ಪಾದಯಾತ್ರೆ ದೇಹಕ್ಕೆ ಶ್ರಮವೆನಿಸಿದರೂ ಆರೋಗ್ಯ, ದೈಹಿಕವಾಗಿ ಸದೃಢವಾಗಲು ಹಾಗೂ ಮನಸ್ಸಿಗೆ ಶಾಂತಿ ನೀಡುವ ಪವಿತ್ರ ಪಯಣವಾಗಿದೆ ಎಂದು ಕರುನಾಡು ರಕ್ಷಣ ವೇದಿಕೆ ರಾಜ್ಯಾಧ್ಯಕ್ಷ ರುದ್ರೇಶ್ ಕಹಳೆ ಹೇಳಿದರು.
ಅವರು ಬುಧವಾರ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಹಾಗೂ ಚಾರ್ಮಾಡಿಯ ಶ್ರೀ ಅಣ್ಣಪ್ಪಸ್ವಾಮಿ ದೇವಸ್ಥಾನದ ಬಳಿ ಧರ್ಮಸ್ಥಳಕ್ಕೆ ತೆರಳುತ್ತಿರುವ ಶಿವರಾತ್ರಿ ಪಾದಯಾತ್ರಿಗಳಿಗೆ ಉಪಹಾರ ನೀಡಿ ಮಾತನಾಡಿದರು. ಸೇವೆ ಮಾಡುವ ಭಾಗ್ಯ ಎಲ್ಲರಿಗೂ ಸಿಗುವುದಿಲ್ಲ. ಅಂತಹ ಅವಕಾಶ ಸಿಕ್ಕಾಗ ಕಳೆದುಕೊಳ್ಳಬಾರದು. ಶಿವರಾತ್ರಿ ಸಂದರ್ಭದಲ್ಲಿ ಭಕ್ತಿ, ಶ್ರದ್ಧೆಯಿಂದ ಧರ್ಮಸ್ಥಳ ಕ್ಷೇತ್ರಕ್ಕೆ ಪಾದಯಾತ್ರೆ ಮಾಡುವ ಭಕ್ತಿರಿಗೆ ಉಪಹಾರದ ವ್ಯವಸ್ಥೆ ಮಾಡುವುದು ಪುಣ್ಯದ ಕೆಲಸ. ಈ ರಸ್ತೆಯಲ್ಲಿ ಅಧಿಕ ಸಂಖ್ಯೆಯಲ್ಲಿ ಪಾದಯಾತ್ರಿಗಳು ತೆರಳುವುದರಿಂದ ವಿವಿಧ ಸಂಘ ಸಂಸ್ಥೆಗಳಿಂದ ಅನ್ನದಾನ ಸೇರಿದಂತೆ ಹಣ್ಣು, ಮಜ್ಜಿಗೆ ಸೇರಿದಂತೆ ಇತರೇ ಸೌಲಭ್ಯ ಸಿಗುವುದರಿಂದ ಭಕ್ತರಿಗೆ ಹೊಸ ಶಕ್ತಿ, ಉತ್ಸಾಹ ದೊರೆಯುತ್ತದೆ ಎಂದು ಹೇಳಿದರು.
ಮುಖಂಡರಾದ ಸಂಜಯ್ ಕೊಟ್ಟಿಗೆಹಾರ, ಜೈಪಾಲ್, ಪ್ರದೀಪ್, ಅಭಿಷೇಕ್, ರಾಜೇಂದ್ರ, ರಾಜಶೇಖರ, ಸುನೀಲ್ ಮತ್ತಿತರಿದದ್ದರು




