February 18, 2026

 

 

ಚಿಕ್ಕಮಗಳೂರು ನಗರದ ವಿಜಯಪುರ ಬಡಾವಣೆ ತಿಲಕ್‍ಪಾರ್ಕ್ ಸಮೀಪದ ಮನೆಗಳ ಮೇಲೆ ಕಲ್ಲು ತೂರಾಟ ಮತ್ತು ಪುಂಡರ ಹಾವಳಿ ಪ್ರಕರಣಕ್ಕೆ ಸಂಬಂಧಿಸಿದ ಮಂಗಳವಾರ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತೆಯರು ಆ ಕುಟುಂಬದ ಸದಸ್ಯರನ್ನು ಭೇಟಿ ಮಾಡಿ ಘಟನೆ ಸಂಬಂಧ ಮಾಹಿತಿ ಪಡೆದುಕೊಂಡರು.

ಈ ಕುರಿತು ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಜಸಂತಾ ಅನಿಲ್‍ಕುಮಾರ್ ಮಾತನಾಡಿ ದಾಳಿಗೆ ಒಳಗಾದ ಶ್ರೀಮತಿ ಸುಧಾ ಅವರ ಮನೆಯ ಮೇಲೆ ರಾತ್ರಿ ಅಪ್ರಾಪ್ತ ಮುಸ್ಲೀಂ ಬಾಲಕರು ಕಲ್ಲು ತೂರಾಟ ನಡೆಸಿದ್ದು, ಹೆಣ್ಣುಮಕ್ಕಳಿಗೆ ರಕ್ಷಣೆ ಇಲ್ಲವಾಗಿದೆ. ಕೂಡಲೇ ಪೊಲೀಸರು ಹೆಣ್ಣಿನ ಮೇಲೆ ದಾಂಧಲೆ ನಡೆಸುವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದರು.

ಪ್ರಸ್ತುತ ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟು ಹೆಣ್ಣುಮಕ್ಕಳು ರಸ್ತೆಗಳಲ್ಲಿ ಸಂಚರಿಸದ ಸ್ಥಿತಿ ನಿ ರ್ಮಾಣವಾಗಿದೆ. ಈ ಸಂಬಂಧ ನಿನ್ನೆ ಶ್ರೀಮತಿ ಸುಧಾ ಅವರ ಮನೆ ಮೇಲೆ ಕಲ್ಲುತೂರಿ ಅಮಾನವೀಯ ಪ್ರಕರಣವೇ ಸಾಕ್ಷಿಯಾಗಿದೆ. ಈ ಕೃತ್ಯವೆಸಗಿರುವ  ಯುವಕರನ್ನು ಪೊಲೀಸ್ ಇಲಾಖೆ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದರು.

ಮನೆ ಮೇಲೆ ಕೆಲವು ಪುಂಡಾರು ಕಲ್ಲುತೂರಿದ್ದಾರೆ. ಶೀಘ್ರವೇ ಸುಧಾರವರ ಮಗಳು ಪೊಲೀಸ್ ಕಂಟ್ರೋಲ್ ರೂಮ್‍ಗೆ ಕರೆ ಮಾಡಿದರೂ ತಕ್ಷಣವೇ ಧಾವಿಸದೇ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದಾರೆ. ಬಳಿ ಕ ಪುಂಡಾರು ಓಡಲಾರಂಭಿಸಿದಾಗ ಸ್ಥಳಿಯ ಯುವಕರು ಹಿಡಿದಿದ್ದಾರೆ. ಆದರೆ ಮಹಿಳೆಯ ರಕ್ಷಣೆಗೆ ಮುಂದಾದ ಯುವಕರ ಮೇಲೆ ಪ್ರಕರಣ ದಾಖಲಿಸಿರುವುದು ಸರಿಯಲ್ಲ ಎಂದು ಹೇಳಿದರು.

ನಿವಾಸಿ ಕು.ಗಾನವಿ ಮಾತನಾಡಿ ರಾತ್ರಿ ಹೊತ್ತಿನಲ್ಲಿ ಯುವಕರ ಗುಂಪೊಂದು ಬಾಗಿಲು- ಕಿಟಕಿ ತಟ್ಟಿ, ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಮನೆಯ ಹಿಂಬದಿಯಲ್ಲಿ ತೆರಳಿ ನೋಡಿದರೆ ಓರ್ವ ಯುವ ಕ ಅವಿತ್ತುಕೊಂಡಿದ್ದು ಕಂಡಕೂಡಲೇ ಓಡಲಾರಂಭಿಸಿದ್ದಾರೆ. ಅಲ್ಲಿಯೇ ಇದ್ದ ಸ್ಥಳೀಯರು ಹಿಡಿದರೂ ಅವರ ಮೇಲೆ ಸುಖಾಸುಮ್ಮನೆ ಪ್ರಕರಣ ದಾಖಲಿಸಿದ್ದಾರೆ ಎಂದು ದೂರಿದರು.

ವಿಜಯಪುರ ಕಸ್ತೂರಿ ಬಾ ಸದನ ರಸ್ತೆಯಲ್ಲಿ ರಾತ್ರಿಹೊತ್ತು ಪುಂಡಾರ ಹಾವಳಿ ಹೆಚ್ಚಾಗಿದೆ. ಅಲ್ಲದೇ ಬೆಳಿಗ್ಗೆ ಹಾಗೂ ಮಧ್ಯಾಹ್ನದ ಸಮಯದಲ್ಲಿ ಸುತ್ತಮುತ್ತಲಿನ ಕಾಲೇಜಿನ ವಿದ್ಯಾರ್ಥಿನಿಯರು ಸಂಚರಿಸದ ಸ್ಥಿತಿಯಿದೆ. ಅಲ್ಲದೇ ಕೆಲವರು ಬೈಕ್‍ವೀಲ್ ಮಾಡುವ ಮೂಲಕ ಕಾಲೇಜು ಯುವತಿಯರನ್ನು ಅಸಭ್ಯತನ ದಿಂದ ರೇಗಿಸುವುದು ಹಾಗೂ ಕೆಟ್ಟ ರೀತಿಯಲ್ಲಿ ವರ್ತನೆ ಹೆಚ್ಚಾಗಿದೆ ಎಂದರು.

ಹಗಲಿನ ಪುಂಡರ ಯುವಕರ ಸಮಸ್ಯೆ ಒಂದಾದರೆ, ರಾತ್ರಿ ಹೊತ್ತು ಕೇಳುವಂತಿಲ್ಲ. ತಿಲಕ್‍ಪಾರ್ಕ್ ರ ಸ್ತೆಯಲ್ಲಿ ರಾತ್ರಿಹೊತ್ತು ಪುಂಡರು ಸಂಖ್ಯೆ ಹೆಚ್ಚಳಗೊಳ್ಳುತ್ತಿದೆ. ಇಂದಿಗೂ ಕೆಲವು ಹೆಣ್ಣುಮಕ್ಕಳು ಸಂಜೆ ಸಮಯದಲ್ಲಿ ಈ ರಸ್ತೆಯಲ್ಲಿ ಸಂಚರಿಸಲು ಗಾಬರಿಗೊಳ್ಳುತ್ತಾರೆ. ರಾತ್ರಿ ಪೊಲೀಸರ ಬೀಟ್ ಹಾಕದಿರುವ ಕಾರಣ ಸ್ಥಳೀಯರು ತೀವ್ರ ಸಂಕಷ್ಟ ಎದುರಾಗುತ್ತಿದೆ ಎಂದರು.

ಒಟ್ಟಾರೆ ಪೊಲೀಸರು ಆಚಾತುರ್ಯ ಸಂಭವಿಸಿದ ಬಳಿಕ ಧಾವಿಸಿದರೆ ನ್ಯಾಯ ಒದಗಿಸಬಲ್ಲರೇ ಎಂ ದ ಅವರು ಇಂದು ಒಂದು ಮನೆ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಮುಂದೆ ಹೆಣ್ಣು ಮಕ್ಕಳು ತಿರು ಗಾಡದಂಥ ಸ್ಥಿತಿ ನಿರ್ಮಾಣವಾಗುವ ಮೊದಲೇ ಪೊಲೀಸ್ ಇಲಾಖೆ ಸೂಕ್ತ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.

ಇದೇ ವೇಳೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರ ಹಾಗೂ ಮಹಿಳಾ ಠಾಣೆಗೆ ಪ್ರಕರಣ ಸಂಬಂಧ ಸೂಕ್ತ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯದರ್ಶಿ ಪ್ರೀತಿ ಯೋಗೀಶ್, ಉಪಾ ಧ್ಯಕ್ಷೆ ವೀಣಾಶೆಟ್ಟಿ, ಕಾರ್ಯದರ್ಶಿ ಕವಿತಾ ಶೇಖರ್, ನಗರ ಮಹಿಳಾ ಮೋರ್ಚಾ ಪ್ರಧಾಣ ಕಾರ್ಯದರ್ಶಿ ಗಳಾದ ಗಗನ, ಮಧು, ಉಪಾಧ್ಯಕ್ಷೆ ಸುಜಾತ, ಮುಖಂಡರುಗಳಾದ ಅಂಕಿತ, ಸಂಗೀತ, ಗೀತಾ, ಕೋಮಲ,  ಹೇಮಸಿಂಗ್, ಯಶೋಧ ಮತ್ತಿತರರಿದ್ದರು.

Leave a Reply

Your email address will not be published. Required fields are marked *

Related News

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ