February 10, 2026

 

 

ಸಾಮಾಜಿಕ ಸೇವಾ ಕಾರ್ಯಗಳಲ್ಲಿ ಜೆಸಿಐ ಬಣಕಲ್ ವಿಸ್ಮಯ ಮಂಚೂಣಿಯಲ್ಲಿದೆ’ಎಂದು ಜೇಸಿಐ ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷ ನವೀನ್ ಲಾಯ್ಡ್ ಮಿಸ್ಕಿತ್ ಹೇಳಿದರು. ಅವರು  ಬಣಕಲ್ ಜೇಸಿ ಭವನದಲ್ಲಿ ನಡೆದ  ಜೆಸಿಐ ಬಣಕಲ್ ವಿಸ್ಮಯದ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಕಳೆದ 15ವರ್ಷಗಳಿಂದ ಜೆಸಿಐ ಬಣಕಲ್ ವಿಸ್ಮಯ ಸಮಾಜಮುಖಿ ಕೆಲಸ ಮಾಡಿಕೊಂಡು ಬರುತ್ತಿದೆ.ಜೊತೆಗೆ ಸಂಸ್ಥೆ ವಿವಿಧ  6ಘಟಕಗಳನ್ನು ಹುಟ್ಟು ಹಾಕಿರುವುದು ಹೆಮ್ಮೆಯ ವಿಷಯವಾಗಿದೆ. ಪರಿಸರ ಜಾಗೃತಿ,ಯುವ ಸಬಲೀಕರಣ, ವ್ಯಕ್ತಿತ್ವ ವಿಕಸನಕ್ಕೆ ಜೆಸಿಐ ಉತ್ತಮ ವೇದಿಕೆಯಾಗಿದೆ’ ಎಂದರು.

ಮೂಡಿಗೆರೆ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಕೃಷ್ಣಮೂರ್ತಿ ಮಾತನಾಡಿ’ ಕೃಷಿ ಇಲಾಖೆಯಲ್ಲಿ ಸೇವೆ ನೀಡುತ್ತಿರುವುದರಿಂದ ಕೃಷಿ ಸಂಬಂಧಿತ ವಿಷಯದಲ್ಲಿ ಜೆಸಿಐ ಸಂಸ್ಥೆಗೆ ಯಾವುದೇ ಸಹಾಯ ಬೇಕಿದ್ದರೆ ನಾನು ಸಂಪೂರ್ಣವಾಗಿ ಸಹಕಾರ ನೀಡಲು  ಸಿದ್ದನಿದ್ದೇನೆ’ ಎಂದರು.

ನಿಕಟಪೂರ್ವ ಅಧ್ಯಕ್ಷ ಸುರೇಂದ್ರ ಕೋಳೂರು ಮಾತನಾಡಿ’ನನ್ನ ಅಧಿಕಾರಾವಧಿಯಲ್ಲಿ ಎಲ್ಲ ಸದಸ್ಯರು ಉತ್ತಮ ಮಾರ್ಗದರ್ಶನ ಕೊಟ್ಟು ಸಂಸ್ಥೆಯು ಸಾಮಾಜಿಕವಾಗಿ ಬೆಳೆಯುವಲ್ಲಿ ಸಹಕರಿಸಿದ್ದಾರೆ’ಎಂದರು.

ನೂತನ ಅಧ್ಯಕ್ಷ  ರಂಜಿತ್ ಕನ್ನಗೆರೆ ಅಧಿಕಾರ ಸ್ವೀಕರಿಸಿ  ಮಾತನಾಡಿ’ ಸರ್ವರ ಸಹಕಾರದೊಂದಿಗೆ 2026 ರಲ್ಲಿ ಯಶಸ್ವಿ ಸಮಾಜಮುಖಿ ಕೆಲಸಗಳನ್ನು ಮಾಡಿ ಹೊಸ ಘಟಕಗಳನ್ನು ಸ್ಥಾಪಿಸುವುದಾಗಿ ಭರವಸೆ ನೀಡಿದರು.

ಸ್ಥಾಪಕ ಅಧ್ಯಕ್ಷ ಸುರೇಶ್ ಎಸ್.ಶೆಟ್ಟಿ ಮಾತನಾಡಿ’ ಜೆಸಿಐ ಸಂಸ್ಥೆ ದಾನಿಗಳ ಸಹಕಾರದಿಂದ  ಬೆಳೆದು, ಇಂದು ನೂತನ ಜೇಸಿ ಭವನ ನಿರ್ಮಾಣವಾಗಿದೆ.ಭವಿಷ್ಯದಲ್ಲಿ ನಡೆದಷ್ಟು ದಾರಿಯಿದ್ದೇ ಇದೆ.ಪಡೆಯುವಷ್ಟು ಭಾಗ್ಯ ಬಂದೇ ಬರುತ್ತದೆ.ಜೇಸಿರೇಟ್ ಕೂಡ ಉತ್ತಮ ಕಾರ್ಯ ನಿರ್ವಹಿಸಿಕೊಂಡು ಬರುತ್ತಿದೆ.ನಮ್ಮ ತಾಳ್ಮೆಯಿಂದ ಜೆಸಿಐ ದ್ವಜವನ್ನು ಎತ್ತಿ ಹಿಡಿಯೋಣ’ಎಂದರು.

ನಿಕಟ ಪೂರ್ವ ಅಧ್ಯಕ್ಷ ಸುರೇಂದ್ರ ಕೋಳೂರು ನೂತನ ಅಧ್ಯಕ್ಷ ರಂಜಿತ್ ಕನ್ನಗೆರೆ ಅವರಿಗೆ ಅಧಿಕಾರ ಹಸ್ತಾಂತರಿಸಿದರು.

ಸಮಾರಂಭದಲ್ಲಿ ವಲಯ ಅಧ್ಯಕ್ಷ ಪ್ರಜ್ವಲ್ ಜೈನ್, ಉಪಾಧ್ಯಕ್ಷ ಜಗತ್ ಬಿ.ಎಂ, ಕಾರ್ಯದರ್ಶಿ ಗಗನ್ ಕೋಳೂರು, ನಿಯೋಜಿತ ಕಾರ್ಯದರ್ಶಿ  ಸುಜೀತ್ ದೊಡ್ಡನಂದಿ, ಪೂರ್ವಾಧ್ಯಕ್ಷರುಗಳಾದ ರವಿಶಂಕರ್, ಎಚ್.ಎಂ.ಕೃಷ್ಣೇಗೌಡ, ಡಿ.ಟಿ.ನವೀನ್ ಕುಮಾರ್, ಮದನ್ ಹೆಗಡೆ, ಎಂ.ಆರ್.ಹರ್ಷ, ಶರತ್ ಫಲ್ಗುಣಿ, ಜೇಸಿರೇಟ್ ಗಳಾದ ರೂಪ, ತೀರ್ಥ ಹಾಗೂ ಇತರ  ಪದಾಧಿಕಾರಿಗಳು ಇದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ