February 13, 2026

 

 

ಬೆಳೆಗಾರರನ್ನು ಕಾಡುತ್ತಿರುವ ಮಾನವ- ವನ್ಯಜೀವಿ ಸಂಘರ್ಷ ಹಾಗೂ ಬೆಳೆಗಾರರ ಕೃಷಿ ಸಾಲದ ಮೇಲೆ ಸರ್ಫೇಸಿ ಕಾಯ್ದೆ ಹೇರಿಕೆ ಮುಂತಾದ ಗಂಭೀರ ಸಮಸ್ಯೆಗಳ ಪರಿಹಾರಕ್ಕಾಗಿ ಕರ್ನಾಟಕ ಗ್ರೋಯರ್ಸ್ ಫೆಡರೇಶನ್ ನಿಯೋಗದಿಂದ ದೆಹಲಿಯಲ್ಲಿ ಮಾನ್ಯ ಸಂಸದರು – ಕೇಂದ್ರ ಸಚಿವರು ಹಾಗೂ ಉನ್ನತ ಅಧಿಕಾರಿಗಳ ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ.

ಚಿಕ್ಕಮಗಳೂರು – ಉಡುಪಿ ಲೋಕಸಭಾ ಕ್ಷೇತ್ರದ ಸಂಸದರಾದ  ಕೋಟ ಶ್ರೀನಿವಾಸ ಪೂಜಾರಿ ಯವರ ಮಾರ್ಗದರ್ಶನದಲ್ಲಿ ಕೆಜಿಫ್ ಅಧ್ಯಕ್ಷರಾದ ಹಳಸೆ ಶಿವಣ್ಣನವರ ನಾಯಕತ್ವದ ನಿಯೋಗದಿಂದ ಕೇಂದ್ರ ಅರಣ್ಯ- ಪರಿಸರ-ಜೀವಿಶಾಸ್ತ್ರ ಸಚಿವರಾದ  ಭೂಪೇಂದ್ರ ಯಾದವ್ ರವರನ್ನು ಭೇಟಿ ಮಾಡಿ ಅವರ ಸೂಚನೆಯಂತೆ ಪರಿಸರ ಸಚಿವಾಲಯದ ಹೆಚ್ಚುವರಿ ಮಹಾನಿರ್ದೇಶಕ (ಪ್ರಾಜೆಕ್ಟ್ ಎಲಿಫೆಂಟ್) ರಾದ  ರಮೇಶ್ ಕೆ ಪಾಂಡೆ  ಅವರನ್ನು ಭೇಟಿ ಮಾಡಿ ಮಾಹಿತಿ ವಿನಿಮಯ ಮಾಡಿಕೊಳ್ಳಲಾಯಿತು. ಮೇ ತಿಂಗಳ ಮೂರನೇ ವಾರದಲ್ಲಿ ಬೆಂಗಳೂರಿನಲ್ಲಿ ಕೆಜಿಎಫ್ ಪದಾಧಿಕಾರಿಗಳನ್ನು ಒಳಗೊಂಡಂತೆ ಕೇಂದ್ರ/ರಾಜ್ಯ ಸರಕಾರಗಳ ನಡುವೆ ಸಮನ್ವಯ ಸಭೆ ನಡೆಸುವ ಭರವಸೆ ನೀಡಲಾಗಿದೆ.

ಬೆಂಗಳೂರು ಸಂಸದರಾದ ಡಾ. ಸಿ.ಎನ್. ಮಂಜುನಾಥ್ ರವರನ್ನು ಭೇಟಿ ಮಾಡಿ ಚರ್ಚೆ ನಡೆಸಲಾಗಿದೆ.

 

ಕೇಂದ್ರ ಕೈಗಾರಿಕೆ ಹಾಗೂ ಉಕ್ಕು ಸಚಿವರಾದ  ಹೆಚ್ ಡಿ ಕುಮಾರಸ್ವಾಮಿಯವರನ್ನು  ಭೇಟಿ ಮಾಡಿ ಆನೆ-ಮಾನವ ಸಂಘರ್ಷ ಹಾಗೂ ಸರ್ಫೇಸಿ ಕಾಯ್ದೆ ಕುರಿತಾದ ಸುದೀರ್ಘ ಚರ್ಚೆ ನಡೆಸಲಾಯಿತು.  ಕುಮಾರಸ್ವಾಮಿಯವರು ಕೇಂದ್ರ ಪರಿಸರ ಹಾಗೂ ಅರಣ್ಯ ಖಾತೆ ಸಚಿವರ ಜೊತೆ ಆನೆ – ಮಾನವ ಸಂಘರ್ಷ ಕುರಿತು ಈಗಾಗಲೇ ನಾವು ಚರ್ಚಿಸಿದ್ದು ಆದಷ್ಟು ಶೀಘ್ರವಾಗಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿರುವುದಾಗಿ ತಿಳಿಸಿರುತ್ತಾರೆ. ಸರ್ಫೇಸಿ ಕಾಯ್ದೆ ವಿಚಾರವಾಗಿ ಕೇಂದ್ರ ಹಣಕಾಸು ಸಚಿವರ ಜೊತೆ ತಾವು ಚರ್ಚಿಸಲು ಸಮಯ ನಿಗದಿ ಮಾಡಿದ್ದು … ಕೆಜಿಎಫ್ ನಿಯೋಗ ಈಗ ದೆಹಲಿಯಲ್ಲಿರುವ ಮಾಜಿ ಪ್ರಧಾನಮಂತ್ರಿಗಳು ಹಾಗೂ ಹಾಲಿ ರಾಜ್ಯಸಭಾ ಸದಸ್ಯರಾದ   ಹೆಚ್ ಡಿ ದೇವೇಗೌಡರನ್ನು ಸಂಸದರಾದ  ಶ್ರೀನಿವಾಸ ಪೂಜಾರಿಯವರ ನೇತೃತ್ವದಲ್ಲಿ ಭೇಟಿ ಮಾಡಿ ಸರ್ಫೇಸಿ ಕಾಯ್ದೆ ವಿಚಾರವಾಗಿ ಅವರ ಮೂಲಕ ಕೇಂದ್ರ ಹಣಕಾಸು ಸಚಿವರನ್ನು ಭೇಟಿ ಮಾಡಿ ಚರ್ಚಿಸಲಾಗಿದೆ.

ಕೇಂದ್ರ ವಾಣಿಜ್ಯ ಸಚಿವಾಲಯದ ಹಿರಿಯ   ಅಧಿಕಾರಿ ಸುಮಿತ್  ರವರನ್ನು ಭೇಟಿ ಮಾಡಿ ಕಾಫಿ ಉದ್ದಿಮೆಯಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಸ್ಟಾರ್ಟ್ಅಪ್ ಗಳಿಗೆ ಪೂರಕವಾಗಿ ನೂತನ ಆಲೋಚನೆಗಳ ಜಾರಿಗಾಗಿ ಯೋಜನೆ ರೂಪಿಸುವ ಕುರಿತು ಚರ್ಚಿಸಲಾಯಿತು.

ಕೆಜಿಎಫ್ ನಿಯೋಗದಲ್ಲಿ ಅಧ್ಯಕ್ಷ    ಹಳಸೆ ಶಿವಣ್ಣ. ಉಪಾಧ್ಯಕ್ಷ   ಕೆ ಕೆ ವಿಶ್ವನಾಥ್, ಚಿಕ್ಕಮಗಳೂರು ಜಿಲ್ಲಾ ಬೆಳೆಗಾರರ ಸಂಘದ ಅಧ್ಯಕ್ಷ   ಕೆ ಯು ರತೀಶ್ . ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ಖಜಾಂಚಿ ಎಂ ಜೆ ಸಚಿನ್ ಮತ್ತು ಮೂಡಿಗೆರೆ ತಾಲ್ಲೂಕು ಬೆಳೆಗಾರರ ಸಂಘದ ಗೌರವ ಕಾರ್ಯದರ್ಶಿ ಕೆ ಡಿ ಮನೋಹರ್ ಇದ್ದರು.

Leave a Reply

Your email address will not be published. Required fields are marked *

Related News

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ