ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ಗ್ರಾಂಡ್ ಮತ್ತು ಗಾಯತ್ರಿ ವೃಕ್ಷ ಸಭಾಂಗಣದಲ್ಲಿ ನಡೆಯುತ್ತಿರುವ ಫಸ್ಟ್ ಸರ್ಕಲ್ ಉದ್ಯಮಿ ಒಕ್ಕಲಿಗ ಎಕ್ಸ್ಪೋ ನಾಲ್ಕನೇ ಆವೃತ್ತಿಯ ಉದ್ಯಮಿ ಪ್ರತಿನಿಧಿಗಳ ಸಮಾವೇಶ ಶನಿವಾರ ಯಶಸ್ವಿಯಾಗಿ ನೆರವೇರಿತು
ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಶ್ರೀ ನಿಶ್ಚಲಾನಂದ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.
ಒಕ್ಕಲಿಗ ಸಮುದಾಯದ ಉದ್ಯಮಿಗಳ ನಡುವೆ ಪರಸ್ಪರ ಸಂಪರ್ಕ ಸೇತುವೆ ಕಲ್ಪಿಸುವುದು ನಮೋದ್ಯಮಿಗಳಿಗೆ ಪ್ರೋತ್ಸಾಹ ನೀಡುವುದು ಉತ್ಪನ್ನಗಳಿಗೆ ಪ್ರದರ್ಶನ ಮತ್ತು ಮಾರಾಟಕ್ಕೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಫಸ್ಟ್ ಸರ್ಕಲ್ ಉದ್ಯಮಿ ಒಕ್ಕಲಿಗ ಎಕ್ಸ್ಪೋ ಕಾರ್ಯಕ್ರಮ ನೆರವೇರುತ್ತಿದೆ
ಈ ಕಾರ್ಯಕ್ರಮದಲ್ಲಿ ಕೃಷಿ ಸಂಸ್ಕೃತಿಯನ್ನು ಬಿಂಬಿಸುವ ಗಾಣದ ಎತ್ತುಗಳು, ಎತ್ತಿನ ಬಂಡಿ, ರಾಗಿ ಬೀಸುವುದು, ಜನಪದ ಹಾಡುಗಳು, ಗೊಂಬೆ ಕುಣಿತಗಳು, ವಿವಿಧ ವಾದ್ಯಗಳು ಪ್ರದರ್ಶನ ಕೊಂಡವು
200 ಕ್ಕು ಅಧಿಕ ಮಳಿಗೆಗಳಲ್ಲಿ ವಿವಿಧ ಪ್ರದರ್ಶನ ಮತ್ತು ಮಾರಾಟಗಳು ನಡೆದವು. ಬಟ್ಟೆ, ಕಾಸ್ಮೆಟಿಕ್ ಉತ್ಪನ್ನಗಳು, ಶ್ರೀಗಂಧದ ಉತ್ಪನ್ನಗಳು, ಆಭರಣಗಳು, ಪೀಠೋಪಕರಣಗಳು, ಎಣ್ಣೆಗಳು, ಸಾವಯವ ತಿನಿಸುಗಳು, ಸಿರಿಧಾನ್ಯಗಳು ಗಮನ ಸೆಳೆದು
ಸ್ಥಳದಲ್ಲಿಯೇ ವಿವಿಧ ಶಾಲಾ-ಕಾಲೇಜುಗಳು ತಮ್ಮ ಕ್ಯಾಂಪಸ್ ನಲ್ಲಿ ಯಾವ ಕೋರ್ಸ್ ಗಳು ಇವೆ ಎಂಬ ಮಾಹಿತಿ ನೀಡಿದವು. ಬ್ಯಾಂಕುಗಳು ಸಾಲ ಸೌಲಭ್ಯಗಳ ವಿವರ ನೀಡಿದವು. ವಿವಿಧ ಯಂತ್ರೋಪಕರಣಗಳು ಕಟ್ಟಡ ನಿರ್ಮಿಸಲು ಸೂಕ್ತವೇ ಎಂದು ವೈಜ್ಞಾನಿಕವಾಗಿ ಕಂಡುಹಿಡಿಯುವ ಸಮೀಕ್ಷೆ ವಿವರಗಳು ವೀಕ್ಷಕರಿಗೆ ನೀಡಲಾಯಿತು
ಒಕ್ಕಲಿಗರ ಇತಿಹಾಸವನ್ನು ಕಟ್ಟಿಕೊಡಲಾಗಿತ್ತು ಗಂಗರು, ನಾಡಪ್ರಭು ಕೆಂಪೇಗೌಡರ ಕಾಲದ ಇತಿಹಾಸ, ಕುವೆಂಪು, ಒಕ್ಕಲಿಗರ ಪ್ರಾಥಃಸ್ಮರಣೀಯವರ ವಿವರಗಳನ್ನು ನೀಡಲಾಗಿತ್ತು

ಚಿಕ್ಕಮಗಳೂರು ಜಿಲ್ಲೆಯಿಂದ ಇಬ್ಬರು ಸಾಧಕ ಮಹಿಳೆಯರಿಗೆ ಸನ್ಮಾನ
ಫಸ್ಟ್ ಸರ್ಕಲ್ ಒಕ್ಕಲಿಗ ಎಕ್ಸ್ಪೋನ್ನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಚಿಕ್ಕಮಗಳೂರು ಜಿಲ್ಲೆಯಿಂದ ಇಬ್ಬರು ಮಹಿಳಾ ಸಾಧಕಿಯರನ್ನು ಸನ್ಮಾನಿಸಲಾಯಿತು
ಮೂಡಿಗೆರೆ ತಾಲೂಕು, ಕೆಂಬತ್ತಮಕ್ಕಿ ಎಸ್ಟೇಟ್ ನ ಶ್ರೀಮತಿ ಕಲಾವತಿ ರಾಜಣ್ಣ ಅವರಿಗೆ ಸಾಧಕ ಮಹಿಳೆ ಪ್ಮರಶಸ್ತಿ ನೀಡಿ ಗೌರವಿಸಲಾಯಿತು. ಮತ್ತು ಹಳೇಕೋಟೆ ಗ್ರಾಮದ ಶ್ರೀಮತಿ ಪವಿತ್ರ ರತೀಶ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು

ಶ್ರೀಮತಿ ಕಲಾವತಿ ರಾಜಣ್ಣ ಅವರು ಪ್ರಸ್ತುತ ಮೂಡಿಗೆರೆ ತಾಲ್ಲೂಕು ಕಾಫಿನಾಡು ಮಹಿಳಾ ಒಕ್ಕಲಿಗರ ಸಂಘದ ಅಧ್ಯಕ್ಷರಾಗಿದ್ದಾರೆ, ಜೊತೆಗೆ ಕೃಷಿಯಲ್ಲಿ ತಮ್ಮನ್ನು ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಗತಿಪರ ಕೃಷಿಕರಾಗಿ ಹೆಸರು ಮಾಡಿದ್ದಾರೆ. ಮೂಡಿಗೆರೆ ಪಟ್ಟಣದಲ್ಲಿ ಹಳೆಮನೆ ಹೋಟೆಲ್ ಪ್ರಾರಂಭಿಸಿ ಮಲೆನಾಡಿನ ಸ್ವಾದಿಷ್ಟವಾದ ವೈವಿಧ್ಯಮಯ ಭೋಜನವನ್ನು ನೀಡುತ್ತಿದ್ದಾರೆ, ಕಾರ್ ರೇಸ್ ಸ್ಪರ್ಧೆಗಳಲ್ಲಿ ಹಲವು ಬಹುಮಾನ ಗೆದ್ದಿದ್ದಾರೆ.
ಶ್ರೀಮತಿ ಪವಿತ್ರ ರತೀಶ್ ಅವರು ಪ್ರಸ್ತುತ ಚಿಕ್ಕಮಗಳೂರು ಜಿಲ್ಲಾ ವುಮೆನ್ಸ್ ಕಾಫಿ ಫೋರಂ ನ ಅಧ್ಯಕ್ಷರಾಗಿದ್ದು ಜೊತೆಗೆ ವಿವಿಧ ಖಾದ್ಯಗಳನ್ನು ತಯಾರಿಸಿ ಮಾರಾಟ ಮಾಡುವುದರ ಜೊತೆಗೆ ಮೂಡಿಗೆರೆ ಹಳೆಮನೆ ಹೋಟೆಲ್ ನ ಪಾಲುದಾರರಾಗಿದ್ದಾರೆ, ಹೋಮ್ ಸ್ಟೇ ನಡೆಸುತ್ತಿದ್ದಾರೆ.
ಇವರಿಬ್ಬರ ಸಾಧನೆಯನ್ನು ಗುರುತಿಸಿ ಫಸ್ಟ್ ಸರ್ಕಲ್ ಒಕ್ಕಲಿಗ ಎಕ್ಸ್ಪೋನಲ್ಲಿ ರಾಜ್ಯಮಟ್ಟದ ಗುರುತಿಸಿ ಗೌರವಿಸಲಾಗಿದೆ

ಪ್ರಶಸ್ತಿ ವಿಜೇತ ಶ್ರೀಮತಿ ಕಲಾವತಿ ರಾಜಣ್ಣ ಹಾಗೂ ಶ್ರೀಮತಿ ಪವಿತ್ರ ರತೀಶ್ ಅವರಿಗೆ ಮೂಡಿಗೆರೆ ಬೆಳೆಗಾರರ ಸಂಘದ ಅಧ್ಯಕ್ಷ ಬಿ ಆರ್ ಬಾಲಕೃಷ್ಣ, ಡಾ.ಜೆ.ಪಿ.ಕೃಷ್ಣೇಗೌಡ, ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ ಮುಂತಾದವರು ಅಭಿನಂದನೆ ಸಲ್ಲಿಸಿದರು.



