February 13, 2026

 

 

ಕಪುಚಿನ್ ಕೃಷಿಕ ಸೇವಾ ಕೇಂದ್ರ ಮತ್ತು ವಿಮುಕ್ತಿ ಚಾರಿಟೇಬಲ್ ಟ್ರಸ್ಟ್ ಬಣಕಲ್ ಇವರ ಸಂಯುಕ್ತ ಆಶ್ರಯದಲ್ಲಿ ಮೂಡಿಗೆರೆ ತಾಲೂಕಿನ ಚಿನ್ನಿಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಂದ್ರಾಪುರ ಗ್ರಾಮದ ಸಮುದಾಯ ಭವನದಲ್ಲಿ  ಟೈಲರಿಂಗ್ ತರಬೇತಿ ಸಮಾರೋಪ ಸಮಾರಂಭ ಮತ್ತು ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ವಿಮುಕ್ತಿ ಚಾರಿಟೇಬಲ್ ಟ್ರಸ್ಟ್ ನ ನಿರ್ದೇಶಕರಾದ  ಪಾ.ಅರುಣ್ ಲೋಬೊ ರವರು ದೀಪ ಬೆಳಗಿಸಿ  ಮಾತನಾಡಿದರು ಕೌಶಲ್ಯಗಳನು ಕಲಿತುಕೊಂಡರೆ ಅಭಿವೃದ್ಧಿಯತ್ತ ಪ್ರಯಾಣಿಸಲು ಸಾಧ್ಯವಾಗುತ್ತದೆ  ಮುಂದಿನ ಜೀವನ ಸುಗಮವಾಗಿರಲು ಆರ್ಥಿಕತೆ  ಬಹಳ ಮುಖ್ಯ ಜೀವನದಲ್ಲಿ ಕಷ್ಟಗಳು ಮತ್ತು ಮಾಡುವ ಕೆಲಸ ಕಾರ್ಯಗಳಲ್ಲಿ ತೊಂದರೆಗಳು ಉಂಟಾದಾಗ ಕೌಶಲ್ಯ  ಕೈ ಹಿಡಿಯುತ್ತವೆ ಎಂದರು.

ಸಂಪನ್ಮೂಲ ವ್ಯಕ್ತಿ ನವೀನ್ ಆನೆದಿಬ್ಬ ಮಾತನಾಡಿ ಮಹಿಳೆಯರು ಸ್ವಾವಲಂಬನೆಯಿಂದ ಬದುಕುವುದುಕ್ಕೆ  ವಿವಿಧ ಕೌಶಲ್ಯಗಳು  ಕುಟುಂಬದ ನಿರ್ವಹಣೆಗೆ ಪ್ರಮುಖ ಪಾತ್ರ ವಹಿಸುತ್ತದೆ ಹಾಗಾಗಿ ಮಹಿಳೆಯರು ಕೌಶಲ್ಯ ಅಭಿವೃದ್ಧಿ ಕಡೆ ಹೆಚ್ಚು  ಗಮನ ಕೊಡುತ್ತಿರುವುದರಿಂದ ಮುಂದಿನ ಭವಿಷ್ಯ ಉಜ್ವಲವಾಗಿರುತ್ತದೆ ಎಂದು ಅಭಿಪ್ರಾಯಪಟ್ಟರು

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯದ ಪ್ರತಿಮ ರವರು ಮಾತನಾಡಿ ಟೈಲರಿಂಗ್ ಕಲಿತಂತಹ ಶಿಬಿರಾರ್ಥಿಗಳೆಲ್ಲರಿಗು  ಅಭಿನಂದನೆಗಳು ಮುಂದಿನ ಹಂತಕ್ಕೂ ನೀವೆಲ್ಲರೂ ಪ್ರಯತ್ನಿಸಿ ಹಂತ ಹಂತವಾಗಿ ಯಶಸ್ಸನ್ನು ಕಾಣಲು ಮುಂದಾಗಬೇಕು ಮತ್ತು ಇದಕ್ಕೆ ಬೇಕಾದ ಪೂರಕ ಸಹಕಾರಗಳನ್ನು ಗ್ರಾಮ ಪಂಚಾಯಿತಿ ಮತ್ತು ವಿವಿಧ ಇಲಾಖೆಗಳ ಯೋಜನೆಗಳ ಅಡಿಯಲ್ಲಿ ಪಡೆದುಕೊಂಡು ಸಬಲರಾಗಬೇಕು ಎಂದರು

ಕಾರ್ಯಕ್ರಮದಲ್ಲಿ ಚಿನ್ನಿಗ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಲಕ್ಷ್ಮಿ, ಸದಸ್ಯರಾದ ನಾಗಮ್ಮ  . ಗ್ರಾಮಸ್ಥರಾದ ಚಂದ್ರಶೇಖರ್  .ಸತೀಶ್. ಸಾಮಾಜಿಕ ಆರೋಗ್ಯ ಕಾರ್ಯಕರ್ತರಾದ ನಿಂಗರಾಜು ಟೈಲರಿಂಗ್ ಶಿಕ್ಷಕರಾದ ಸುರೇಶ್ ಮತ್ತು ಮಂಜುಳಾ .ಶಶಿಕಲಾ ಸುಧಾ ವಿಮುಕ್ತಿ ಸಂಸ್ಥೆಯ  ವಿಂದ್ಯ ಗೀತಾ ಕೆ ಆರ್ ಟೈಲರಿಂಗ್ ಕಲಿಕಾ ಶಿಬಿರಾರ್ಥಿಗಳು ಮತ್ತು ಗ್ರಾಮಸ್ಥರು ಹಿರಿಯರು ಭಾಗವಹಿಸಿದ್ದರು

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ