ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳಿಗೆ ಪಠ್ಯದ ಜತೆಗೆ ನಿಸರ್ಗಮುಖಿ ಹಾಗೂ ಸಮಾಜಮುಖಿಯಾದ ಶಿಕ್ಷಣ ದೊರೆಯಬೇಕೆಂದು ಸಾಹಿತಿ ಚಟ್ನಳ್ಳಿ ಮಹೇಶ್ ಹೇಳಿದರು.
ಅವರು ಗುರುವಾರ ಸಂಜೆ ಮೂಡಿಗೆರೆ ಪಟ್ಟಣದ ಎಂಇಎಸ್ ಶಾಲೆಯಲ್ಲಿ ‘ಹನಿ ಬೀ ಫೇಸ್ಟ್’ ಹೆಸರಿನಲ್ಲಿ ಭವ್ರವಾದ ವೇದಿಕೆಯಲ್ಲಿ ಏರ್ಪಡಿಸಿದ್ದ ಶಾಲೆ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹಿಂದೆ ಮಕ್ಕಳು ಆಡಿ ಆಡಿ ಬೆಳೆಯುತ್ತಿದ್ದರು. ಆದರೆ ಈಗಿನ ಮಕ್ಕಳು ಮೊಬೈಲ್ ನೋಡಿ ನೋಡಿ ದಣಿಯುತ್ತಿದ್ದಾರೆ. ಮೊಬೈಲ್‍ನಿಂದ ಮಕ್ಕಳ ಬೌಧಿಕವಾಗಿ ಹಿಂದುಳಿಯುವ ಜತೆಗೆ ಮಾನಸಿಕವಾಗಿ ಕುಗ್ಗುತ್ತಿದ್ದಾರೆ. ಹಾಗಾಗಿ ಮಕ್ಕಳಿಂದ ಮೊಬೈಲ್ ದೂರವಿಡಬೇಕು. ಸಾಧ್ಯವಾದಷ್ಟು ಅಜ್ಜ ಅಜ್ಜಿಯಂದಿರ ಬಳಿ ಮಲಗಲು ಬಿಡಬೇಕು. ಮಕ್ಕಳು ಸುಂದರ ಪುಷ್ಪ. ಅದರಲ್ಲಿರುವ ಅಂತರ್ ಸತ್ವವನ್ನು ಪೋಷಕರು ಹಾಗೂ ಶಿಕ್ಷಕರು ಹೊರ ತೆಗೆಯಬೇಕೆಂದು ಸಲಹೆ ನೀಡಿದರು.
ಖ್ಯಾತ ಹಾಸ್ಯ ಕಲಾವಿದೆ ನಯನಾ ಮಾತನಾಡಿ, ಕನ್ನಷ ಭಾಷೆಗೆ ಹೆಚ್ಚು ಮಹತ್ವ ನೀಡುವ ಜತೆಗೆ ಎಲ್ಲಾ ಭಾಷೆಯನ್ನು ಪ್ರೀತಿಸಿಬೇಕು. ಮಕ್ಕಳು ಎಲ್ಲಾ ವಿಚಾರದ ಬಗ್ಗೆ ಪೋಷಕರಲ್ಲಿ ಮುಕ್ತವಾಗಿ ಹೇಳಿಕೊಳ್ಳಬೇಕು. ಹಿರಿಯರಿಗೆ ಗೌರವ ನೀಡಬೇಕು. ತಂದೆ ತಾಯಿಯ ಆಶೀರ್ವಾದ ಪಡೆದು ಮನೆಯಿಂದ ತೆರಳುವ ಅಭ್ಯಾಸ ರೂಡಿಸಿಕೊಳ್ಳಬೇಕೆಂದು ಎಂದು ಹೇಳಿದರು. ಜತೆಗೆ ಹಾಸ್ಯದ ಮೂಲಕ ನೆರೆದಿದ್ದವರನ್ನು ರಂಜಿಸಿದರು.
ಇದೇ ಸಂದರ್ಭದಲ್ಲಿ ಶಾಲೆಯಲ್ಲಿ ಓದಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು, ಸಾಂಸ್ಕೃತಿಕ ಕಾರ್ಯಕ್ರಮ, ಪ್ರತಿಭಾ ಪುರಸ್ಕಾರ ಮತ್ತು ಬಹುಮಾನ ವಿತರಣೆ ನೆರವೇರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂಇಎಸ್ ಶಾಲೆ ಪ್ರಾಂಶುಪಾಲರಾದ ಶ್ರೀಮತಿ ಚಿಂತು ವಹಿಸಿದ್ದರು. ಹರೀಶ್ ಪಿಯು ಕಾಲೇಜಿನ ಮ್ಯಾನೇಜಿಂಗ್ ಟ್ರಸ್ಟಿ ಹರೀಶ್, ಪ್ರಾಂಶುಪಾಲ ವಿ.ವೆಂಕಟೇಶ್ವರರಾವ್ ಉಪಸ್ಥಿತರಿದ್ದರು.



