ಭಾರತೀಯ ಜನತಾ ಪಕ್ಷ 1980ರಲ್ಲಿ ಸ್ಥಾಪನೆಯಾಗಿದ್ದು, ಇಂದು ವಿಶ್ವದ ಅತಿ ದೊಡ್ಡ ರಾಜಕೀಯ ಪಕ್ಷವಾಗಿ ಬೆಳೆದಿದೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಗಜೇಂದ್ರ ಕೊಟ್ಟಿಗೆಹಾರ ಹೇಳಿದರು.
ಅವರು ಸೋಮವಾರ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಏರ್ಪಡಿಸಿದ್ದ ಬಿಜೆಪಿ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಪಕ್ಷದ ಬೆಳವಣಿಗೆಗೆ ಅನೇಕ ಮಹನೀಯರು ತಮ್ಮ ಇಡೀ ಜೀವನವನ್ನೇ ಅರ್ಪಿಸಿದ್ದಾರೆ. ಮುಖ್ಯವಾಗಿ ಅಟಲ್ ಬಿಹಾರಿ ವಾಜಪೇಯಿ ಮತ್ತು ಎಲ್.ಕೆ.ಅಡ್ವಾಣಿ ಅವರಂತಹ ಮಹಾನ್ ನಾಯಕರ ಸೇವೆ ನಾವು ಎಂದಿಗೂ ಸ್ಮರಿಸಬೇಕಾಗಿದೆ. ಇಂದು ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತವು ವಿಶ್ವದಲ್ಲಿ ಪ್ರಭಾವಿ ರಾಷ್ಟ್ರವಾಗಿ ಬೆಳೆಯುತ್ತಿದೆ. ಅಭಿವೃದ್ಧಿ, ಡಿಜಿಟಲ್ ಕ್ರಾಂತಿ, ಸ್ವಚ್ಛತಾ ಅಭಿಯಾನ, ಮತ್ತು ಆತ್ಮನಿರ್ಭರ ಭಾರತದ ಕನಸುಗಳನ್ನು ಸಾಕಾರಗೊಳಿಸುವಲ್ಲಿ ಕೇಂದ್ರ ಸರಕಾರ ಮಹತ್ವದ ಹೆಜ್ಜೆಯನ್ನಿಡುತ್ತಿದೆನ ಎಂದು ಹೇಳಿದರು.
ಬಿಜೆಪಿ ಮುಖಂಡ ಡೀಪಕ್ ದೊಡ್ಡಯ್ಯ ಮಾತನಾಡಿ, ಇಂದು ದೇಶಾಧ್ಯಂತ ಬಿಜೆಪಿ ಸಂಸ್ಥಾಪನಾ ದಿನವನ್ನು ಹೆಮ್ಮೆಯಿಂದ ಆಚರಿಸಲಾಗುತ್ತಿದೆ. ಈ ಶುಭ ದಿನದಂದು ಪ್ರತಿಯೊಬ್ಬರೂ ದೇಶ ಸೇವೆ, ಸಮಾಜದ ಅಭಿವೃದ್ಧಿ ಮತ್ತು ಸತ್ಯನಿಷ್ಠೆ ರಾಜಕಾರಣಕ್ಕೆ ನಮ್ಮನ್ನು ಅರ್ಪಿಸೋಣ. ಅಲ್ಲದೇ ಪಕ್ಷದ ಮೂಲ ತತ್ವಗಳಾದ ರಾಷ್ಟ್ರಭಕ್ತಿ, ಸುಶಾಸನ, ಸಬ್‍ಕಾಸಾಥ್, ಸಬ್‍ಕಾ ವಿಕಾಸ್ ಎಂಬ ಸಂದೇಶದ ಮೂಲಕ ದೇಶದ ಸಮಗ್ರ ಅಭಿವೃದ್ಧಿಗೆ ಶ್ರಮಿಸೋಣ ಎಂದು ಮನವಿ ಮಾಡಿದರು.
ಮುಖಂಡರಾದ ಭರತ್ ಬಾಳೂರು, ವಿನಯ್ ಹಳೆಕೋಟೆ, ಪಂಚಾಕ್ಷರಿ, ಲೋಕೇಶ್ ಮರ್ಕಲ್, ಪರೀಕ್ಷಿತ್ ಜಾವಳಿ, ಸುಂದ್ರೇಶ್ ಕೊಣಗೆರೆ, ಪ್ರವಿಣ್ ಮಗ್ಗಲಮಕ್ಕಿ, ಭರತ್, ಮಂಜು ಪಟೇಲ್, ರಂಗನಾಥ್, ಸುನೀಲ್, ಕಲ್ಲೇಶ್ ಬಾಳೂರು, ಸಂಬಾವತಿ, ಸಂದೇಶ್ ಗುತ್ತಿ, ರಾಮೇಗೌಡ, ಸಂದೀಪ್ ಕೆಲ್ಲೂರು, ಆದರ್ಶ ಕನ್ನಳ್ಳಿ, ಪ್ರಕಾಶ್ ಕಿರುಗುಂದ, ಸಚಿನ್ ಬಾನಳ್ಳಿ, ಅಂಭಾವತಿ, ರತೀಶ್ ಕೂಡಳ್ಳಿ, ಸುನೀಲ್ ಮಣ್ಣಿಕೆರೆ ಮತ್ತಿತರರಿದ್ದರು.



