ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವು ಬಸವ ಮತ್ತು ಅಂಬೇಡ್ಕರ್ ವಸತಿ ಯೋಜನೆಯಲ್ಲಿ ಕಳೆದ ಮೂರು ವರ್ಷಗಳಿಂದ ಮನೆಯನ್ನು ನೀಡದೆ ದೀನ ದಲಿತರು ಬಡವರನ್ನು ಸೂರಿನಿಂದ ವಂಚಿಸಲಾಗುತ್ತಿದೆ ಎಂದು ಜಿಲ್ಲಾ ದಿಶಾ ಸಮಿತಿ ಸದಸ್ಯ, ಬಿ.ಜೆ.ಪಿ. ಮುಖಂಡ ಮನೋಜ್ ಹಳೆಕೋಟೆ ಆರೋಪಿಸಿದ್ದಾರೆ.
ಅವರು ಈ ಬಗ್ಗೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿ ಈ ಹಿಂದಿನ ಸರ್ಕಾರಗಳು ರಾಜ್ಯದ ಬಡವರು. ದಲಿತರು. ಹಿಂದುಳಿದವರ. ವಸತಿಗಾಗಿ ಬಸವ ಹಾಗೂ ಅಂಬೇಡ್ಕರ್ ವಸತಿ ಯೋಜನೆಯನ್ನು ಜಾರಿಗೆ ತಂದಿದ್ದು. ಒಂದು ಗ್ರಾಮ ಪಂಚಾಯಿತಿಗಳಿಗೆ ಕನಿಷ್ಠ 50ರಿಂದ 100 ಮನೆಗಳನ್ನು ವರ್ಷಂ ಪ್ರತಿ ನೀಡಲಾಗುತ್ತಿತ್ತು. ಇದರಿಂದ ಆ ಗ್ರಾಮದಲ್ಲಿ ಇರುವ ದಲಿತರು ಬಡವರು ಸೂರನ್ನು ಹೊಂದಿ ಸ್ವಂತ ಮನೆ ಹೊಂದಲು ಸಾಧ್ಯವಾಗುತ್ತಿತ್ತು. ಆದರೆ ಈಗಿನ ಕಾಂಗ್ರೆಸ್ ಸರ್ಕಾರವು ಅಧಿಕಾರಿಕ್ಕೆ ಬಂದ ನಂತರ ಒಂದು ಮನೆಯನ್ನು ನೀಡಿಲ್ಲ. ಗ್ರಾಮಗಳಲ್ಲಿ ವಿಭಾಗವಾದ ಕುಟುಂಬದಿಂದ ಜೋಪಡಿಗಳು ತಲೆ ಎತ್ತುತ್ತಿವೆ. ಇವರುಗಳು ಮಳೆ. ಚಳಿ. ಹುಳ. ಹಪ್ಪಟೆಗಳಿಂದ ಭಾಧಿತರಾಗುತ್ತಿದ್ದು. ಮಕ್ಕಳ ವಿದ್ಯಾಭ್ಯಾಸಕ್ಕು ತೊಂದರೆ ಉಂಟಾಗುತ್ತಿದೆ.
ಕಾಂಗ್ರೇಸ್ ಕೇವಲ ಬಾಯಲ್ಲಿ ಮಾತ್ರ ಸಂವಿಧಾನ, ಗಾಂಧೀಜಿ, ಅಂಬೆಡ್ಕರ್ ಹೆಸರನ್ನ ಹೇಳಿಕೊಳ್ಳುತ್ತಿದ್ದು. ಭ್ರಷ್ಟಾಚಾರವೆ ನಿಮ್ಮ ಸಾಧನೆ. ಅತಿವೃಷ್ಟಿಯಿಂದ ರಾಜ್ಯದಲ್ಲಿ ಸಾವಿರಾರು ಕೋಟಿ ನಷ್ಟ ಉಂಟಾದರೂ ರೈತರಿಗೆ ಒಂದು ಪೈಸೆ ಹಣವನ್ನು ನೀಡಿಲ್ಲ. ಈ ಹಿಂದೆ ಸರ್ಕಾರ 10 ಹೆಚ್ ಪಿ ಒಳಗಿನ ಕೃಷಿ ಮೋಟಾರ್ ಗಳಿಗೆ ಉಚಿತ ವಿದ್ಯುತ್ ನೀಡಿತ್ತು ಆದರೆ ನಿಮ್ಮ ಸರ್ಕಾರ ಗ್ಯಾರಂಟಿ ಹೆಸರಲ್ಲಿ ರೈತರ ಪಂಪ್ಸೆಟ್ ಬಿಲ್ಲನ್ನು ಮೂರು ಪಟ್ಟು ಹೆಚ್ಚು ವಸೂಲಿ ಮಾಡಲು ಹೊರಟಿದ್ದೀರಿ. ಬಹು ಸಂಖ್ಯಾತರ ವಿರುದ್ಧ ಆಡಳಿತ ನಡೆಸುತ್ತಿರುವುದೇ ನಿಮ್ಮ ಸಾಧನೆಯಾಗಿದೆ ಎಂದು ದೂರಿದ್ದಾರೆ.



