ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಸಿ ದೇಶವ್ಯಾಪ್ತಿ ಕೈಗೊಂಡಿರುವ ಮುಷ್ಕರಕ್ಕೆ ನಮ್ಮ ಸಂಘಟನೆ ಬೆಂಬಲ ನೀಡಿದೆ ಎಂದು ಅಂಗನವಾಡಿ ಸಂಘಟನೆಯ ಮೂಡಿಗೆರೆ ತಾಲೂಕು ಅಧ್ಯಕ್ಷೆ ಕೆ.ಆರ್.ಶೈಲಾ ನಾರಾಯಣಗೌಡ ಹೇಳಿದರು.
ಅವರು ಗುರುವಾರ ಎಐಟಿಯುಸಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಸಂಘಟನೆಯಿಂದ ತಾಲೂಕು ಕಚೇರಿ ಎದುರು ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದರು.
ಇತ್ತೀಚೆಗೆ ನಡೆದ ಕೇಂದ್ರ ಬಜೆಟ್‍ನಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಗೌರವಧನ ಏರಿಕೆ ಮಾಡಿಲ್ಲ. ಅನುದಾನ ಬಿಡಗಡೆಗೊಳಿಸದೇ ಮಹಿಳಾ ಮತ್ತು ಮಕ್ಕಳ ಇಲಾಖೆಯನ್ನು ನಿರ್ಲಕ್ಷಿಸಲಾಗಿದೆ. ಟಿಎಚ್‍ಆರ್ ಮತ್ತು ಎಫ್‍ಆರ್‍ಎಸ್ ಸರಳೀಕರಣಗೊಳಿಸಿಲ್ಲ. ನಮ್ಮ ಎಲ್ಲಾ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದರು. ಬಳಿಕ ಶಿರಸ್ತೇದಾರ್ ಸುರೇಂದ್ರ ಬಾಬು ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಾಂಚಿತ, ಸುಮತಿ, ಸತ್ಯ, ರೇಣುಕಾ, ಶಿಲ್ಪಾ, ವೀಣಾ, ಸೌಮ್ಯ, ಮಹಾಲಕ್ಷ್ಮಿ, ಸುಮಿತ್ರಾ, ರಂಜಿತಾ, ಚೈತ್ರ, ಗೀತಾ ಮತ್ತಿತರರಿದ್ದರು.



