ಐ ಜೆ ಎಂ (ಇಂಟರ್ನ್ಯಾಷನಲ್ ಜಸ್ಟಿಸ್ ಮಿಷನ್) ಮತ್ತು ವಿಕಸನ ಸಂಸ್ಥೆ ಹಾಗೂ ಡಿ ಎಸ್ ಬಿಳಿ ಗೌಡ ಪ್ರಥಮ ದರ್ಜೆ ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ ಮೂಡಿಗೆರೆಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಜೀತಪದ್ಧತಿ ನಿರ್ಮೂಲನ ದಿನವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿಕಾಸನ ಸಂಸ್ಥೆಯ ವಕೀಲರಾದ ವಿಭಾ ವರ್ಗಿಸ್ ರವರು ಜೀತ ಪದ್ಧತಿ ನಿರ್ಮೂಲನ ದಿನದ ಮಹತ್ವವನ್ನ ತಿಳಿಸಿದರು 1976 ಫೆಬ್ರವರಿ 9ರಂದು ಜೀತ ಪದ್ದತಿ ಕಾಯ್ದೆ ಜಾರಿಗೆ ಬಂದಿದ್ದು ಇಂದಿಗೆ 50 ವರ್ಷಗಳು ಕಳೆದಿವೆ ಆದರೂ ಇಂದಿಗೂ ಜಿತ ಪದ್ಧತಿ ಜೀವಂತವಾಗಿದೆ ಅದನ್ನು ಬುಡ ಸಮೇತ ಕಿತ್ತು ಹಾಕುವುದು ನಮ್ಮೆಲ್ಲರ ಕರ್ತವ್ಯ ಮತ್ತು ಜವಾಬ್ದಾರಿ ಎಂದರು ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ನವೀನ್ ಆನೆದಿಬ್ಬ ರವರು ಜೀತ ಪದ್ಧತಿ ನಿರ್ಮೂಲನ ದಿನದ ಅಂಗವಾಗಿ ಪ್ರತಿಜ್ಞಾವಿಧಿ ಬೋಧಿಸಿದರು ಸಮಾಜದಲ್ಲಿ ಬಡವರು ಶೋಷಿತ ವರ್ಗದವರು ಹೆಚ್ಚು ಜೀತಾ ಪದ್ಧತಿಗಳಿಗೆ ತುತ್ತಾಗಿದ್ದು ಇಂದಿನ ತಲೆಮಾರಿನಲ್ಲೂ ಇಂತಹ ನಿದರ್ಶನವನ್ನು ನೋಡಲು ಸಾಧ್ಯವಾಗಿದೆ ಜೀತ ಪದ್ಧತಿ ಎಂದರೆ ಸರಪಳಿಗಳಿಂದ ಕಟ್ಟಿ ಹಾಕಿರುವ ಚಿತ್ರಣ ಮಾತ್ರವಲ್ಲ ವಿವಿಧ ನೂತನ ಆಯಾಮಗಳಲ್ಲಿ ಜೀತ ಪದ್ಧತಿ ಜೀವಂತವಾಗಿದೆ ಜೀತ ಪದ್ಧತಿಗೆ ಒಳಗಾಗಿರುವವರನ್ನು ಗುರುತಿಸಿ ಅವರಿಗೆ ನೆರವನ್ನು ನೀಡುವುದು ಅವಶ್ಯಕವಾಗಿದೆ ಈ ನಿಟ್ಟಿನಲ್ಲಿ ಸಂಸ್ಥೆ ಕೆಲಸ ಮಾಡುತ್ತಿದ್ದು ನಾವೆಲ್ಲರೂ ಸಂಸ್ಥೆಯೊಂದಿಗೆ ಕೈಜೋಡಿಸಬೇಕಾಗಿದೆ ಎಂದರು.
ವಿ ಎಂ ಪಿ ಎಂ ಟ್ರಸ್ಟ್ ನ ಅಧ್ಯಕ್ಷರಾದ ವಿಪಿ ನಾರಾಯಣ್ ಮಾತನಾಡಿ ಜೀತ ಪದ್ಧತಿ ಬಾಲಕಾರ್ಮಿಕರು ಮಾನವ ಕಳ್ಳ ಸಾಗಾಣಿಕೆ ಇಂತಹ ಪ್ರಕರಣಗಳನ್ನು ನೀವು ಗಮನಿಸಿದ್ದಲ್ಲಿ ಉಚಿತ ದೂರವಾಣಿ ಸಂಖ್ಯೆಗೆ ಕರೆ ಮಾಡಿ ತಿಳಿಸಿದರೆ ಅವರು ರಕ್ಷಿಸಲ್ಪಡುತ್ತಾರೆ ಅವರಿಗೆ ಸೂಕ್ತ ರಕ್ಷಣೆಯನ್ನು ಒದಗಿಸಿ ಪುನರ್ವಸತಿಯನ್ನು ಕಲ್ಪಿಸಲು ಸಹಾಯವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ನೌಶದ್ ಅಧ್ಯಾಪಕರಾದ ವಿನಯ್ ಕುಮಾರ್. ನವೀನ್, ಕಾಲೇಜು ವಿದ್ಯಾರ್ಥಿಗಳು ಇದ್ದರು




