ಕುರುಬರು ನೀರು ಕೇಳಿದರೆ ಹಾಲೂಣಿಸುವ ಜನಾಂಗ. ನಾಡಿನ ಏಳಿಗೆಗೆ ಸಮಾಜದ ಅನೇಕರು ವೀರತನದಿಂದ ಹೋರಾಡಿದ್ದಾರೆ. ಆ ಸಮಾಜದಲ್ಲಿ ಜನಿಸಿರುವ ನಾವುಗಳು ಎಂದಿಗೂ ಒಗ್ಗಟ್ಟನ್ನು ಪ್ರದರ್ಶಿಸಬೇಕು ಎಂದು ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಕೆ.ಎಸ್.ಶಾಂತೇಗೌಡ ಹೇಳಿದರು.
ಚಿಕ್ಕಮಗಳೂರು ನಗರದ ಕನಕ ಸಮುದಾಯ ಭವನದಲ್ಲಿ ಮಂಗಳವಾರ ಜಿಲ್ಲಾ ಕುರುಬರ ಸಂಘದ 2024-25ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಾದ್ಯಂತ ಕುರುಬ ಸಮಾಜವು ಸಾಮಾಜಿಕ ಕಾರ್ಯಗಳೊಂದಿಗೆ ಜನಾಂಗದ ಅಭಿವೃದ್ಧಿಗೂ ಒ ತ್ತು ನೀಡುತ್ತಿದೆ. ಎಲ್ಲರೂ ಸಂಘಟನಾತ್ಮಕವಾಗಿ ಒಂದಾಗಿ ಸಮುದಾಯದ ಏಳಿಗೆಗೆ ಕೈಜೋಡಿಸಬೇಕು. ಆಗ ಮಾತ್ರ ಕುರುಬ ಸಮಾಜವು ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಗಟ್ಟಿಯಾಗಲು ಸಾಧ್ಯ ಎಂದರು.
ನಗರದ ಸಮೀಪದಲ್ಲಿ ನಿರ್ಮಾಣಗೊಂಡಿರುವ ಕನಕ ಸಮುದಾಯ ಭವನ ನಿರ್ಮಾಣಕ್ಕೆ ಜನಾಂಗದ ಕೊಡುಗೆ ಬಹಳಷ್ಟಿದೆ. ಜೊತೆಗೆ ಜಿಲ್ಲೆಯ ಶಾಸಕರು, ಮಾಜಿ ಶಾಸಕರು ಹಾಗೂ ಎಂಎಲ್ಸಿ ಸದಸ್ಯರು, ಹಾಲಿ, ಮಾಜಿ ಸಚಿವರು ಕೂಡಾ ಅನುದಾನ ಒದಗಿಸಿಕೊಟ್ಟು ಜಿಲ್ಲೆಯ ಕುರುಬ ಸಮಾಜಕ್ಕೆ ಬೆಂಬಲವಾಗಿದ್ದಾರೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಕಳೆದ 2012ನೇ ಸಾಲಿನಲ್ಲಿ ಸಂಘದ ನಿವೇಶನದಲ್ಲಿ ಸುಮಾರು 7 ಕೋಟಿ ರೂ. ವೆಚ್ಚದಲ್ಲಿ ಭವನವನ್ನು ನಿರ್ಮಿಸಿ ಸಾರ್ವಜನಿಕವಾಗಿ ಲೋಕಾರ್ಪಣೆಗೊಳಿಸಿದೆ. ಇನ್ನುಳಿದಂತೆ ಭವನದ ಸುತ್ತಮುತ್ತ ಲು 2 ಕೋಟಿ ರೂ.ವೆಚ್ಚದಲ್ಲಿ ಕಾಂಪೌಂಡ್ ನಿರ್ಮಾಣದ ಅವಶ್ಯವಿದ್ದು ಸದ್ಯದಲ್ಲೇ ಪೂರ್ಣಗೊಳಿಸಲಾಗು ವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಂಘದ ನಿರ್ದೇಶಕಿ ಎ.ವಿ.ಗಾಯತ್ರಿ ಶಾಂತೇಗೌಡ ಮಾತನಾಡಿ ಕುರುಬ ಸಮಾಜ ಅಭಿ ವೃದ್ಧಿಗೆ ತಮ್ಮ ಅವಧಿಯಲ್ಲಿ ಪ್ರದೇಶಾಭೀವೃದ್ದಿಯಿಂದ 25 ಲಕ್ಷ, ಕ್ಷೇತ್ರದ ಶಾಸಕರಿಂದ 25 ಲಕ್ಷ ಸೇರಿದಂತೆ ಇತರೆ ಎಲ್ಲಾ ಜನಾಂಗದ ನಾಯಕರು, ಸಮಾಜದ ಸರ್ಕಾರಿ ನೌಕರರು, ನಾಡಿನ ಸಚಿವರು ಸಹಾಯಹಸ್ತ ದಿಂದ ಭವನ ನಿರ್ಮಾಣಗೊಂಡಿದೆ ಎಂದರು.
ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಕುರುಬರ ಸಂಘದ ವಿಶಾಲವಾದ ನಿವೇಶನದಲ್ಲಿ ಸಮು ದಾಯ ಭವನ ನಿರ್ಮಿಸಿದೆ. ಸಂಘದ ಅಭಿವೃದ್ದಿಗೆ ಅನುಕೂಲವಾಗಲು ಮಳಿಗೆಗಳನ್ನು ತೆರೆದು ಆರ್ಥಿಕ ಶಕ್ತಿ ತುಂಬಲಾಗಿದೆ. ಒಟ್ಟಾರೆ ಭವನದ ನಿರ್ಮಾಣದ ವ್ಯವಸ್ಥೇಯು ಸರ್ವರ ಸಹಕಾರದಿಂದ ನಡೆದಿದ್ದು ಮುಂದಿ ನ ದಿನಗಳಲ್ಲಿ ಸಮಾಜವು ಒಗ್ಗಟ್ಟಿನಿಂದ ಕೂಡಿರಬೇಕು ಎಂದು ಹೇಳಿದರು.
ಜಿಲ್ಲಾ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಹೆಚ್.ಎಸ್.ಪುಟ್ಟೆಗೌಡ, ಕಾರ್ಯದರ್ಶಿ ಕೆ.ವಿ.ಮಂ ಜುನಾಥ್, ಕರ್ನಾಟಕ ಪ್ರ.ಕು. ಸಂಘದ ಉಪಾದ್ಯಕ್ಷೆ ರೇಖಾ ಹುಲಿಯಪ್ಪಗೌಡ ಸದಸ್ಯರುಗಳೊಂದಿಗೆ ಕೆಲವು ವಿಷಯಗಳ ಬಗ್ಗೆ ಚರ್ಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕುರುಬರ ಸಂಘದ ಉಪಾಧ್ಯಕ್ಷರಾದ ಸಿ.ಎಸ್.ರೇವಣ್ಣ, ಕೆ.ಹೆಚ್.ಎ.ಪ್ರಸನ್ನ, ಕಾರ್ಯದರ್ಶಿ ಕೆ.ಎಸ್.ಪುಷ್ಪರಾಜ್, ಸಹ ಕಾರ್ಯದರ್ಶಿ ಎನ್.ಹೆಚ್.ಮೋಹನ್, ಟಿ.ಎಸ್.ಧರ್ಮರಾಜ್, ಖಜಾಂಚಿ ಡಿ.ಎಸ್.ಸಿದ್ದೇಗೌಡ, ನಿರ್ದೇಶಕರುಗಳಾದ ಬಿ.ಟಿ.ಚಂದ್ರಶೇಖರ್, ಡಿ.ಆರ್.ರಾಮು, ಈ.ಆರ್.ಮ ಹೇಶ್, ಎಸ್.ಡಿ.ಚಂದ್ರೇಗೌಡ, ಕೆ.ಸಿ.ಕೆಂಗೇಗೌಡ, ತ್ರಿಭುವನ್, ಹುಲಿಯಪ್ಪಗೌಡ ಮತ್ತಿತರರಿದ್ದರು.



