tejasvi 3

 

 

ಲೇಖನ :  ಬಿಎಸ್ ಜಯರಾಂ ಬಿದರಹಳ್ಳಿ

ಮಾಜಿ ಅಧ್ಯಕ್ಷರು ಕರ್ನಾಟಕ ಬೆಳೆಗಾರರ ಒಕ್ಕೂಟ

***************

 

ದಿವಂಗತ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರು ಸಾಹಿತಿಗಳು ,ಇದೇ ದಿನ ಏಪ್ರಿಲ್ 05,2007 ರಂದು ನಿಧನರಾದ ದಿನ.

ಜನಪ್ರಿಯ ವಿಶಿಷ್ಟ ಲೇಖಕರು, ಕಾದಂಬರಿಕಾರರು ಹಾಗೂ ಪರಿಸರವಾದಿಗಳು ,ವಿಶ್ವ ಮಾನವ ಸಂದೇಶವನ್ನು ಸಾರಿದ ರಾಷ್ಟ್ರಕವಿ ಕುವೆಂಪು ರವರ ಸುಪುತ್ರರಾಗಿದ್ದರು.

ನವ್ಯ ಸಾಹಿತ್ಯದ ನಂತರ ಬಂಡಾಯ ಧೋರಣೆಯ ಬೆಳವಣಿಗೆ ಮೂಲಕ ಪ್ರಸಿದ್ಧರಾಗಿದ್ದರು.

ತೇಜಸ್ವಿಯವರ ಕೃತಿಗಳು, ನಿಸರ್ಗ, ವಿಜ್ಞಾನ , ರಹಸ್ಯ ಮತ್ತು ಸಾಮಾನ್ಯ ಜನರಿಗೋಸ್ಕರ ಬದುಕನ್ನು ವಿಶಿಷ್ಟವಾಗಿ ಚಿತ್ರಿಸಿದೆ.

ಪರಿಸರ ಕಾಳಜಿ , ತರ್ಕಬದ್ಧ ಚಿಂತನೆ ,ಇವುಗಳನ್ನು ಹಳ್ಳಿ ಭಾಷೆಯಲ್ಲಿ ಬರಹಗಳ ಸೊಗಡನ್ನು ನಾವು ಅವರ ಬರವಣಿಗೆಯಲ್ಲಿ ಕಾಣುತ್ತಿದ್ದೆವು .

ಪಕ್ಷಿಗಳ ವೀಕ್ಷಣೆ ,ಫೋಟೋಗ್ರಫಿ,ಸಾಹಸ ಮತ್ತು ತೋಟಗಾರಿಕಾ ಬೆಳೆಗಳ ಬಗ್ಗೆ ಇಚ್ಛಾಶಕ್ತಿ ಇತ್ತು.
ಇವರು ಸಾಹಿತ್ಯ ಕ್ಷೇತ್ರದಲ್ಲಿ ಬರೆದ ಕಾದಂಬರಿಗಳು ಕಾವ್ರೋಲು, ಜುಗಾರಿ ಕ್ರಾಸ್,ಚಿದಂಬರ ರಹಸ್ಯ, ಇವೂ ವಿಶೇಷ ಕಾದಂಬರಿಗಳು.

ಅಬಚೂರಿನ ಪೋಸ್ಟ್ ಆಫೀಸ್ ತಬರನಕಥೆ ಇವುಗಳನ್ನು ವಿಶಿಷ್ಟವಾಗಿ ಸಿನಿಮಾ ಮಾಡಿ ಪ್ರಪಂಚದಲ್ಲಿ ಎಲ್ಲಾ ಕಡೆ ಪ್ರದರ್ಶನ ಆಗಿ ಅದಕ್ಕೆ ಹಲವಾರು ಪ್ರಶಸ್ತಿ ಬಂದಿತು .

ಮೂಡಿಗೆರೆಯಲ್ಲಿ ವಾಸವಿದ್ದ ಇವರು ಬದುಕಿನ ನಂತರ ಮೂಡಿಗೆರೆಯಲ್ಲಿ ಪೂರ್ಣ ಚಂದ್ರ ತೇಜಸ್ವಿ ಪ್ರತಿಷ್ಠಾನ ಎಂದು ಕೊಟ್ಟಿಗೆಹಾರದಲ್ಲಿಯೂ ಇದೆ.
ರೈತರ ಬಗ್ಗೆ ಕಾಳಜಿ ಹೆಚ್ಚು ಇತ್ತು ಇವರಿಗೆ .

ಕಾಫಿ ಬೆಳೆಗಾರರಿಗೆ ಮುಕ್ತ ಮಾರುಕಟ್ಟೆಗೆ ಬರಲು ಪ್ರಮುಖ ಕಾರಣಕರ್ತರು ಇವರು .
ಮುಕ್ತ ಮಾರುಕಟ್ಟೆ ಬಗ್ಗೆ ಪ್ರಥಮ ಪೀಠಿಕೆ ಹಾಕಿದ ಇವರು 1992 -94ರಲ್ಲಿ ಕಾಫಿ ಮುಕ್ತ ಮಾರುಕಟ್ಟೆಗೆ ಬಂತು .
ಆದರೆ ಅವರ ಹೋರಾಟದ ಬಗ್ಗೆ ಅವಹೇಳನಕಾರಿಯಾಗಿ ಪ್ರಮುಖರು ಹೇಳಿದ್ದರು.
ಆದರೂ ಬಿಡದೆ ಕರ್ನಾಟಕ ಬೆಳೆಗಾರರ ಒಕ್ಕೂಟ ಹಾಗೂ ಎಲ್ಲ ಪ್ರಮುಖರು ಸೇರಿ ಆಗಿನ ಕಾಲದ ಪ್ರಧಾನ ಮಂತ್ರಿಗಳಾದ ಶ್ರೀ ಪಿ ವಿ ನರಸಿಂಹರಾವ್ ರವರ ಕಾಲದಲ್ಲಿ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳಿಸಲಾಯಿತು.

ಇವರು ಕಾಫಿ ಬೆಳೆಗಾರರಿಗೆ ಸಾಕಷ್ಟು ಸಹಾಯ ಮಾಡಿದ್ದಿರಲ್ಲದೆ
ಕರ್ನಾಟಕ ಬೆಳೆಗಾರರ ಒಕ್ಕೂಟದ ಬೈಲಾ ಪ್ರಥಮವಾಗಿ ತಯಾರು ಮಾಡಿ ಒಕ್ಕೂಟದ ಸ್ಥಾಪನೆ ಆಗಲು ಪ್ರಮುಖ ಕಾರ್ಯಕರ್ತರು ಇವರು.
ಬೆಳೆಗಾರರ ಸಂಘಟನೆ ಕೆಲ ತಿದ್ದುಪಡಿಗಳೊಂದಿಗೆ ಇದನ್ನು ಮುಂದುವರಿಸಿಕೊಂಡು ಇಂದು ಹೋಗುತ್ತಿದ್ದೇವೆ.

ಮೂಡಿಗೆರೆ ತಾಲೂಕು ಬೆಳಗಾರರ ಸಂಘ 1985 ರಲ್ಲಿ ಸ್ಥಾಪನೆಯಾಯಿತು. ಸ್ಥಾಪನೆಯ ಸೂತ್ರದಾರರು ಇವರಾಗಿದ್ದರು.ಇವರ ಜೊತೆ ಮೂಡಿಗೆರೆಯ ಪ್ರಮುಖರು ಕೈಜೋಡಿಸಿ ಮೂಡಿಗೆರೆ ತಾಲ್ಲೂಕು ಬೆಳೆಗಾರರ ಸಂಘ ಸ್ಥಾಪನೆಯಾಯಿತು.

ಶ್ರೀಯುತರು ಅಗಲಿ ಸುಮಾರು 19 ವರ್ಷಗಳ ಕಾಲ ಆದರು ಅವರ ನೆನಪು ಇಡೀ ಸಮಾಜ ನೆನಪಿಸಿಕೊಳ್ಳಬೇಕಾಗುತ್ತದೆ .ಅದಕ್ಕಾಗಿ ಅವರ ಧರ್ಮಪತ್ನಿ ದಿವಂಗತ ರಾಜೇಶ್ವರಿಯವರು ಬರೆದ ಕೃತಿ “ನನ್ನ ತೇಜಸ್ವಿ “ಇದು ನಾಟಕ ರೂಪದಲ್ಲಿ ಇಡೀ ರಾಜ್ಯದ್ಯಂತ ಪ್ರದರ್ಶನ ನಡೆಯುತ್ತಿದೆ.

ಇಡೀ ಕಾಫಿ ಬೆಳೆಗಾರರ ಸಮುದಾಯ ಮತ್ತು ಪರಿಸರವಾದಿಗಳು ಇವರನ್ನು ಸ್ಮರಣೆ ಮಾಡಿಕೊಳ್ಳುವುದು ಅತಿ ಮುಖ್ಯ .

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ