3Mudigere2A

 

 

ಹಲವಾರು, ಧರ್ಮ ಪರಂಪರೆ ನಾಶವಾಗಿವೆ. ಆದರೆ ಇವತ್ತಿಗೂ ನಾಶವಾಗದ ಏಕೈಕ ಧರ್ಮ, ಪರಂಪರೆ ಸಂಸ್ಕøತಿ  ಉಳಿದಿದ್ದರೆ ಅದು ಭಾರತದ ಹಿಂದೂ ಸನಾತನ ಧರ್ಮ ಮತ್ತು ಸಂಸ್ಕøತಿ ಎಂದು ಬಸವ ಪಟ್ಟಣದ ತೋಟಂದಾರ್ಯ ಮಠದ ಶ್ರೀ ಸ್ವತಂತ್ರ ಬಸವಲಿಂಗ ಶಿವಯೋಗಿ ಸ್ವಾಮೀಜಿ ಹೇಳಿದರು.

ಅವರು ಸೋಮವಾರ ಸಂಜೆ ಮೂಡಿಗೆರೆ ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ಹಿಂದೂ ಸಾಮಾಜೋತ್ಸವ ಆಯೋಜನ ಸಮಿತಿಯಿಂದ ಏರ್ಪಡಿಸಿದ್ದ ಬೃಹತ್ ಹಿಂದೂ ಸಮಾಜೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ, ಆಶಿರ್ವಚನ ನೀಡಿ ಮಾತನಾಡಿದರು. ನಮ್ಮ ದೇಶದಲ್ಲಿ ಎಲ್ಲವೂ ಇದೆ. ಸಾವಿರಾರು ದೈವ, ಮಂದಿರಗಳಿವೆ. ಗಂಗೆ, ಸಿಂಧು, ಹಿಮಾಲಯ ಪರ್ವತವಿದೆ. ನಮ್ಮ ಬದುಕನ್ನು ಹಸನುಗೊಳಿಸಲು ಜ್ಞಾನ ಮಾರ್ಗದ ಬೋಧನೆಗಳಿವೆ.  ಸಾವಿರಾರು ವರ್ಷ ಇತಿಹಾಸವುಳ್ಳ ಘನ ಪರಂಪರೆಯಿದೆ. ಅದನ್ನು ಮುಂದಿನ ಪೀಳಿಗೆಗೆ ಉಳಿಸಿಕೊಳ್ಳಲು ಭಾರತೀಯರಾದ ನಾವೆಲ್ಲರೂ ದಿನದಲ್ಲಿ ಕನಿಷ್ಟ 2 ಗಂಟೆ ದೇಶಕ್ಕಾಗಿ ಬದುಕಬೇಕೆಂದು ಸಲಹೆ ನೀಡಿದರು.

ಜಾತಿ ಗಣತಿ ಅಗತ್ಯವಿರಲಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಠಕ್ಕೆ ಬಿದ್ದು ಗಣತಿ ಮಾಡಿಸಿದ್ದಾರೆ. ಆದರೆ ಬೆಂಗಳೂರು  ಮಹಾನಗರದಲ್ಲಿ 20 ಲಕ್ಷ ಬಾಂಗ್ಲಾ ನುಸುಳುಕೋರರು  ಗಣತಿಯಲ್ಲಿ ಸಿಗಲಿಲ್ಲವೇ? ಅವರಿಂದ ದೇಶಕ್ಕೆ ಅಪಾಯ ಸಂಭವಿಸುವ ಮುನ್ನ  ಬಾಂಗ್ಲಾ ನುಸುಳುಕೋರರನ್ನು ಸ್ಥಳಾಂತರಿಸಬೇಕೆಂದು ಒತ್ತಾಯಿಸಿದರ ಅವರು, ನಾವೆಲ್ಲಾ ಸಂತೋಷ ಹಾಗೂ ಸುರಕ್ಷಿತವಾಗಿ ಬದುಕುತ್ತಿದ್ದರೆ ಅದು  ದೇಶದ ಗಡಿ ಕಾಯುವತ್ತಿರುವ ಸೈನಿಕರಿಂದ ಸಾಧ್ಯವಾಗಿದೆ. ಅವರ ಬೆಂಬಲಕ್ಕೆ ಭಾರತೀಯರೆಲ್ಲರೂ ನಿಲ್ಲಬೇಕಿದೆ ಎಂದು ಹೇಳಿದರು.

ಕಾಸರಗೂಡಿನ ಸಾಮಾಜಿಕ ಕಾರ್ಯಕರ್ತ ನವೀನ್ ಸುಬ್ರಹ್ಮಣ್ಯ ಮಾತನಾಡಿ, ಪ್ರಾಚೀನ ಕಾಲದಿಂದಲೂ ಕೃಷಿ ಸಂಸ್ಕøತಿಯಿಂದಾಗಿ ಈ ನಾಡಿನ ಮಣ್ಣನ್ನು ಭೂಮಿ ತಾಯಿ ಎಂದು ಆರಾಧಿಸಲಾಗುತ್ತಿದೆ.  ವಿದೇಶಿಯರ ದಾಳಿಯಿಂದಾಗಿ ಎಲ್ಲರಲ್ಲೂ ಈ ನೆಲ ತಾಯಿ ಎಂಬ ಭಾವನೆ ಮೂಡಿಸಿದೆ. ನಮ್ಮ ನೆಲ ಹಾಗೂ ದೇಶದ ಸ್ವಾತಂತ್ರಕ್ಕಾಗಿ ಪ್ರಾಣ ತ್ಯಾಗ ಮಾಡಿದ ಸ್ವಾತಂತ್ರ ಹೋರಾಟಗಾರರು ವಂದೇ ಮಾತರಂ, ಭಾರತ್ ಮಾತಾಕಿ ಜೈ ಎಂದು ಹೇಳಿರುವುದನ್ನು ನಿಷೇಧಿಸುವ ಶಕ್ತಿಗಳು ಈಗಲೂ ಇದ್ದಾರೆ. ಹಾಗಾಗಿ ಸಂಘಟಿತರಾಗಿ ದೇಶ ಕಟ್ಟುವ ಕೆಲಸ ಆಗಬೇಕಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉದ್ಯಮಿ, ಕಾಫಿ ಬೆಳೆಗಾರರಾದ ಕೆ.ಮಂಚೇಗೌಡ ವಹಿಸಿದ್ದರು. ಆಯೋಜನ ಸಮಿತಿ ಅಧ್ಯಕ್ಷ ಬಿ.ಎನ್.ಜಯಂತ್, ನಿವೃತ್ತ ಶಿಕ್ಷಕಿ ಎಂ.ಜಿ.ನಾಗರತ್ನ ಮತ್ತಿತರರಿದ್ದರು.

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದಲ್ಲಿ ಬೃಹತ್ ಶೋಭಾಯಾತ್ರೆ ಹಮ್ಮಿಕೊಳ್ಳಲಾಯಿತು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ