February 13, 2026

 

 

ಮೂಡಿಗೆರೆ ; ಕಾರ್ಮಿಕರ ಮತ್ತು ರೈತ ವಿರೋಧಿ ಕಾಯಿದೆ ವಿರೋಧಿಸಿ ವಿವಿಧ ಸಂಘಟನೆಯಿಂದ ಪ್ರತಿಭಟನೆ

ಕಾರ್ಮಿಕರ ಮತ್ತು ರೈತ ವಿರೋಧಿ ಕಾಯಿದೆ ರದ್ದುಪಡಿಸಬೇಕೆಂದು ಆಗ್ರಹಿಸಿ ದೇಶಾಧ್ಯಂತ ನಡೆಸುತ್ತಿರುವ ಮುಷ್ಕರಕ್ಕೆ ಬೆಂಬಲಿಸಿ ಇಲ್ಲಿನ ವಿವಿಧ ಕಾರ್ಮಿಕರ ಹಾಗೂ ರೈತ ಸಂಘಟನೆ ಮುಖಂಡರು ಗುರುವಾರ ಮೂಡಿಗೆರೆ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಸಿಪಿಐಎಂಎಲ್ ರಾಜ್ಯ ಕಾರ್ಯದರ್ಶಿ ಬಿ.ರುದ್ರಯ್ಯ ಮಾತನಾಡಿ, ದೇಶದ ಸಂಪತ್ತನ್ನು ಮಾರುವ ದೃಷ್ಟಿಯಿಂದ ಕೇಂದ್ರದ ಎನ್‍ಡಿಎ ಸರಕಾರ ವಿದೇಶಿ ಬಂಡವಾಳಶಾಹಿ, ಕಾರ್ಪೋರೇಟರ್ ಪರವಾಗಿ ಕೆಲಸ ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಅಮೇರಿಕಾದ ಅಧ್ಯಕ್ಷ ಟ್ರಂಪ್ ಮಾತು ಕೇಳಿಕೊಂಡು  ದೇಶವನ್ನೇ ಗುಲಾಮ ಸ್ಥಿತಿಗೆ ಕೊಂಡೊಯ್ಯುತ್ತಿದ್ದಾರೆ. ದೇಶದ ಕಾರ್ಮಿಕರು, ಕೈಗಾರಿಕೆ ಭೂಮಿ ಸೇರಿದಂತೆ ಎಲ್ಲಾ ಸಂಪತ್ತನ್ನು ಮಾರುವ ಮೂಲಕ ಭಾರತಾಂಬೆಯನ್ನು ತಕ್ಕಡಿಯಲ್ಲಿಟ್ಟಿದ್ದಾರೆ. ಭಾರತ್ ಮಾತಾಕಿ ಜೈ ಎನ್ನುತ್ತಾ, ದೇಶ ಹಾಗೂ ಹಿಂದೂ ಎಂದು ಬಾಯಿ ಬಡಿದುಕೊಳ್ಳುವವರಿಗೆ ನಿಜವಾಗಿಯೂ ದೇಶದ ಮೇಲೆ ಅಭಿಮಾನವಿದ್ದರೆ ದೇಶ ಉಳಿಸುವ ಕಾರ್ಯಕ್ಕೆ  ಮುಂದಾಗಬೇಕೆಂದು ಒತ್ತಾಯಿಸಿದರು.

ಟಿಯುಸಿಐ ಜಿಲ್ಲಾಧ್ಯಕ್ಷ ಕೆ.ಕೆ.ಕೃಷ್ಣಪ್ಪ ಮಾತನಾಡಿ, ಕಾರ್ಮಿಕರ ಪರವಾಗಿದ್ದ 44 ಕಾಯಿದೆ ರದ್ದುಗೊಳಿಸಿ, ಕಾರ್ಮಿಕರ ವಿರೋಧಿಯಾಗಿರುವ 4 ಕಾರ್ಮಿಕ ಸಂಹಿತೆ ಹಾಗೂ ರೈತ ವಿರೋಧಿ ಕಾಯಿದೆ ಜಾರಿಮಾಡಿದ್ದರಿಂದ ಇಂದು ದೇಶಾಧ್ಯಂತ 400ಕ್ಕೂ ಅಧಿಕ ಕಾರ್ಮಿಕ ಸಂಘಟನೆಗಳು, 569 ರೈತ ಸಂಘಟನೆಗಳು ಮುಷ್ಕರ ನಡೆಸುತ್ತಿದೆ. ಇದಕ್ಕೆ ಎಲ್ಲಾ ವರ್ಗದ ಕಾರ್ಮಿಕರು ಬೆಂಬಲ ಸೂಚಿಸಿದ್ದಾರೆ. ಜತೆಗೆ ನಮ್ಮ ಹಕ್ಕು ಈಡೇರಿಸದಿದ್ದರೆ ಮುಂದಿನ ದಿನದಲ್ಲಿ ಕೇಂದ್ರ ಸರಕಾರವನ್ನು ನಡುಗಿಸುವ ಕಾರ್ಯಕ್ಕೆ ಎಲ್ಲಾ ಕಾರ್ಮಿಕರು ಮುಂದಾಗಬೇಕಿದೆ ಎಂದು ಹೇಳಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಎಂ.ಡಿ.ಶಂಕರ್, ಟಿಯುಸಿಐ ರಾಜ್ಯ ಸಮಿತಿ ಸದಸ್ಯ ವಿಜಯ್, ಜಿಲ್ಲಾ ಸಮಿತಿಯ ಉಮೇಶ್, ಸಿಪಿಐಎಂಎಲ್ ಜಿಲ್ಲಾ ಕಾರ್ಯದರ್ಶಿ ಸಂದೀಪ್, ಡಿಎಸ್‍ಎಸ್ ಅಂಬೇಡ್ಕರ್ ಧ್ವನಿ ರಾಜ್ಯ ಸಮಿತಿ ಸದಸ್ಯೆ ಆಶಾ ಸಂತೋಷ್, ಮುಖಂಡರಾದ ಹರೀಶ್ ನಲ್ಕೆ, ಶೇಖರ್ ಹೊಸಳ್ಳಿ ಜೈಕುಮಾರ್ ಹಾದಿಗೆ, ವೀಣಾ, ಸುರೇಂದ್ರ ಹಾಂದಿ ಮತ್ತಿತರರಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ