ಸರ್ಕಾರಿ ಶಾಲೆಗಳ ಉಳಿವಿಗಾಗಿ ಮತ್ತು ವಿದ್ಯರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಅನುಕೂಲವಾಗಲು ಲಯನ್ಸ್ ಕ್ಲಬ್ ಗೋಣಿಬೀಡು ಮಾತೃಶ್ರೀ ವತಿಯಿಂದ ಮೂಡಿಗೆರೆ ತಾಲ್ಲೂಕು ಗೋಣಿಬೀಡು ಸಮೀಪದ ಕಲ್ಲುಗುಡ್ಡ ಸರ್ಕಾರಿ ಪ್ರಾಥಮಿಕ ಶಾಲೆಗೆ ಆಫೀಸ್ ಚೇರ್ ಮತ್ತು ಶಾಲಾ ವಿದ್ಯಾರ್ಥಿಗಳಿಗೆ ಪುಸ್ತಕ ಮತ್ತು ಲೇಖನಿಗಳನ್ನು ಲಯನ್ಸ್ ಅಧ್ಯಕ್ಷ ನವೀನ್ ಕುಮಾರ್ ಅವರು ವಿತರಣೆ ಮಾಡಿದರು.
ನವೀನ್ ಕುಮಾರ್ ಶಾಲಾ ವಿದ್ಯಾರ್ಥಿಗಳಿಗೆ ಲೇಖನಿ ಮತ್ತು ಆಫೀಸ್ ಚೇರ್ ವಿತರಣೆ ಮಾಡಿ ಮಾತನಾಡಿ ನಮ್ಮ ಲಯನ್ಸ್ ಕ್ಲಬ್ ಹಲವು ವರ್ಷಗಳಿಂದ ಶಿಕ್ಷಣ, ಅರೋಗ್ಯ, ಪರಿಸರ ಜಾಗೃತಿ ಕಾರ್ಯಕ್ರಮ ಹಾಗೂ ರಕ್ತದಾನದಂತ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಮಾಜ ಸೇವೆಯಲ್ಲಿ ತೋಡಾಗಿಸಿಕೊಳ್ಳುವದರ ಮೂಲಕ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಪುಸ್ತಕ ಮತ್ತು ಲೇಖನಿಗಳನ್ನು ವಿತರಣೆ ಮಾಡಿ ವಿದ್ಯಾರ್ಥಿಗಳ ಕಲಿಕೆಗೆ ಪ್ರೋತ್ಸಾಹಿಸಿಲಾಗುತ್ತಿದೆ ಎಂದರು.
ಶಾಲಾ ಮುಖ್ಯ ಶಿಕ್ಷಕರಾದ ಪ್ರಕಾಶ್ ಮಾತನಾಡಿ ಶಾಲೆಯ ವಿದ್ಯಾರ್ಥಿಗಳ ಕಲಿಕೆಯ ಅನುಕೂಲವಾಗುವ ನಿಟ್ಟಿನಲ್ಲಿ ಪುಸ್ತಕ ಮತ್ತು ಲೇಖನಿ ಹಾಗೂ ಶಾಲೆಗೆ ಆಫೀಸ್ ಚೀರ್ ವಿತರಣೆ ಮಾಡಿದ್ದು ಶಾಲೆಯ ಶೈಕ್ಷಣಿಕ ಬೆಳವಣಿಗೆಗೆ ಗೋಣಿಬೀಡು ಲಯನ್ಸ್ ಮಾತೃಶ್ರೀ ಸಂಸ್ಥೆಯು ಕೊಡುಗೆ ನೀಡಿದ್ದು ಸಂಸ್ಥೆಯನ್ನು ಅಭಿನಂದಿಸಿದರು.
ಈ ಕಾರ್ಯಕ್ರಮದಲ್ಲಿ ವಲಯ ಅಧ್ಯಕ್ಷರಾದ ರಾಮ್ ಪ್ರಸಾದ್, ಉಪಾಧ್ಯಕ್ಷ ನಾಗರಾಜ್, ಕೋಶಾಧಿಕಾರಿ ಸುನೀತಾ, ಕುಮಾರ್,ವಿಶ್ವಾಸ್ ಮರೆಬೈಲ್, ಶಾಲಾ ಸಮಿತಿ ಮಂಡಳಿ ಸದಸ್ಯರು ಸಹ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.



