February 20, 2026

 

 

ಜೇನುನೊಣಗಳ ಜನಸಂಖ್ಯೆಯ ಮೇಲೆ ಪರಿಣಾಮ ಬೀರುವ ಅನೇಕ ಅಂಶಗಳಿವೆ- ಅತ್ಯಂತ ದೊಡ್ಡ ಅಂಶವೆಂದರೆ ಕೀಟನಾಶಕಗಳು ಮತ್ತು ಸವಾಲಿನ ಹವಾಮಾನ ಪರಿಸ್ಥಿತಿಗಳು. ಆದಾಗ್ಯೂ, ಜೇನುನೊಣಗಳು ವಾಣಿಜ್ಯ ಬೆಳೆಗಳ ಹೆಚ್ಚು ವಿಶ್ವಾಸಾರ್ಹ ಪರಾಗಸ್ಪರ್ಶಕಗಳನ್ನು ನಿರ್ವಹಿಸುತ್ತವೆ. ಆಹಾರ ಮೂಲಗಳ ಲಭ್ಯತೆಯನ್ನು ಉತ್ತೇಜಿಸುವ ಮೂಲಕ ಮತ್ತು ಕೀಟನಾಶಕದ ಒಡ್ಡುವಿಕೆಯಿಂದ ಜೇನುನೊಣಗಳನ್ನು ರಕ್ಷಿಸುವ ಮೂಲಕ ಸ್ಥಳೀಯ ಜೇನುಗಳ ಜನಸಂಖ್ಯೆಯನ್ನು ಹೆಚ್ಚಿಸಬಹುದು. ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ. ಕೃಷ್ಣಮೂರ್ತಿ ಎ.ಟಿ. ತಿಳಿಸಿದರು.

ಮೂಡಿಗೆರೆ ಕೃಷಿವಿಜ್ಞಾನ ಕೇಂದ್ರದಲ್ಲಿ 2 ದಿನಗಳ ಕಾಲ ಪರಿಶಿಷ್ಠ ಜಾತಿ ಉಪಯೋಜನೆಯಡಿ ಪರಿಶಿಷ್ಠ ಜಾತಿ ವರ್ಗದವರಿಗೆ ಆಯೋಜಿಸಲಾಗಿದ್ದ ವೈಜ್ಞಾನಿಕ ಜೇನು ಸಾಕಾಣಿಕೆ ತರಭೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು. ರೈತರು ಬೆಳೆ ಉತ್ಪಾದನೆ ಮಾಡುವ ಸಂದರ್ಭದಲ್ಲಿ

ಪರಿಸರ ಮತ್ತು ಗುಣಮಟ್ಟದ ಉತ್ಪಾದನೆಯನ್ನು ಗಮನದಲ್ಲಿಟ್ಟುಕೊಂಡು ಜೇನುನೊಣಗಳ ಸಾಕಾಣಿಕೆಯನ್ನು ಮಾಡಬೇಕು ಹಾಗೂ ವಿವಿಧ ಉತ್ಪನ್ನ ಗಳನ್ನು ತಯಾರು ಮಾಡಿ ಉದ್ದಿಮೆಯಿಂದ ಆದಾಯವನ್ನು ಹೆಚ್ಚಿಸಿಕೊಳ್ಳಬಹುದು ಎಂದರು.

ಸಹ ವಿಸ್ತರಣಾ ನಿರ್ದೇಶಕರಾದ ಡಾ. ಶಿವಪ್ರಸಾದ್, ಎಂ. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ  ಜೇನುಹುಳುಗಳ ಪರಾಗಸ್ಪರ್ಶದ ಕ್ರಿಯೆಯಿಂದ ಬೆಳೆಗಳ ಉತ್ಪಾದನೆ ಹೆಚ್ಚು ಆಗುತಿದ್ದು, ಈತರಬೇತಿಯಲ್ಲಿ ಶಿಬಿರಾರ್ಥಿಗಳು ಜೇನು ಸಾಕಾಣಿಕೆ ಕುರಿತು ವಿಷಯಗಳನ್ನು ತಿಳಿದುಕೊಂಡು ಜೇನು ಸಾಕಾಣಿಕೆ ಪ್ರಾರಂಭಿಸಬೇಕು ಹಾಗೂ ಇದರಿಂದ ಉದ್ಯಮಶೀಲರಾಗಬೇಕು ಎಂದು ಹೇಳಿದರು

ಐ.ಸಿ.ಎ.ಆರ್.-ಕೃಷಿ ವಿಜ್ಞಾನ ಕೇಂದ್ರದ ಸಸ್ಯ ಸಂರಕ್ಷಣೆ ವಿಜ್ಞಾನಿಯಾದ ಡಾ. ಸುಚಿತ್ರ ಕುಮಾರಿ, ಎಂ.ಹೆಚ್. ರವರು ಜೇನು ಹುಳುಗಳ ಪ್ರಭೇದ, ಅವುಗಳ ಗೂಡಿನ ರಚನೆ, ಕಾರ್ಯ ಚಟುವಟಿಕೆಗಳು, ಮುಂತಾದ ವಿಷಯಗಳ ಬಗ್ಗೆತಿಳಿಸಿಕೊಟ್ಟರು.

ನಂತರ ಆಲ್ದೂರಿನ, ಜೇನು ಉದ್ದಿಮೆದಾರರು  ರಂಜಿತ್ ವಿವಿಧ ಋತುಗಳಲ್ಲಿ ಜೇನು ಹುಳುಗಳ ನಿರ್ವಹಣೆ ಹೇಗೆ ಮಾಡಬೇಕೆಂದು ಹಾಗೂ ಸಾಕಾಣಿಕೆ ಮಾಡಲು ಬೇಕಾದಉಪಕರಣಗಳ ಕುರಿತು ಮಾಹಿತಿಯನ್ನು ನೀಡುವುದರ ಜೊತೆಗೆ ಪ್ರಾಯೋಗಿಕವಾಗಿ ಜೇನು ಸಾಕಾಣಿಕೆ ಘಟಕದಲ್ಲಿರುವ ಜೇನು ಗೂಡಿ ನ ರಚನೆ, ವಿವಿಧ ಜಾತಿಗಳ ಗುರುತಿಸುವಿಕೆ ಮುಂತಾದ ವಿಷಯಗಳ ಕುರಿತುತಿಳಿಸಿಕೊಟ್ಟರು.

ಕಾರ್ಯಕ್ರಮದಲ್ಲಿ  ತೋಟಗಾರಿಕೆ ಮಹಾವಿದ್ಯಾಲಯ ಸಹಾಯಕ ಪ್ರಾಧ್ಯಾಪಕರಾದ  ಸಯ್ಯದ್ ಇಮ್ರಾನ್  ಮೂಡಿಗೆರೆ ಇವರು ಜೇನು ನೊಣಗಳಿಗೆ ಭಾದಿಸುವ ಕೀಟ ಮತ್ತು ರೋಗಗಳ ಗುರುತಿಸುವಿಕೆ ಹಾಗೂ ನಿರ್ವಹಣೆ ಕುರಿತು ಮಾಹಿತಿಯನ್ನು ನೀಡಿದರು.

ತೋಟಗಾರಿಕೆ ಇಲಾಖೆಯ ಸಹಾಯಕ ಅಧಿಕಾರಿ ಶ್ರೀಮತಿ ರೇಖಾರವರು ತೋಟಗಾರಿಕೆ ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಕುರಿತು  ಮಾಹಿತಿಯನ್ನು ನೀಡಿದರು.

ತೋಟಗಾರಿಕೆ ಮಹಾವಿದ್ಯಾಲಯ ರಾಜು ಅವರು ಮಿಸ್ರಿ ಜೇನುಸಾಕಾಣಿಕೆ ಕುರಿತು ಪ್ರಾಯೋಗಿಕವಾಗಿ ತೋರಿಸಿಕೊಟ್ಟರು.

ಕಾರ್ಯಕ್ರಮದಲ್ಲಿ ಮಣ್ಣು ವಿಜ್ಞಾನ ವಿಜ್ಞಾನಿ  ಡಾ. ಪ್ರಶಾಂತ ಜಿ.ಎಂ ಭಾಗವಹಿಸಿದ್ದರು.

31 ಶಿಬಿರಾರ್ಥಿಗಳು ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ