ಮೂಡಿಗೆರೆಯಲ್ಲಿ ಹಿರಿಯ ಪತ್ರ ಬರಹಗಾರರಾಗಿ ಬಹಳ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಜಿ. ಶೇಷಾದ್ರಿ (ದಿ ಅನಂತಸುಬ್ಬರಾವ್ ರ ಮಗ) ರವರು ನಿಧನರಾಗಿದ್ದಾರೆ.
ಕೆಲ ವರ್ಷಗಳಿಂದ ಬೆಂಗಳೂರಿನಲ್ಲಿ ತಮ್ಮ ಪುತ್ರಿಯ ಮನೆಯಲ್ಲಿ ನೆಲೆಸಿದ್ದ ಶೇಷಾದ್ರಿಯವರು ದಿನಾಂಕ: 10-02-2026 ರಂದು ಬೆಂಗಳೂರಿನಲ್ಲಿ ದೈವಾಧೀನರಾಗಿರುತ್ತಾರೆ. ಅವರ ಅಂತ್ಯ ಸಂಸ್ಕಾರವನ್ನು ಬೆಂಗಳೂರಿನಲ್ಲೇ ನೆರವೇರಿಸಲಾಗಿದ್ದಾರೆ.
ಶೇಷಾದ್ರಿಯವರು ಪತ್ರ ಬರಹಗಾರರಾಗಿದ್ದರು. ಲಯನ್ಸ್, ಬ್ರಾಹ್ಮಣ ಸಭಾ ಮೊದಲಾದ ಸಂಘಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದರು. ಮೂಡಿಗೆರೆ ಪಟ್ಟಣದ ಪೊಲೀಸ್ ಠಾಣೆ ಪಕ್ಕದಲ್ಲಿರುವ ಎ.ಜೆ. ಕಾಂಪ್ಲೆಕ್ಸ್ ನ ಮಾಲೀಕರಾಗಿದ್ದರು.
ಶೇಷಾದ್ರಿಯವರ ನಿಧನಕ್ಕೆ ಮೂಡಿಗೆರೆ ವಿವಿಧ ಸಂಘಸಂಸ್ಥೆಗಳು, ಅವರ ಒಡನಾಡಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ



