February 24, 2026

 

 

ಸಂತ ಮಾರ್ಥಾಸ್ ಹಿರಿಯ ಪ್ರಾಥಮಿಕ ಶಾಲೆ, ಮೂಡಿಗೆರೆ ದಿನಾಂಕ 21. 2.2026 ರಂದು ಪಠ್ಯೇತರ ಚಟುವಟಿಕೆಗಳ ಬಹುಮಾನ ವಿತರಣಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು,

ಮೂಡಿಗೆರೆ ಠಾಣಾಧಿಕಾರಿ ಹರ್ಷವರ್ಧನ್. ಇಮ್ರಾನ್ ವೈದಾಧಿಕಾರಿಗಳು ಎಂಜಿಎಂ ಹಾಸ್ಪಿಟಲ್, ನಿತಿನ್ ಕುವೆಲ್ಲೋ ಸಿವಿಲ್ ನ್ಯಾಯಾಧೀಶರು, ಲ್ಯಾನ್ಸಿ ವಾಸ್, ಮೃದು ಕುಮಾರ್, ಸುನಿಲ್ ಜೋಶ್ವ, ಮುಖ್ಯೋಪಾಧ್ಯಾಯರಾದ ಸಿಸ್ಟರ್ ಮೊಲಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮ ಉದ್ಘಾಟಿಸಿ ಮಾತಾನಾಡಿದ ಹರ್ಷವರ್ಧನ್ ಸಬ್ ಇನ್ಸ್ಪೆಕ್ಟರ್ ಮೂಡಿಗೆರೆ ಇವರು ; ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತನ್ನು ಅಳವಡಿಸಿಕೊಂಡಲ್ಲಿ ಉತ್ತಮ ನಾಗರಿಕರಾಗಲು ಸಾಧ್ಯ,ದುಶ್ಚಟಗಳಿಗೆ ಮಾರುಹೋಗದೆ ಉತ್ತಮ ಅರೋಗ್ಯಕರ ಸಮಾಜ ನಿರ್ಮಾಣ ಮಾಡಲು ವಿದ್ಯಾರ್ಥಿಗಳಿಂದ ಮಾತ್ರ ಸಾಧ್ಯ, ಸಮಾಜದಲ್ಲಿ ಯಾವುದೇ ರೀತಿ ಅಹಿತಕರ ಘಟನೆಗಳು ನಡೆದಲ್ಲಿ ಟೋಲ್ ಫ್ರೀ ನಂಬರ್ 112ಗೆ ಕರೆ ಮಾಡಿ ಮಾಹಿತಿ ನೀಡುವುದು ಎಲ್ಲರ ಕರ್ತವ್ಯ ಎಂದು ತಿಳಿಸಿದರು.

ಡಾಕ್ಟರ್ ಇಮ್ರಾನ್ ಮಾತನಾಡಿ ಸದೃಢ ದೇಹದಲ್ಲಿ ಸದೃಢ ಮನಸ್ಸಿದೆ ಹಾಗಾಗಿ ಎಲ್ಲರಿಗೂ ಆರೋಗ್ಯದ  ಬಗ್ಗೆ ಕಾಳಜಿ ಇರಬೇಕು ವೈಯಕ್ತಿಕ ಸ್ವಚ್ಛತೆಗೆ ಹೆಚ್ಚಿನ ಮಹತ್ವ ವಹಿಸಬೇಕು ಗುಣಮಟ್ಟದ ಆಹಾರ ಸೇವನೆಯಿಂದ ಆರೋಗ್ಯವು ವೃದ್ಧಿಸುವುದು, ಜಂಕ್ ಫುಡ್ ಸೇವನೆ ಅರೋಗ್ಯ ಕ್ಕೆ ಮಾರಕ ಎಂದು ಸಲಹೆ ನೀಡಿದರು.

ನ್ಯಾಯಾಧೀಶರಾಗಿ ಆಯ್ಕೆಯಾಗಿರುವ ಶಾಲೆಯ ಹಳೇ ವಿದ್ಯಾರ್ಥಿ ನಿತಿನ್ ಕುವೆಲ್ಲೋ ಮಾತನಾಡಿ ಸತತ ಪ್ರಯತ್ನದಿಂದ ಮಾತ್ರ ಯಶಸ್ಸು ಸಾಧ್ಯ. ವಿದ್ಯಾರ್ಥಿ ಜೀವನದಲ್ಲಿ ನಿಷ್ಠೆ, ಸಮಯ ಪ್ರಜ್ಞೆ, ಹಾಗೂ ದಿನನಿತ್ಯ ಪಾಠಗಳನ್ನ ಗಮನವಿಟ್ಟು ಆಲಿಸಿದ್ದಲ್ಲಿ ಉತ್ತಮ ಭವಿಷ್ಯ ಕಟ್ಟಿಕೊಳ್ಳಲು ಸಾಧ್ಯ ವೆಂದು ತಿಳಿಸಿದರು.

ಸಿಸ್ಟೆರ್ ಮೋಲಿ ಮಾತಾನಾಡಿ ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆಗಳನ್ನು ಹೊರ ತರಲು ಶಾಲೆ ಗಳಲ್ಲಿ ಪಠ್ಯತರ ಚಟುವಟಿಕೆಗಳು ಅಗತ್ಯವಾಗಿದೆ ಶ್ರದ್ದೆ ಹಾಗೂ ಆಸಕ್ತಿ ಯಿಂದ ಭಾಗವಯಿಸುವುದರಿಂದ ಯಶಸ್ಸು ಲಭಿಸುವುದು ಎಂದು ತಿಳಿಸಿದರು.

ಪಠ್ಯೇತರ ಚಟುವಟಿಕೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು,ಹಾಗೂ ಇತ್ತೀಚೆಗೆ ಸಿವಿಲ್ ನ್ಯಾಯಾಧೀಶರು ಹುದ್ದೆಗೆ ಆಯ್ಕೆ ಯಾದ ಸಂತ ಮಾರ್ಥಾಸ್ ನಾ ವಿದ್ಯಾರ್ಥಿಯಾದ ನಿತಿನ್ ಕುವೆಲ್ಲೊ ರವರಿಗೆ ಸನ್ಮಾನಿಸಲಾಯಿತು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ