February 8, 2026

 

 

ಐಸಿಸಿ ಅಂಡರ್‌-19 ವಿಶ್ವಕಪ್‌ 2026ರ ಟ್ರೋಫಿಗೆ ಭಾರತದ ಯುವ ಪಡೆ ಮುತ್ತಿಟ್ಟಿದೆ.‌ ಹರಾರೆಯಲ್ಲಿ ಶುಕ್ರವಾರ ನಡೆದ ಫೈನಲ್‌ ಪಂದ್ಯದಲ್ಲಿ ವೈಭವ್‌ ಸೂರ್ಯವಂಶಿ ಸ್ಫೋಟಕ ಶತಕ ಹಾಗೂ ಸಂಘಟಿತ ಬೌಲಿಂಗ್‌ ನೆರವಿನಿಂದ ಇಂಗ್ಲೆಂಡ್‌ ವಿರುದ್ಧ ಭಾರತ 100 ರನ್‌ಗಳ ಜಯಗಳಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ ವಿಶ್ವಕಪ್‌ ಇತಿಹಾಸದಲ್ಲೇ ದಾಖಲೆಯ 411 ರನ್‌ ಪೇರಿಸಿತು. ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ ಇಂಗ್ಲೆಂಡ್‌ 311 ರನ್‌ಗಳಿಗೆ ಆಲೌಟ್‌ ಆಗಿ ಸೋಲೊಪ್ಪಿಕೊಂಡಿತು.

ಇಂಗ್ಲೆಂಡ್‌   ಉತ್ತಮ ಆರಂಭವನ್ನೇ ಪಡೆಯಿತು. ಓಪನರ್‌ ಬೆನ್ ಡಾಕಿನ್ಸ್ 56 ಬಾಲ್‌ಗೆ 7 ಫೋರ್‌, 2 ಸಿಕ್ಸರ್‌ನೊಂದಿಗೆ 66 ರನ್‌ ಗಳಿಸಿದರು. ಬೆನ್ ಮೇಯಸ್ 45, ಕ್ಯಾಪ್ಟನ್‌ ಥಾಮಸ್ ರೆವ್ 35 ರನ್‌ಗಳಿಸಿ ಭರವಸೆ ಮೂಡಿಸಿದರು. ಟೀಂ ಇಂಡಿಯಾ ಬೌಲರ್‌ಗಳ ದಾಳಿಗೆ ಕ್ರೀಸ್‌ನಲ್ಲಿ ಹೆಚ್ಚು ಸಮಯ ನಿಲ್ಲಲು ಆಂಗ್ಲ ಬ್ಯಾಟರ್‌ಗಳು ವಿಫಲರಾದರು.

ನಂತರ ಬಂದ ಕ್ಯಾಲೆಬ್ ಫಾಲ್ಕನರ್ ಸಿಕ್ಸರ್‌, ಫೋರ್‌ಗಳ ಸ್ಫೋಟಕ ಬ್ಯಾಟಿಂಗ್‌ ಮಾಡಿ 67 ಬಾಲ್‌ಗೆ 115 ರನ್‌ (9 ಫೋರ್‌, 7 ಸಿಕ್ಸರ್‌) ಗಳಿಸಿದರು. ಆದರೆ, ಫಾಲ್ಕನರ್‌ಗೆ ಉಳಿದವರು ಸಾಥ್‌ ನೀಡಲಿಲ್ಲ. ಆಂಗ್ಲರನ್ನು ಆಲೌಟ್‌ ಮಾಡಿ ಭಾರತ ವಿಶ್ವಕಪ್‌ ಗೆದ್ದಿತು.

ಟೀಂ ಇಂಡಿಯಾ ಪರ ಆರ್.ಎಸ್. ಅಂಬರೀಶ್ 3 ವಿಕೆಟ್‌ ಕಿತ್ತು ಗಮನ ಸೆಳೆದರು. ದೀಪೇಶ್ ದೇವೇಂದ್ರನ್, ಕನಿಷ್ಕ್ ಚೌಹಾಣ್ ತಲಾ 2 ಹಾಗೂ ಖಿಲನ್ ಪಟೇಲ್, ಆಯುಷ್ ಮ್ಹಾತ್ರೆ ತಲಾ 1 ವಿಕೆಟ್‌ ಪಡೆದರು.

ಇದಕ್ಕೂ ಮೊದಲು ಟೀಂ ಇಂಡಿಯಾ ಅಬ್ಬರದ ಬ್ಯಾಟಿಂಗ್‌ ನಡೆಸಿತು. 14 ವರ್ಷದ ವೈಭವ್ ಸೂರ್ಯವಂಶಿ 80 ಎಸೆತಗಳಲ್ಲಿ 175 ರನ್ ಗಳಿಸಿ ಭಾರತವನ್ನು 411 ರನ್‌ಗಳ ಬೃಹತ್ ಮೊತ್ತಕ್ಕೆ ಮುನ್ನಡೆಸಿದರು. ಭಾರತದ ಈ ಸ್ಕೋರ್ U19 ವಿಶ್ವಕಪ್ ನಾಕೌಟ್ ಪಂದ್ಯದಲ್ಲಿ ದಾಖಲಾದ ಅತ್ಯಧಿಕ ಮೊತ್ತವಾಗಿದ್ದು, 2016 ರ ದಾಖಲೆಯನ್ನು ಮುರಿದಿದೆ. ಸೂರ್ಯವಂಶಿ U19 ವಿಶ್ವಕಪ್ ಫೈನಲ್‌ನಲ್ಲಿ ಅತಿ ವೇಗದ ಶತಕದ ದಾಖಲೆಯನ್ನು ಸಹ ಬ್ರೇಕ್‌ ಮಾಡಿದರು. ಫೈನಲ್ ಪಂದ್ಯದಲ್ಲಿ 150 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಭಾರತದ ನಾಯಕ ಆಯುಷ್ ಮ್ಹಾತ್ರೆ (51 ಎಸೆತಗಳಲ್ಲಿ 53), ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಅಭಿಗ್ಯಾನ್ ಕುಂದು (31 ಎಸೆತಗಳಲ್ಲಿ 40) ಮತ್ತು ಆಲ್‌ರೌಂಡರ್ ಕನಿಷ್ಕ್ ಚೌಹಾಣ್ (20 ಎಸೆತಗಳಲ್ಲಿ 37) ಕೂಡ ಪ್ರಮುಖ ಕೊಡುಗೆ ನೀಡಿದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ