IMG_20260509_191854939_MFNR

 

 

ಚಿಕ್ಕಮಗಳೂರು ಜೀವನಸಂಧ್ಯಾ ವೃದ್ದಾಶ್ರಮದಲ್ಲಿ 35ಲಕ್ಷರೂ. ಅಂದಾಜುವೆಚ್ಚದ ನವೀಕೃತ ಪಾಕಶಾಲೆ ಮತ್ತು ಸಿಬ್ಬಂದಿ ವಸತಿಗೃಹವನ್ನು ರೋಟರಿಜಿಲ್ಲಾ ಮಾಜಿಗೌರ್ನರ್ ಎಂ.ಸಿ.ಶೇಖರ್ ಮತ್ತು ಇನ್ನರ್‍ವ್ಹೀಲ್ ಮಾಜಿಅಧ್ಯಕ್ಷೆ ಲೇಖಾಚಂದ್ರಶೇಖರ್ ಲೋಕಾರ್ಪಣೆಗೊಳಿಸಿದರು.

ಚಿಕ್ಕಮಗಳೂರು ರೋಟರಿ ಮತ್ತು ಇನ್ನರ್‍ವ್ಹೀಲ್ ಟ್ರಸ್ಟ್ ಹೊರವಲಯದ ಕದ್ರಿಮಿದ್ರಿಯಲ್ಲಿ ನಿರ್ವಹಿಸುತ್ತಿರುವ ಜೀನವಸಂಧ್ಯಾ ವೃದ್ಧಾಶ್ರಮದ ವಾಸಿಗಳಿಗೆ ಅನುಕೂಲವಾಗುವಂತೆ ಆಧುನೀಕರಣ ವ್ಯವಸ್ಥೆಗೆ ಅನುಕೂಲವಾಗಿ ಪಾಕಶಾಲೆಯನ್ನು ನಿರ್ಮಿಸಲಾಗಿದೆ.  ನಾಲ್ವರು ಸಿಬ್ಬಂದಿ ಕುಟುಂಬದ ವಾಸಕ್ಕಾಗಿ ವಸತಿಗೃಹವನ್ನು ರೋಟರಿ ಪರಿವಾರದ ನೆರವಿನೊಂದಿಗೆ ನಿರ್ಮಿಸಲಾಗಿದೆ.  ಶಶಿಪ್ರಸಾದ 35,000ರೂ.ವೆಚ್ಚದಲ್ಲಿ ನಿರ್ಮಸಿಕೊಟ್ಟ ಉಯ್ಯಾಲೆ ಆಶ್ರಮವಾಸಿಗಳಿಗೆ ಸಂತಸ ಹೊಮ್ಮಿಸಿತು.

ಸರಳ ಸಮಾರಂಭದಲ್ಲಿ ನೂತನ ವ್ಯವಸ್ಥೆಗೆ ಆರ್ಥಿಕ ನೆರವು ನೀಡಿದ ಎಲ್ಲ ದಾನಿಗಳನ್ನು ಸ್ಮರಣಿಕೆಯೊಂದಿಗೆ ಟ್ರಸ್ಟ್ ಅಧ್ಯಕ್ಷ ಎನ್.ಶ್ರೀಕಾಂತಶೆಟ್ಟಿ, ಕಾರ್ಯದರ್ಶಿ ಎಂ.ಎನ್.ರಾಕೇಶ್ ಖಜಾಂಚಿ ಎ.ಸಿ.ಸಂತೋಷ, ಉಪಾಧ್ಯಕ್ಷೆ ಪದ್ಮಜಯಪ್ರಕಾಶ  ತಂಡ ಗೌರವಿಸಿತು.

hdr

ಈ ಸಂದರ್ಭದಲ್ಲಿ ಜೀವನಸಂಧ್ಯಾ ನಡೆದುಬಂದ ಹಾದಿ ವಿವರಿಸಿದ ಶ್ರೀಕಾಂತಶೆಟ್ಟಿ ಹಾಗೂ ರಾಕೇಶ್ 44ವರ್ಷಗಳ ಹಿಂದೆ ಅಂದಿನ ರೋಟರಿ ಜಿಲ್ಲಾ ಗೌರ್ನರ್ ಜಿ.ಸಿ.ಸಿಪ್ಪಾನಿ ಅವರ ಆಸಕ್ತಿ ಪರಿಣಾಮವಾಗಿ ಆರಂಭಗೊಂಡು ದಾನಿಗಳ ಸಹಕಾರದೊಂದಿಗೆ ನಿರಂತರವಾಗಿ ಮುನ್ನಡೆಸಲಾಗುತ್ತಿದೆ.  ಕಣ್ಣಿನ ಆಸ್ಪತ್ರೆಯನ್ನು ಜೋಡಿಸಿದ್ದು, ಭಜನಾಕೇಂದ್ರ. ಗಣೇಶನ ಗುಡಿ, ಸಮುದಾಯಭವನವೂ ನಿರ್ಮಾಣಗೊಂಡಿದೆ ಎಂದರು.

ಹಂತ ಹಂತವಾಗಿ ವೃದ್ಧಾಶ್ರಮವಾಸಿಗಳಿಗೆ ಅನುಕೂಲತೆ-ಸೌಲಭ್ಯಗಳನ್ನು ಹೆಚ್ಚಿಸಲಾಗುತ್ತಿದೆ.  ಪ್ರಸ್ತುತ ತಂಡ ಸುಮಾರು 35ಲಕ್ಷರೂ.ಗಳನ್ನು ಟ್ರಸ್ಟಿಗಳಿಂದ,  ರೋಟರಿ ಪರಿವಾರ, ಸಹೃದಯ ನಾಗರಿಕರಿಂದ ಸಂಗ್ರಹಿಸಿ ಪಾಕಶಾಲೆಯನ್ನು ನವೀಕರಣಗೊಳಿಸಲಾಗಿದೆ ಎಂದ ಕಾರ್ಯದರ್ಶಿ ರಾಕೇಶ್,  ಅಡುಗೆಕೋಣೆಯ ನೆಲ ಹಾಗೂ ಗೋಡೆಗಳಿಗೆ ಉತ್ತಮ ಟೈಲ್ಸ್ ಅಳವಡಿಸಲಾಗಿದೆ.  ಸುರಕ್ಷಾತಾ ದೃಷ್ಟಿಯಿಂದ ಗ್ಯಾಸ್ ಪೈಪ್‍ಲೈನ್ ಸಿದ್ಧಪಡಿಸಲಾಗಿದೆ.  ಹಿಟ್ಟು ನಾದುವ ಮತ್ತು ರೊಟ್ಟಿ ಮಾಡಿ ಬೇಯಿಸುವ ಯಂತ್ರವನ್ನು ಅಳವಡಿಕೆಯೂ ಸೇರಿದಂತೆ ಆಧುನಿಕಸ್ಪರ್ಶ ನೀಡಲಾಗಿದೆ ಎಂದವರು ವಿವರಿಸಿದರು.

ಶ್ರೀಕಾಂತಶೆಟ್ಟಿ ಸ್ವಾಗತಿಸಿ, ರಾಕೇಶ ನಿರೂಪಿಸಿ ಚಿಕ್ಕಮಗಳೂರು ರೋಟರಿಕ್ಲಬ್ ಅಧ್ಯಕ್ಷ ಲಿಖಿತ್ ವಂದಿಸಿದರು.  ರೋಟರಿ ಪರಿವಾರದಿಂದ ಆಯೋಜಿಸಿದ್ದ ಸಂಗೀತಸಂಜೆ ಆಕರ್ಷಕವಾಗಿತ್ತು.  ಹಲವು ದಶಕಗಳಿಂದ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಹರಿಸಿಂಗ್ ಮತ್ತು ಚಂದ್ರಕಲಾ ದಂಪತಿಗಳು ನೇತ್ರಚಿಕಿತ್ಸಾ  ತಜ್ಞೆ ಡಾ.ರಶ್ಮಮೋಹನ್, ನಿಕಟಪೂರ್ವ ಟ್ರಸ್ಟ್ ಅಧ್ಯಕ್ಷರಾಗಿದ್ದ ಎ.ಎಂ.ನಂಜುಂಡಸ್ವಾಮಿ, ಡಿ.ಎಚ್.ನಟರಾಜ್ ಮತ್ತು ಜಯಪ್ರಕಾಶ್, ನಿತ್ಯದಾನಿಎಚ್.ಸಿ.ಶಶಿಪ್ರಸಾದ ಮತ್ತಿತರರನ್ನು ಗೌರವಿಸಲಾಯಿತು.  ಟ್ರಸ್ಟಿಗಳಾದ ಎ,ಸಿ.ಸಂತೋಷ್ ಚೆಂದಿಲಕುಮಾರ್, ರಘುನಂದನ್, ಅಭಿಜಿತ್‍ಪೈ, ಅನಂತೇಗೌಡ ವಿನಯ್, ನಯನಾ ವೇದಿಕೆಯಲ್ಲಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ