suddi-8 (1)

 

 

ಮೂಡಿಗೆರೆ ತಾಲೂಕು ಕರ್ತವ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷ ಸ್ಥಾನ ಆಯ್ಕೆ ಪ್ರಕ್ರಿಯೆ ಶನಿವಾರ ಪಟ್ಟಣದ ಪತ್ರಕರ್ತರ ಕಚೇರಿಯಲ್ಲಿ ನಡೆದಿದ್ದು, ನೂತನ ಅಧ್ಯಕ್ಷರಾಗಿ ವಿಜಯ ಕರ್ನಾಟಕ ಪತ್ರಿಕೆ ಬಣಕಲ್ ವರದಿಗಾರ ಸಂತೋಷ್ ಅತ್ತಿಗೆರೆ ಆಯ್ಕೆಗೊಂಡರು.

ಸಂಘದ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಸದಸ್ಯರು ಉತ್ಸಾಹದಿಂದ ಭಾಗವಹಿಸಿ ಮತ ಚಲಾಯಿಸಿದರು, ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಸಂತೋಷ್ ಅತ್ತಿಗೆರೆ ಅವರಿಗೆ ಸಂಘದ ಸರ್ವ ಸದಸ್ಯರು ಅಭಿನಂದನೆ ಸಲ್ಲಿಸಿದರು.

ಸಂತೋಷ್  ಅವರು ಬಣಕಲ್ ಹೋಬಳಿ ಅತ್ತಿಗೆರೆ ಗ್ರಾಮದವರಾಗಿದ್ದು, ಕಳೆದ 17 ವರ್ಷಗಳಿಂದ ಪತ್ರಕರ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಲವು ವರ್ಷಗಳಿಂದ ವಿಜಯಕರ್ನಾಟಕ ಪತ್ರಿಕೆ ವರದಿಗಾರರಾಗಿದ್ದಾರೆ.

ಈ ಸಂದರ್ಭದಲ್ಲಿ ನಿಕಟಪೂರ್ವ ಅಧ್ಯಕ್ಷ ಪ್ರಸನ್ನಕುಮಾರ್, ಮಾಜಿ ಅಧ್ಯಕ್ಷರುಗಳಾದ ಪ್ರಸನ್ನ ಗೌಡಳ್ಳಿ, ನಯನ ತಳವಾರ, ಎಂ.ಹೆಚ್. ಅಮರ್‍ನಾಥ್, ಎ.ಆರ್.ಉದಯಶಂಕರ್, ಆನಂದ್ ಕಣಚೂರು,  ಸದಸ್ಯರಾದ ಪ್ರಕಾಶ್ ಬಕ್ಕಿ, ಗಣೇಶ್ ಮಗ್ಗಲಮಕ್ಕಿ,  ತನು ಕೊಟ್ಟಿಗೆಹಾರ, ಅನಿಲ್ ಮೊಂತೆರೋ, ಶಿವಕಾಶಿ, ಪ್ರವೀಣ್ ಪೂಜಾರಿ, ಕಿರಣ್ ಬೆಟ್ಟಗೆರೆ, ಪ್ರಸನ್ನ ತಳವಾರ, ಉಮಾಶಂಕರ್, ಸೋಮಶೇಖರ್, ಶಾರದಾ, ನಂದೀಶ್ ಬಂಕೇನಹಳ್ಳಿ, ಸಯ್ಯದ್ ಮತ್ತಿತರರಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ