ಮಹಾಶಿವರಾತ್ರಿ ಪ್ರಯಕ್ತ ಶ್ರೀ ಮಂಜುನಾಥನ ಸನ್ನಿದಿಗೆ ನಾಡಿನ ವಿವಿಧ ಬಾಗಗಳಿಂದ ಸಾವಿರಾರು ಭಕ್ತಾದಿಗಳು ಪಾದಯಾತ್ರೆ ಮಾಡಿದ ಹಿನ್ನೆಲೆಯಲ್ಲಿ ಮೂಡಿಗೆರೆ ತಾಲ್ಲೂಕಿನ ಕಸ್ಕೆಬೈಲ್ ನಿಂದ ಜನ್ನಾಪುರದದವರಗೆ ರಸ್ತೆ ಬದಿಯಲ್ಲಿ ಹಾಕಿದ ನೀರಿನ ಬಾಟಲ್ ಮತ್ತು ಇನ್ನಿತರ ವಸ್ತುಗಳನ್ನು ಗೋಣಿಬೀಡು ರೋಟರಿ ಕ್ಲಬ್ ವತಿಯಿಂದ ಸ್ವಚ್ಛತಾ ಆಂದೋಲನ ಮಾಡಲಾಯಿತು.
ಫೆಬ್ರವರಿ 15 ರಂದು ಧರ್ಮಸ್ಥಳದ ಶ್ರೀ ಮಂಜುನಾಥನ ಸನ್ನಿದಿಯಲ್ಲಿ ನಡೆದ ಮಹಾಶಿವರಾತ್ರಿಗೆ ನಾಡಿನ ವಿವಿಧ ಕಡೆಯಿಂದ ಪಾದಯಾತ್ರೆಯ ಮೂಲಕ ಆಗಮಿಸಿದ ಪಾದಯಾತ್ರಿಗರು ರಸ್ತೆ ಬದಿಯಲ್ಲಿ ದಾರಿಯುದ್ಧಕ್ಕೂ ದಾನಿಗಳು ನೀಡಿದ ಪ್ಲಾಸ್ಟಿಕ್ ಬಾಟಲಿಯಲ್ಲಿ ನೀರು ಹಿಡಿದು ಸಾಗುವ ಭಕ್ತರು ನೀರು ಕುಡಿದು ರಸ್ತೆ ಬದಿಯಲ್ಲಿ ಬಿಸಾಡಿ ಹೋಗುವದು ಪ್ರತಿ ವರ್ಷ ಸಾಮಾನ್ಯವಾಗಿದೆ. ದಾನಿಗಳು ಉಪಹಾರ, ಹಣ್ಣು, ಹಂಪಲನ್ನು ಹೆಜ್ಜೆ ಹೆಜ್ಜೆಗೂ ಒದಗಿಸುತ್ತಾ ಬಂದಿದ್ದು ತಿಂಡಿ ಪ್ಲೇಟ್ ಗಳು ಮತ್ತು ಪ್ಲಾಸ್ಟಿಕ್ ಗಳನ್ನು ರಸ್ತೆ ಬದಿಯಲ್ಲಿ ಹಾಕಿದ್ದು ಅವುಗಳನ್ನು ಕಸ್ಕೆಬೈಲ್ ನಿಂದ ಜನ್ನಾಪುರದವರಗೆ ಗೋಣಿಬೀಡು ರೋಟರಿ ಕ್ಲಬ್ ವತಿಯಿಂದ ಸ್ವಚ್ಛತಾ ಕಾರ್ಯ ಮಾಡಲಾಯಿತು.
ಈ ಸ್ವಚ್ಛತಾ ಕಾರ್ಯದಲ್ಲಿ ಗೋಣಿಬೀಡು ರೋಟರಿ ಸಂಸ್ಥೆಯ ನಿಯೋಜಿತ ಅಧ್ಯಕ್ಷ ನಯನ್ ಕುಮಾರ್, ನಿಯೋಜಿತ ಕಾರ್ಯದರ್ಶಿ ಕೆ ಸಿ ವಿನಯ್, ಲಯನ್ಸ್ ಅಧ್ಯಕ್ಷ ಎಂ. ಸಿ ನವೀನ್, ಗ್ರಾಮ ಪಂಚಾಯ್ತಿ ಸದಸ್ಯೆ ಸುಪ್ರಿತಾ ನಯನ್, ಗ್ರಾಮ ಪಂಚಾಯ್ತಿ ಪಿಡಿಒ ಸಿಂಚನ, ಹಾಗೂ ಜಗದೀಶ್ ಹೊಸಳ್ಳಿ, ವಿನಾಯಕ ಗೆಳೆಯರ ಬಳಗ ಅಧ್ಯಕ್ಷ ಜಿ ಏನ್ ರಘು, ಧರ್ಮಸ್ಥಳ ಗ್ರಾಮಭಿರುದ್ಧಿ ಮೇಲ್ವಿಚಾರಕರಾದ ದೀಪಕ್, ಹಾಗೂ ಸೇವಾ ಪ್ರತಿನಿದಿಗಳು, ಶೌರ್ಯವಿಪತ್ತು ತಂಡದ ಪ್ರತಿನಿಧಿ ಉದಯ್ ಕಸ್ಕೆಬೈಲ್ ಹಾಗೂ ಸ್ವಯಂ ಸೇವಕರು ಭಾಗಿಯಾಗಿದ್ದರು.



