January 15, 2026

 

 

ವಿರಾಟ್ ಕೊಹ್ಲಿ ಶ್ರೀಲಂಕಾದ ಬ್ಯಾಟಿಂಗ್ ದಂತಕಥೆ ಕುಮಾರ ಸಂಗಕ್ಕಾರ ಅವರ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಗರಿಷ್ಛ ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದ ಕುಮಾರ ಸಂಗಕ್ಕಾರ ಅವರನ್ನುಕೊಹ್ಲಿ ಮೂರನೇ ಸ್ಥಾನಕ್ಕೆ ತಳ್ಳಿ ತಾವು 2ನೇ ಸ್ಥಾನಕ್ಕೇರಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಪ್ರಥಮ ಏಕದಿನ ಕ್ರಿಕೆಟ್ ಇನ್ನಿಂಗ್ಸ್ ನಲ್ಲಿ ಅರ್ಧಶತಕ ಗಳಿಸಿದ ಕೊಹ್ಲಿ ತಮ್ಮ ಅಂತಾರಾಷ್ಟ್ರೀಯ ರನ್ ಗಳಿಕೆಯನ್ನು 28,032ಕ್ಕೆ ಏರಿಕೆ ಮಾಡಿಕೊಂಡಿದ್ದಾರೆ. ಆ ಮೂಲಕ ಈ ಪಟ್ಟಿಯಲ್ಲಿ 28016 ರನ್ ಗಳಿಸಿದ್ದ ಕುಮಾರ ಸಂಗಕ್ಕಾರ 3ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ.

ಈ ಪಟ್ಟಿಯಲ್ಲಿ ಭಾರತದ ಸಚಿನ್ ತೆಂಡೂಲ್ಕರ್ ಅಗ್ರಸ್ಥಾನದಲ್ಲಿದ್ದು ಸಚಿನ್ 34357 ಅಂತಾರಾಷ್ಟ್ರೀಯ ರನ್ ಗಳಿಸಿದ್ದಾರೆ. ಸಚಿನ್ ಈ ದಾಖಲೆ ಮುರಿಯಲು ಕೊಹ್ಲಿಗೆ ಇನ್ನೂ ಸುಮಾರು 6 ಸಾವಿರ ರನ್ ಗಳ ಅಂತರವಿದೆ.

ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ಗಳು:

  1. ಸಚಿನ್ ತೆಂಡೂಲ್ಕರ್ (IND): 34,357 ರನ್‌ಗಳು (644 ಇನ್ನಿಂಗ್ಸ್‌ಗಳಲ್ಲಿ 28 ಸಾವಿರ ರನ್‌ಗಳು)
  2. ವಿರಾಟ್ ಕೊಹ್ಲಿ (IND): 28,017+ ರನ್‌ಗಳು (624 ಇನ್ನಿಂಗ್ಸ್‌ಗಳಲ್ಲಿ 28 ಸಾವಿರ ರನ್‌ಗಳು)
  3. ಕುಮಾರ್ ಸಂಗಕ್ಕಾರ (SL): 28,016 ರನ್‌ಗಳು (666 ಇನ್ನಿಂಗ್ಸ್‌ಗಳಲ್ಲಿ 28 ಸಾವಿರ ರನ್‌ಗಳು)
  4. ರಿಕಿ ಪಾಂಟಿಂಗ್ (AUS): 27,483 ರನ್‌ಗಳು
  5. ಮಹೇಲ ಜಯವರ್ಧನೆ (SL): 25,957 ರನ್‌ಗಳು
  6. ಜಾಕ್ವೆಸ್ ಕಾಲಿಸ್ (SA): 25,534 ರನ್‌ಗಳು

ನ್ಯೂಜಿಲೆಂಡ್ವಿರುದ್ಧ ಭಾರತಕ್ಕೆ ರೋಚಕ ಜಯ

ವಡೋದರಾದ ಬಿಸಿಎ ಮೈದಾನದಲ್ಲಿ ನಡೆದ ಪ್ರಥಮ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧ ಟೀಂ ಇಂಡಿಯಾ 4 ವಿಕೆಟ್‌ಗಳ ಜಯ ಸಾಧಿಸಿದೆ. ಆ ಮೂಲಕ 3 ಪಂದ್ಯಗಳ ಸರಣಿಯಲ್ಲಿ 1-0 ಅಂತರದ ಮುನ್ನಡೆ ಕಾಯ್ದುಕೊಂಡಿದೆ.

ಮೊದಲು ಬ್ಯಾಟಿಂಗ್‌ ನ್ಯೂಜಿಲೆಂಡ್‌ 50 ಓವರ್‌ಗಳಿಗೆ 8 ವಿಕೆಟ್‌ ನಷ್ಟಕ್ಕೆ 300 ರನ್‌ ಗಳಿಸಿತು. ಗುರಿ ಬೆನ್ನತ್ತಿದ ಟೀಂ ಇಂಡಿಯಾ 49 ಓವರ್‌ಗಳಿಗೆ ಗುರಿ ತಲುಪಿ 4 ವಿಕೆಟ್‌ಗಳ ಜಯಗಳಿಸಿತು.

ಭಾರತ ತಂಡ ಬ್ಯಾಟಿಂಗ್‌ನಲ್ಲಿ ಜವಾಬ್ದಾರಿಯುತ ಆಟವಾಡಿತು. ರೋಹಿತ್‌ ಶರ್ಮಾ 26 ರನ್‌ ಗಳಿಸಿ ಔಟಾದರು. ಬಳಿಕ ಶುಭಮನ್‌ ಗಿಲ್‌ ಮತ್ತು ವಿರಾಟ್‌ ಕೊಹ್ಲಿ 118 ರನ್‌ಗಳ ಉತ್ತಮ ಜೊತೆಯಾಟವಾಡಿದರು. ಗಿಲ್‌ ಅರ್ಧಶತಕ ಗಳಿಸಿ (56) ಹೊರನಡೆದರು.

ಉತ್ತಮ ಫಾರ್ಮ್‌ನಲ್ಲಿರುವ ವಿರಾಟ್‌ ಕೊಹ್ಲಿ 93 (8 ಫೋರ್‌, 1 ಸಿಕ್ಸರ್)‌ ರನ್‌ ಗಳಿಸಿ ಶತಕ ವಂಚಿತರಾದರು. ಕೊಹ್ಲಿ ಜವಾಬ್ದಾರಿಯುತ ಆಟ ತಂಡದ ಗೆಲುವಿಗೆ ಕೊಡುಗೆ ನೀಡಿತು. ಶ್ರೇಯಸ್‌ ಅಯ್ಯರ್‌ 49 ರನ್‌ ಗಳಿಸಿ ಅರ್ಧಶತಕ ವಂಚಿತರಾಗಿ ಔಟಾದರು. ಜಡೇಜಾ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಹರ್ಷಿತ್‌ ರಾಣ 29 ರನ್‌ ಗಳಿಸಿ ಕ್ಯಾಚ್‌ ನೀಡಿ ಹೊರನಡೆದರು.

ಕೊನೆಯಲ್ಲಿ ತಂಡದ ಗೆಲುವಿನ ಜವಾಬ್ದಾರಿ ಕೆ.ಎಲ್.ರಾಹುಲ್‌ ಮೇಲೆ ಬಿತ್ತು. ರಾಹುಲ್‌ಗೆ ವಾಷಿಂಗ್ಟನ್‌ ಸುಂದರ್‌ ಸಾಥ್‌ ನೀಡಿದರು. ಹೋರಾಟ ನಡೆಸಿ ತಂಡವನ್ನು ಗೆಲ್ಲಿಸುವಲ್ಲಿ ಕನ್ನಡಿಗ ರಾಹುಲ್‌ (29) ಯಶಸ್ವಿಯಾದರು.

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ನ್ಯೂಜಿಲೆಂಡ್‌ ಉತ್ತಮ ಆರಂಭ ಪಡೆಯಿತು. ಓಪನರ್‌ಗಳಾದ ಡೆವೊನ್‌ ಕಾನ್ವೆ (56) ಹಾಗೂ ಹೆನ್ರಿ ನಿಕೋಲ್ಸ್‌ (62) ಮೊದಲ ವಿಕೆಟ್‌ಗೆ 21.4 ಓವರ್‌ಗಳಲ್ಲಿ 117 ರನ್‌ ಗಳಿಸಿದರು. ಇಬ್ಬರೂ ಅರ್ಧಶತಕ ಗಳಿಸಿ ಔಟ್‌ ಆದರು.

ಉತ್ತಮ ಇನ್ನಿಂಗ್ಸ್‌ ಕಟ್ಟಿದ ಡೆರಿಲ್‌ ಮಿಚೆಲ್‌ 84 ರನ್‌ ಸಿಡಿಸಿ ತಂಡವನ್ನು ಸವಾಲಿನ ಮೊತ್ತದತ್ತ ಕೊಂಡೊಯ್ದರು. ಕ್ರಿಸ್ಟಿಯಾನ್‌ ಕ್ಲಾರ್ಕ್‌ 24 (ಔಟಾಗದೇ), ಗ್ಲೆನ್‌ ಫಿಲಿಪ್ಸ್‌ 12, ಮಿಚೆಲ್‌ ಹೇ 18, ನಾಯಕ ಮೈಕೆಲ್‌ ಬ್ರೇಸ್‌ವೆಲ್‌ 16 ರನ್‌ ಗಳಿಸಿದರು.

New Zealand  (50 ovs maximum)
Batting R B M 4s 6s SR
b Harshit Rana 56 67 108 6 1 83.58
c †Rahul b Harshit Rana 62 69 97 8 0 89.85
c †Rahul b Mohammed Siraj 12 16 29 0 0 75.00
lbw b Prasidh Krishna 84 71 110 5 3 118.30
c Iyer b Kuldeep Yadav 12 19 24 1 0 63.15
b Prasidh Krishna 18 13 17 2 0 138.46
run out (Iyer) 16 18 26 1 0 88.88
b Mohammed Siraj 1 2 4 0 0 50.00
not out 24 17 34 3 0 141.17
not out 8 8 12 1 0 100.00
Extras (w 7) 7
Total
50 Ov (RR: 6.00)
300/8
Did not bat: 

Fall of wickets: 1-117 (Henry Nicholls, 21.4 ov), 2-126 (Devon Conway, 23.6 ov), 3-146 (Will Young, 27.5 ov), 4-170 (Glenn Phillips, 33.2 ov), 5-198 (Mitchell Hay, 37.3 ov), 6-237 (Michael Bracewell, 42.6 ov), 7-239 (Zak Foulkes, 43.3 ov), 8-281 (Daryl Mitchell, 47.4 ov) • DRS
Bowling O M R W ECON 0s 4s 6s WD NB
8 0 40 2 5.00 26 4 1 1 0
10 0 65 2 6.50 26 8 0 4 0
5 0 27 0 5.40 10 2 0 0 0
9 0 60 2 6.66 24 7 1 0 0
9 0 52 1 5.77 21 1 2 1 0
9 0 56 0 6.22 18 5 0 1 0
India  (T: 301 runs from 50 ovs)
Batting R B M 4s 6s SR
c Bracewell b Jamieson 26 29 37 3 2 89.65
c Phillips b Ashok 56 71 107 3 2 78.87
c Bracewell b Jamieson 93 91 123 8 1 102.19
b Jamieson 49 47 68 4 1 104.25
c Clarke b Jamieson 4 5 6 0 0 80.00
not out 29 21 53 2 1 138.09
c †Hay b Clarke 29 23 30 2 1 126.08
not out 7 7 17 0 0 100.00
Extras (lb 4, w 9) 13
Total
49 Ov (RR: 6.24)
306/6
Fall of wickets: 1-39 (Rohit Sharma, 8.4 ov), 2-157 (Shubman Gill, 26.3 ov), 3-234 (Virat Kohli, 39.1 ov), 4-239 (Ravindra Jadeja, 39.6 ov), 5-242 (Shreyas Iyer, 41.1 ov), 6-279 (Harshit Rana, 46.2 ov) • DRS
Bowling O M R W ECON 0s 4s 6s WD NB
10 1 41 4 4.10 40 3 1 4 0
10 0 49 0 4.90 29 4 1 0 0
6 0 55 1 9.16 11 6 2 0 0
10 0 73 1 7.30 24 8 2 0 0
8 0 56 0 7.00 11 0 2 3 0
4 0 21 0 5.25 6 1 0 0 0
1 0 7 0 7.00 0 0 0 1 0

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ