chethan ahimsa 2

 

 

ಆಲ್ದೂರು ಸಮೀಪದ ಸತ್ತಿಹಳ್ಳಿ ಪಂಚಾಯಿತಿ ವ್ಯಾಪ್ತಿಯ ಬಾಳೆಹಳ್ಳಿ ಹೊಸಪೇಟೆ ಗ್ರಾಮದಲ್ಲಿ  ಜೈ ಭೀಮ್ ಗೆಳೆಯರ ಬಳಗದ ವತಿಯಿಂದ 77ನೇ ಸಂವಿಧಾನ ದಿನಾಚರಣೆ ಅಂಗವಾಗಿ ಭಾರತ ಸಂವಿಧಾನ ಕುರಿತ ವಿಚಾರಗೋಷ್ಠಿ ಆಯೋಜಿಸಲಾಗಿತ್ತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಚೇತನ್ ಅಹಿಂಸಾ ಶೋಷಿತರಿಗೆ ನ್ಯಾಯ ಒದಗಿಸಲು ಚಳುವಳಿಗಳು ಅತ್ಯಗತ್ಯ, ಅಂಬೇಡ್ಕರ್ ಶಿಕ್ಷಣ, ಸಂಘಟನೆ ,ಹೋರಾಟ ವೆಂಬ ಪದಗಳೊಂದಿಗೆ ಚಳುವಳಿಗೆ ಅಡಿಪಾಯ ಹಾಕಿ ಅದರ ಮುಂದುವರಿದ ಬಹು ಮುಖ್ಯ ಅಂಶಗಳಾಗಿ  ಜನಜಾಗೃತಿ, ಸಮಾಜ ಸೇವೆ ,ಪರಿವರ್ತನೆ ಎಂಬ ತತ್ವಗಳ ಮೂಲಕ ಸಮಾಜವನ್ನು ನಿರ್ಮಿಸುವ ಸಂವಿಧಾನದ ಮೂಲ ಆಶಯ ಮಹತ್ವಗಳನ್ನು ಹಂಚುವ ಕರೆಯನ್ನು ನೀಡಿದ್ದಾರೆ.

 

ಅಂಬೇಡ್ಕರ್ ವಿಚಾರ ಧಾರೆಗಳು ಸಂವಿಧಾನದ ಕುರಿತು ಹೆಚ್ಚಿನ ಸಂಖ್ಯೆಯಲ್ಲಿ ವಿಚಾರಗೋಷ್ಠಿ ಸಂವಾದಗಳು ತರಬೇತಿ ಕಾರ್ಯಗಳು ಆಯೋಜಿಸಬೇಕು. ಜೈ ಭೀಮ್ ಗೆಳೆಯರ ಬಳಗ ಎರಡು ವರ್ಷಗಳಿಗೊಮ್ಮೆ ವಿಚಾರಗೋಷ್ಠಿ ಏರ್ಪಡಿಸಿ ಬೆಳವಣಿಗೆಯ ಅದ್ಭುತ ಪರಿಕಲ್ಪನೆಯಾಗಿದ್ದು, ಇಂತಹ ಕಾರ್ಯಕ್ರಮಗಳಿಂದ ರಕ್ಷಣಾತ್ಮಕವಾಗಿ ಹೋರಾಟಗಳನ್ನು ಆಯೋಜಿಸಿ ಜನಪರ ಕಾನೂನುಗಳನ್ನು ಬೆಂಬಲಿಸಿ ಜನವಿರೋಧಿ ಕಾನೂನುಗಳನ್ನು ಸಾಂವಿಧಾನಿಕವಾಗಿ ತಡೆ ಹಿಡಿಯುವುದು ಹೇಗೆ ಎಂಬುದನ್ನು ಅರಿತುಕೊಳ್ಳಬಹುದಾಗಿದೆ ತಲೆ ತಲೆಮಾರುಗಳಿಂದ ಇರುವಂತಹ ಅಸಮಾನತೆ ಅನ್ಯಾಯಗಳಿಂದ ಶೋಷಿತರಿಗೆ ನ್ಯಾಯ ಒದಗಿಸಲು ಇಂತಹ ಚಳುವಳಿಗಳು ಅತ್ಯಗತ್ಯ ಎಂದರು.

ರಾಜ್ಯ ಬೌದ್ಧ ಸಮಾಜದ ಅಧ್ಯಕ್ಷ ಹ.ರಾ.ಮಹೇಶ್, 80ರ ದಶಕಗಳಿಂದಲೂ ಸಹಸ್ರಾರು ಸಂಖ್ಯೆಯಲ್ಲಿ ದಲಿತ ಚಳುವಳಿಗಳು ಹೋರಾಟಗಳು ನಡೆಯುತ್ತಾ ಬಂದಿದ್ದು ವಿಚಾರಗೋಷ್ಠಿಗಳು ಇನ್ನಷ್ಟು ಸಂಖ್ಯೆಯಲ್ಲಿ ಆಯೋಜನೆಗೊಳ್ಳುತ್ತಾ ಬಂದಿದೆ ಕಾರ್ಯಕ್ರಮದ ಅದ್ದೂರಿ ಆಚರಣೆ ಗಿಂತ ನಿಜವಾದ ಪಾಲ್ಗೊಳ್ಳುವಿಕೆ ಮತ್ತು ನಾವು ಏನನ್ನು ಗ್ರಹಿಸಿದ್ದೇವೆ, ಅದರ ಮೂಲಕ ನಾಳೆಯಿಂದಲೇ ಎಲ್ಲಿ ಪಡೆದಂತಹ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಇನ್ನು ಹಲವರಿಗೆ ಹೇಗೆ ವಿಷಯಗಳನ್ನು ಪಸರಿಸುತ್ತೇವೆ  ಹಿಂದಿನಿಂದಲೂ ಮಾಡಿಕೊಂಡು ಬಂದಿದ್ದ ತಪ್ಪುಗಳನ್ನು ಇನ್ನು ಮುಂದೆ ಮಾಡಬಾರದೆಂಬ ಮನಸ್ಥಿತಿಯನ್ನು ರೂಡಿಸಿಕೊಂಡು ದೃಢಸಂಕಲ್ಪ ಮಾಡದಿದ್ದರೆ ಕಾರ್ಯಕ್ರಮ

ಆಯೋಜಕರ ಪರಿಶ್ರಮ ವ್ಯರ್ಥ ಮತ್ತು ಕೇವಲ ಮನೋರಂಜನೆ ಗೆ ಸೀಮಿತವಾಗುತ್ತದೆ ಇಂದಿನಿಂದಲೂ ಜನವರಿ 26 ಗಣರಾಜ್ಯೋತ್ಸವ ಎಂದು ಮಾತ್ರ ಆಚರಣೆ ಮಾಡಲಾಗುತ್ತಿತ್ತು ಎಲ್ಲಿಯೂ ಕೂಡ ಸಂವಿಧಾನ ದಿನಾಚರಣೆ ಬಿ ಆರ್ ಅಂಬೇಡ್ಕರ್ರವರ ವಿಚಾರಧಾರೆಗಳ ಪಸರಿಸುವ ಯಾವುದೇ ಕಾರ್ಯಕ್ರಮಗಳು ಭಾಷಣಗಳು ಅಂಬೇಡ್ಕರ್ ಸಂವಿಧಾನದ ಬಗೆಯಲ್ಲಿ ಆ ಯೋಜನೆ ಗೊಳ್ಳುತ್ತಿರಲಿಲ್ಲ ಇತ್ತೀಚಿನ ದಿನಗಳಲ್ಲಿ ಉತ್ತಮ ವಿಚಾರದಲ್ಲಿ ಕಾರ್ಯಕ್ರಮಗಳು ನಡೆಯುತ್ತಿರುವುದು ಸಂತಸ ನೀಡುತ್ತಿದೆ ಇದು ಬದಲಾವಣೆಯ ಪರ್ವ ಸಂವಿಧಾನದ ಮಹತ್ವವನ್ನು ಪ್ರತಿಯೊಬ್ಬ ಭಾರತೀಯ ಪೌರರು ಹರಿಯಲು ಶ್ರಮಿಸೋಣ ಜಾಗೃತಿ ಮೂಡಿಸೋಣ ಎಂದು ಕರೆ ನೀಡಿದರು.

ವಿಚಾರಗೋಷ್ಠಿಯಲ್ಲಿ ಜೈ ಭೀಮ್ ಗೆಳೆಯರ ಬಳಗದ ಅಧ್ಯಕ್ಷರಾದ ಪೂರ್ಣೇಶ್ ಎಸ್ .ಅಧ್ಯಕ್ಷತೆ ವಹಿಸಿದ್ದರು. ಹೊಸಪೇಟೆ ಗ್ರಾಮದ ಹಿರಿಯ ಹೋರಾಟಗಾರ ಎಂ.ಬಾಬು ಪ್ರಾಸ್ತಾವಿಕವಾಗಿ ಮಾತನಾಡಿದರು.

ಕೆ. ಕುಮಾರ್ ಸಮಾಜ ಸೇವಾ ಬೆಂಗಳೂರು. ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಪ್ಪ ಹೆಚ್ ಜೆ, ಮಾಜಿ ಶಾಸಕರುಗಳಾದ ಎಂಪಿ. ಕುಮಾರಸ್ವಾಮಿ,ಬಿಬಿ. ನಿಂಗಯ್ಯ, ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ರೆಹಮಾನ್ ಎ ಆರ್,ಹರಿಣಿ ಮಹೇಶ್,ಜಿನ್ನಪ್ಪ, ಎಂ ಕೃಷ್ಣಪ್ಪ,ಡಾ.ಪ್ರೇಮ್ ಕುಮಾರ್ , ಡಾ.ಶಿವ ಪ್ರಸಾದ್,ಮಾಜಿ ಸೈನಿಕರು ಕೊರಗ ಪೂಜಾರಿ,ಭೀಮ್ ಆರ್ಮಿ ಜಿಲ್ಲಾಧ್ಯಕ್ಷ ಗಿರೀಶ್ ದೊಡ್ಡ ಮಾಗರವಳ್ಳಿ,ಸಂಜೀವ ಹೆಚ್ ಎಸ್, ಡಾ. ಬಿಆರ್ ಅಂಬೇಡ್ಕರ್ ಗೂಡ್ಸ್ ಚಾಲಕರ ಮತ್ತು ಮಾಲೀಕರ ಸಂಘ, ಜೈ ಭೀಮ್ ಗೆಳೆಯರ ಬಳಗದ ಉಪಾಧ್ಯಕ್ಷ ಸಂದೀಪ್,ಮಾಜಿ ಅಧ್ಯಕ್ಷ ಪ್ರಕಾಶ್, ಪದಾಧಿಕಾರಿಗಳು ಸದಸ್ಯರು ಇದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ