿಯನ್ಸ್ vs ಗುಜರಾತ್ ಜೈಂಟ್ಸ್ ನವಿ ಮುಂಬೈ
14-01-2026 ಯುಪಿ ವಾರಿಯರ್ಸ್ vs ದೆಹಲಿ ಕ್ಯಾಪಿಟಲ್ಸ್ ನವಿ ಮುಂಬೈ
15-01-2026 ಮುಂಬೈ ಇಂಡಿಯನ್ಸ್ vs ಯುಪಿ ವಾರಿಯರ್ಸ್ ನವಿ ಮುಂಬೈ
16-01-2026 ಆರ್​ಸಿಬಿ vs ಗುಜರಾತ್ ಜೈಂಟ್ಸ್ ನವಿ ಮುಂಬೈ
17-01-2026 ಯುಪಿ ವಾರಿಯರ್ಸ್ vs ಮುಂಬೈ ಇಂಡಿಯನ್ಸ್ ನವಿ ಮುಂಬೈ
17-01-2026 ದೆಹಲಿ ಕ್ಯಾಪಿಟಲ್ಸ್ vs ಆರ್​ಸಿಬಿ ನವಿ ಮುಂಬೈ
19-01-2026 ಗುಜರಾತ್ ಜೈಂಟ್ಸ್ vs ಆರ್​ಸಿಬಿ ವಡೋದರಾ
20-01-2026 ದೆಹಲಿ ಕ್ಯಾಪಿಟಲ್ಸ್ vs ಮುಂಬೈ ಇಂಡಿಯನ್ಸ್ ವಡೋದರಾ
22-01-2026 ಗುಜರಾತ್ ಜೈಂಟ್ಸ್ vs ಯುಪಿ ವಾರಿಯರ್ಸ್ ವಡೋದರಾ
24-01-2026 ಆರ್​ಸಿಬಿ vs ದೆಹಲಿ ಕ್ಯಾಪಿಟಲ್ಸ್ ವಡೋದರಾ
26-01-2026 ಆರ್​ಸಿಬಿ vs ಮುಂಬೈ ಇಂಡಿಯನ್ಸ್ ವಡೋದರಾ
27-01-2026 ಗುಜರಾತ್ ಜೈಂಟ್ಸ್ vs ದೆಹಲಿ ಕ್ಯಾಪಿಟಲ್ಸ್ ವಡೋದರಾ
29-01-2026 ಯುಪಿ ವಾರಿಯರ್ಸ್ vs ಆರ್​ಸಿಬಿ ವಡೋದರಾ
30-01-2026 ಗುಜರಾತ್ ಜೈಂಟ್ಸ್ vs ಮುಂಬೈ ಇಂಡಿಯನ್ಸ್ ವಡೋದರಾ
01-02-2026 ಡೆಲ್ಲಿ ಕ್ಯಾಪಿಟಲ್ಸ್ vs ಯುಪಿ ವಾರಿಯರ್ಸ್ ವಡೋದರಾ
03-02-2026 ಎಲಿಮಿನೇಟರ್ ವಡೋದರಾ
05-02-2026 ಫೈನಲ್ ವಡೋದರಾ

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ