ತಾಯಿ ಮಾತೆ ಮರಿಯಮ್ಮನವರು ದೇವರಿಗೆ ತೆರೆದ ಹೃದಯ ಮತ್ತು ಪರಿಪೂರ್ಣ ಸ್ವೀಕಾರದ ತಾಯಿಯಾಗಿದ್ದಾರೆ. ಅವರ ಆದರ್ಶ ನಮಗೆ ಪ್ರೇರಣೆಯಾಗಿದೆ’ ಎಂದು ಚಿಕ್ಕಮಗಳೂರು ಗುರುಶ್ರೇಷ್ಠ ಫಾ.ಎಲಿಯಾಸ್ ಸಿಕ್ವೇರಾ ಹೇಳಿದರು.
ಅವರು ಗುರುವಾರ ಸಂಜೆ ಬಣಕಲ್ ಬಾಲಿಕಾ ಮರಿಯ ಚರ್ಚ್ ವಾರ್ಷಿಕೋತ್ಸವದ ಬಲಿಪೂಜೆ ಅರ್ಪಿಸಿ ಮಾತನಾಡಿದರು. ಮರಿಯಮ್ಮನವರು ಕುಟುಂಬದಲ್ಲಿ ಪ್ರೀತಿ, ಐಕ್ಯತೆ ಹಾಗೂ ಸಾಮರಸ್ಯದ ಸಂಕೇತವಾಗಿದ್ದಾರೆ. ಕ್ರೈಸ್ತರಿಗೆ ನಿಷ್ಕಳಂಕ ಮಾತೆಯಾಗಿ ಕುಟುಂಬದಲ್ಲಿ ಏಕತೆ, ಸಹಬಾಳ್ವೆ ನಡೆಸಲು ಪ್ರೇರಣೆ ನೀಡಿದ್ದಾರೆ. ಅವರ ಆದರ್ಶ ಗುಣಗಳನ್ನು ನಾವು ಜೀವನದಲ್ಲಿ ಅಳವಡಿಸಬೇಕು. ಸಮಾಜದಲ್ಲಿ ಸಂಸ್ಕಾರಯುತ ವ್ಯಕ್ತಿಯಾಗಿ ಬಾಳಬೇಕು’ ಎಂದರು.
ಬಣಕಲ್ ಚರ್ಚ್ ಧರ್ಮಗುರು ಫಾ.ಪ್ರೇಮ್ ಲಾರೆನ್ಸ್ ಡಿಸೋಜ ಮಾತನಾಡಿ ‘ಪ್ರಕೃತಿ ತಾಯಿಯನ್ನು ಪ್ರೀತಿಸಿ ಆರಾಧಿಸಿದಂತೆ ಮಾತೆ ಮರಿಯಮ್ಮನವರನ್ನು ಗೌರವಿಸಬೇಕು. ಕುಟುಂಬದಲ್ಲಿ ತಾಯಿಗಿಂತ ಮಿಗಿಲಾದ ಸ್ಥಾನವಿಲ್ಲ. ತಾಯಿಯ ಮಮತೆ ದೇವರ ಕರುಣೆಯ ಪ್ರತಿಬಿಂಬವಾಗಿದೆ. ಅಮ್ಮನ ಮಮತೆಗೆ ಸಮಾನವಾದ ಆಭರಣವಿಲ್ಲ ‘ಎಂದರು.
ಪೂಜೆಯ ಬಳಿಕ ಚರ್ಚ್ ಪ್ರತಿಕೃತಿಯ ಅಲಂಕೃತವಾದ ತೇರಿನಲ್ಲಿ ಮರಿಯಮ್ಮನವರ ಪ್ರತಿಮೆ ಇರಿಸಿ ಪೇಟೆಯಲ್ಲಿ ಕ್ರೈಸ್ತರು ಮೇಣದ ಬತ್ತಿ ಹೊತ್ತಿಸಿ, ವಾದ್ಯ ಮೇಳದೊಂದಿಗೆ ಸಂಭ್ರಮದ ಮೆರವಣಿಗೆ ನಡೆಸಿದರು. 25ಕ್ಕೂ ಅಧಿಕ ಗುರುಗಳು ವಾರ್ಷಿಕೋತ್ಸವದಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಸಹಾಯಕ ಗುರು ಫಾ.ಥಾಮಸ್ ಕಲಘಟಗಿ, ಫಾ.ಅರುಣ್ ಲೋಬೊ, ಬಾಳೆಹೊನ್ನೂರು ವಲಯ ಗುರು ಫಾ.ಪೌಲ್ ಡಿಸೋಜ, ಫಾ.ಲ್ಯಾನ್ಸಿ ಪಿಂಟೊ, ಫಾ.ವಿಲಿಯಂ ಬರ್ನಾರ್ಡ್, ಫಾ.ಸುನಿಲ್ ರೊಡ್ರಿಗಸ್, ಸಿಸ್ಟರ್ ಹಿಲ್ಡಾ ಲೋಬೊ, ಕ್ರೈಸ್ತ ಅಭಿವೃದ್ದಿ ನಿಗಮದ ಅಧ್ಯಕ್ಷ ಹರ್ಷ ಮೆಲ್ವಿನ್ ಲಸ್ರಾದೊ, ಪೆಡ್ಡಿ ಲೋಬೋ, ಪಾಲನಾ ಸಮಿತಿಯ ಮರೀನಾ ಡೇಸಾ, ಪ್ರೆಸಿಲ್ಲಾ ಮೋನಿಸ್, ಬೆನಡಿಕ್ಟ್ ಲೋಬೊ, ಪ್ರವೀಣ್, ಪ್ರೀಡನ್ ಡಿಸೋಜ, ಸಂತೋಷ್ ಸೆರಾವೊ, ರೋನಿ ಮೋನಿಸ್, ಸ್ಟ್ಯಾನಿ ಡಿಸೋಜ, ಜೀವನ್ ಕರ್ನೇಲಿಯೊ, ಆಲ್ವಿನ್ ರೊಡ್ರಿಗಸ್, ಸಂದೀಪ್ ಡಿಸೋಜ, ಪ್ರಾನ್ಸಿಸ್ ಲೋಬೋ, ಸಂತೋಷ್ ಮೋನಿಸ್, ನವೀನ್ ಡಿಸೋಜ, ವಿಕ್ಟರ್ ಮಾರ್ಟಿಸ್, ಅರುಣ್ ಡಿಕುನ್ನಾ, ಲವೀನ್ ಡಿಸೋಜ, ಆಲ್ವಿನ್ ಡಿಸೋಜ, ರೊನಾಲ್ಡ್ ಡಿಸೋಜ, ಪ್ರವೀಣ್ ಪಾಯ್ಸ್, ವಿನ್ಸೆಂಟ್ ಡಿಸೋಜ ಮತ್ತಿತರರು ಇದ್ದರು



