ಆಲ್ದೂರು ಸಮೀಪದ ಸತ್ತಿಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಸದಸ್ಯರುಗಳ ಆಡಳಿತಾವಧಿ ಪೂರ್ಣಗೊಳ್ಳಲು ಕೆಲವೇ ದಿನಗಳು ಬಾಕಿಯಿದ್ದು, ಸಹಕಾರ ನೀಡಿದ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಇಲಾಖೆಯ ಅಧಿಕಾರಿಗಳನ್ನು ಪಂಚಾಯತಿ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
ಪಂಚಾಯತಿ ಅಧ್ಯಕ್ಷ ರಾಮಪ್ಪ ಮಾತನಾಡಿ ಪ್ರಜಾಪ್ರಭುತ್ವದಲ್ಲಿ ಅಧಿಕಾರ ವಿಕೇಂದ್ರೀಕರಣ ಮತ್ತು ಆಡಳಿತದ ಪ್ರಾಥಮಿಕ ಹಂತವಾಗಿರುವ ಗ್ರಾಮಗಳ ಅಭಿವೃದ್ಧಿಗಾಗಿ ಪಂಚಾಯಿತಿಗಳನ್ನು ರೂಪಿಸಲಾಗಿದ್ದು ಐದು ವರ್ಷಗಳ ಅಧಿಕಾರ ಅವಧಿಯಲ್ಲಿ ಸರ್ವ ರೀತಿಯಲ್ಲೂ ಸಹಕರಿಸಿದ ಸರ್ಕಾರಿ ಶಿಕ್ಷಣ ಇಲಾಖೆ ಮತ್ತು ಖಾಸಗಿ ಶಾಲೆಯ ಮುಖ್ಯ ಶಿಕ್ಷಕರು, ಆರೋಗ್ಯ,ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು, ಗುತ್ತಿಗೆದಾರರು, ಕಂದಾಯ ಇಲಾಖೆ ಪೊಲೀಸ್ ಇಲಾಖೆ ಮೆಸ್ಕಾಂ ಇಲಾಖೆ ಅರಣ್ಯ ಇಲಾಖೆ, ಸ್ವಸಹಾಯ ಸಂಘಗಳ ಒಕ್ಕೂಟ, ಹೀಗೆ ಎಲ್ಲಾ ಇಲಾಖೆಗಳ ಸಹಕಾರವಿದ್ದು, ಸಹಕರಿಸಿದವರನ್ನೆಲ್ಲರನ್ನು ಪಂಚಾಯಿತಿಯ ಉಪಾಧ್ಯಕ್ಷರು ಪಿಡಿಓ ಮತ್ತು ಸರ್ವ ಸದಸ್ಯರುಗಳ ಪರವಾಗಿ ಕೃತಜ್ಞತೆ ಅರ್ಪಿಸುವ ಉದ್ದೇಶದಿಂದ ಅಭಿನಂದನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಮುಂಬರುವ ಚುನಾವಣೆ ಬದುಕ ಬರುವಂತಹ ಹೊಸ ಸದಸ್ಯರು ಮತ್ತು ಪದಾಧಿಕಾರಿಗಳಿಗೂ ಎಲ್ಲಾ ಇಲಾಖೆಯವರು ಇದೇ ರೀತಿ ಸಹಕಾರ ನೀಡುವಂತೆ ಅವರು ಮನವಿ ಮಾಡಿದರು.

ಪಂಚಾಯಿತಿ ಸದಸ್ಯ ಧ್ರುವ ಕುಮಾರ್, ತಮ್ಮ ತಮ್ಮ ಅಧಿಕಾರ ಅವಧಿಯಲ್ಲಿ ಸರ್ವ ಸದಸ್ಯರುಗಳು ವಾರ್ಡ್ಗಳ ಸಮಸ್ಯೆಗಳನ್ನು ಸಮಗ್ರವಾಗಿ ನಿಭಾಯಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಾಥಮಿಕ ಶಾಲೆಗಳ ವಲಯ ಸಮೂಹ ಸಂಪನ್ಮೂಲ ವ್ಯಕ್ತಿ ಜಯಪ್ಪ ನಾಯಕ್ ಮತ್ತು ಯಲಗುಡಿಗೆ ಪ್ರಾಥಮಿಕ ಶಾಲಾ ಶಿಕ್ಷಕಿ, ಮತ್ತು ಬೇರೆಡೆಗೆ ವರ್ಗಾವಣೆ ಹೊಂದಿದ್ದ ಪಿಡಿಓ ಪರಶುರಾಮ್, ಪಂಚಾಯಿತಿಯ ಈ ನಡೆ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.ಉಪಾಧ್ಯಕ್ಷೆ ತಸ್ಲೀಮಾ ನಾಜ್,
ಪಿಡಿಒ ಸುರಯ್ಯ ಬಾನು, ಕಾರ್ಯದರ್ಶಿ ಮೈಮುನ, ಪಂಚಾಯಿತಿ ಸದಸ್ಯರಾದ ದ್ರುವ ಕುಮಾರ್, ಗುರುವಪ್ಪ, ಅತಿಪುರ್ ರೆಹಮಾನ್, ಸುಂದರೇಶ್, ಕವಿತಾ ,ರಮ್ಯಾ, ಹೊನ್ನಮ್ಮ, ಪದ್ಮಶ್ರೀ, ಶಾಂತಾಪರಮೇಶ್, ಗ್ರಾಮ ಲೆಕ್ಕಿಗರಾದ ಸಂದೀಪ್, ಸಿಬ್ಬಂದಿಗಳಾದ ಸಂಶೀರ್, ನಾಗರಾಜ್, ಅಜಿತ್, ಬಾಬುಲ್, ಭಾಗವಹಿಸಿದ್ದರು.



