ಜೈನ ಧರ್ಮದ ಸಂಸ್ಥಾಪಕರಾದ ಭಗವಾನ್ ಮಹಾವೀರರು ಜಗತ್ತಿನ ಮೊದಲ ಅಹಿಂಸಾವಾದಿ. ಸತ್ಯ, ಅಹಿಂಸೆ ಬ್ರಹ್ಮಚರ್ಯ. ಅಸ್ತೇಯ ಮತ್ತು ಕರ್ಮ ಸಿದ್ಧಾಂತಗಳ ಮೂಲಕ ಜಗತ್ತಿಗೆ ಅವರು ಪರಿಚಿತರಾಗಿದ್ದಾರೆ ಎಂದು ತೇರಾಪಂಥ್ ಸಭಾ ಅಧ್ಯಕ್ಷ ಮಹೇಂದ್ರ ಡೋಸಿ ತಿಳಿಸಿದರು.
ಮಂಗಳವಾರ ತೇರಾಪಂಥ್ ಭವನದಲ್ಲಿ ಭಗವಾನ್ ಮಹಾವೀರ ಜಯಂತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಜೈನ ಧರ್ಮದ ಶ್ರೇಷ್ಠ ಜ್ಞಾನಿ ಮತ್ತು ಧರ್ಮ ಪ್ರವರ್ತಕ ಭಗವಾನ್ ಮಹಾವೀರರು. ಅವರ ಪ್ರಕಾರ ಅಹಿಂಸೆ ಎಂದರೆ ಸಕಲ ಜೀವರಾಶಿಗಳಿಗೆ ಯಾವುದೇ ನೋವನ್ನು ಉಂಟು ಮಾಡ ದಿರುವುದು ಮತ್ತು ಪ್ರಾಮಾಣಿಕ ನಡವಳಿಕೆ ಮತ್ತು ಇತರರನ್ನು ನೋಯಿಸ ದಿರುವುದೇ ಆಗಿದೆ. ಸಕಲ ಜೀವಿಗಳಿಗೂ ಒಳ್ಳೆಯದನ್ನು ಬಯಸಬೇಕು ಎನ್ನುವುದು ಮಹಾವೀರರ ಮೂಲ ತತ್ವ, ಹಸಿವು ಮತ್ತು ದಾಹಗಳನ್ನ ದೀರ್ಘಕಾಲ ನಿಯಂತ್ರಿಸಿ ಮಹಾಜ್ಞಾನಿಯಾದವರು. ಮಹಾವೀರರು ಆಸೆಗಳನ್ನು ಗೆದ್ದವರು. ಕರ್ನಾಟಕವನ್ನು ಆಳಿದ ಆರಂಭದ ಎಲ್ಲಾ ರಾಜಮನೆತನಗಳು ಜೈನ ಧರ್ಮವನ್ನು ಪೆÇೀಷಿಸಿವೆ. ಕನ್ನಡ ಸಾಹಿತ್ಯ, ಕಲೆಗೆ ಅವರ ಕೊಡುಗೆ ಅಪಾರ ಎಂದರು.
ತೇರಾಪಂಥ್ ಭವನದ ಮಾಜಿ ಅಧ್ಯಕ್ಷ ಮದನ್‍ಚಂದ್ ಜೈನ್ ಮಾತನಾಡಿ, ಕಷ್ಟದಲ್ಲಿರುವವರಿಗೆ ಸಹಾಯ ಮಾಡಬೇಕು. ಸರ್ವೇಜನೋ ಸುಖಿನೊಭವಂತು, ದೀನ ದಲೀತರಿಗೆ ಸಹಾಯ ಮಾಡುವುದು ಜೈನ ಧರ್ಮದ ಮುಖ್ಯ ತತ್ವವಾಗಿದೆ. ಸಾಧ್ಯವಾದಷ್ಟು ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತು ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಪದಮ್ ನಹಾರ್, ಮಹಿಳಾ ಮಂಡಲ್ ಅಧ್ಯಕ್ಷೆ ಸಂತೋಷ್‍ಬಾಯಿ ಗಾದಿಯಾ, ಯುವ ಪರಿಷತ್ ಅಧ್ಯಕ್ಷ ನಿಖಿಲ್ ಗಾದಿಯಾ, ಅಣುವ್ರತ್ ಸಮಿತಿ ಅಧ್ಯಕ್ಷೆ ಮಂಜುಬಾಯಿ ಬನ್ಸಾಲಿ, ಟ್ರಸ್ಟ್ ಅಧ್ಯಕ್ಷ ಅಂಶೋಕ್ ಡೋಸಿ, ಟಿಪಿಎಫ್ ಅಧ್ಯಕ್ಷ ಅಭಿಷೇಕ್ ಆಚಾ, ಉಪಾಸಿಕ ರಂಜುಆಚಾ, ಮಾಜಿ ಅಧ್ಯಕ್ಷರುಗಳಾದ ಸುರೇಂದ್ರ ಕುಮಾರ್ ಗೋಕ್ರೋ, ಲಾಲ್ ಚಂದ್ ಬನ್ಸಾಲಿ ಉಪಸ್ಥಿತರಿದ್ದರು.



