February 18, 2026

 

 

ಚಿಕ್ಕಮಗಳೂರು ತಾಲ್ಲೂಕು ಮೂಗ್ತಿಹಳ್ಳಿ ಸರ್ವೆ ನಂ.112 ರಲ್ಲಿ ದಲಿತರಿಗೆ ಸ್ಮಶಾನ ಜಾಗ ಗುರ್ತಿಸಿ ಮೀಸಲಿಡುವಂತೆ ಆಗ್ರಹಿಸಿ ಗ್ರಾಮಸ್ಥರು, ಶಾಸಕರು ಹಾಗೂ ತಹಶೀಲ್ದಾರ್‍ರವರಿಗೆ ಮನವಿ ಸಲ್ಲಿಸಿದರು.

ಮನವಿ ಸ್ವೀಕರಿಸಿದ ಶಾಸಕ ಹೆಚ್.ಡಿ. ತಮ್ಮಯ್ಯ ಅವರು, ಚಿಕ್ಕಮಗಳೂರು ತಹಶೀಲ್ದಾರ್ ರೇಷ್ಮಾ ಅವರಿಗೆ ಮನವಿಯನ್ನು ವರ್ಗಾಯಿಸಿ ಕೂಡಲೇ ಸ್ಥಳ ಪರಿಶೀಲಿಸಿ ಜಮೀನನ್ನು ಗುರ್ತಿಸಿ, ದಲಿತರಿಗೆ ಸ್ಮಶಾನಕ್ಕೆ ಜಾಗ ಮೀಸಲಿರಿಸುವಂತೆ ತಿಳಿಸಿದ್ದಾರೆ.

ಕಸಬಾ ಹೋಬಳಿ ಮೂಗ್ತಿಹಳ್ಳಿ ಗ್ರಾಮದ ದಲಿತರಿಗೆ ಈವರೆಗೆ ಸ್ಮಶಾನಕ್ಕೆ ಜಾಗ ಇರುವುದಿಲ್ಲ, ಇತ್ತೀಚೆಗೆ ಸರ್ವೆ ನಂ.112 ರ ಜಮೀನಿನ ಜಾಗದಲ್ಲಿ 20 ಗುಂಟೆ ಭೂಮಿಯನ್ನು ಸ್ಮಶಾನಕ್ಕೆ ಮೀಸಲಿಟ್ಟಿದ್ದು, ಈ ಸಂಬಂಧ ಪಹಣಿಯಲ್ಲಿ ನಮೂದಾಗಿರುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಕೂಡಲೇ ಗ್ರಾಮಸ್ಥರಾದ ನಮ್ಮಗಳಿಗೆ ಗಡಿ ಗುರುತುಮಾಡಿ ಈಗ ಇರುವ 20 ಗುಂಟೆ ಜಾಗವನ್ನು ಸ್ಮಶಾನಕ್ಕೆ ಮೀಸಲಿಟ್ಟು, ಹೆಚ್ಚುವರಿಯಾಗಿ 1 ಎಕರೆ ಭೂಮಿಯನ್ನು ಮಂಜೂರು ಮಾಡುವಂತೆ ಮನವಿಯಲ್ಲಿ ವಿನಂತಿಸಿದ್ದಾರೆ.

ಈ ಸಂದರ್ಭದಲ್ಲಿ ಮೂಗ್ತಿಹಳ್ಳಿ ಗ್ರಾಮಸ್ಥರುಗಳಾದ ನಿರಂಜನ್, ಮನೋಜ್, ಸರಿತಾ, ಸ್ವಾಮಿ, ಸೋಮಶೇಖರ್, ಸುಪ್ರಿಯಾ, ಸಂದೀಪ, ನಿಹಾಂತ್, ಮಂಜುನಾಥ್, ಹಾಲಪ್ಪ, ಗೋಪಾಲ, ಪುಟ್ಟಮ್ಮ, ಯೋಗಿ, ರಾಜು, ಚನ್ನಪ್ಪ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ