mescom 2

 

 

ಮೆಸ್ಕಾಂ ವ್ಯಾಪ್ತಿಗೆ ಒಳಪಡುವ ಕಾಫಿ ಬೆಳೆಗಾರರ 10 ಹೆಚ್.ಪಿ ವರೆಗಿನ ನೀರಾವರಿ ಪಂಪ್ ಸೆಟ್ ಸ್ಥಾವರಗಳ ವಿದ್ಯುತ್ ಬಿಲ್ ಗಳ ಮೇಲಿನ ಬಡ್ಡಿಯನ್ನು ಮನ್ನಾ  ಮಾಡಲಾಗಿದೆ.

ಈ ಸಂಬಂಧ ಮೆಸ್ಕಾಂ ಪ್ರಕಟಣೆ ಹೊರಡಿಸಿದ್ದು, ಅದರ ವಿವರ ಕೆಳಗಿನಂತಿದೆ.

ರಾಜ್ಯದಲ್ಲಿನ ಸಣ್ಣ ಮತ್ತು ಮಧ್ಯಮ ಕಾಫಿ ಬೆಳೆಗಾರರ 10 ಹೆಚ್.ಪಿ ವರೆಗಿನ ನೀರಾವರಿ ಪಂಪ್ ಸೆಟ್ ಸ್ಥಾವರಗಳ ದಿನಾಂಕ:01.07.2022 ರಿಂದ ಬಳಕೆಯಾಗುವ ವಿದ್ಯುತ್‌ ಶುಲ್ಕವನ್ನು ಹಲವು ಷರತ್ತಿಗೊಳಪಟ್ಟು ಅರ್ಹ ಗ್ರಾಹಕರಿಗೆ ಮರು ಪಾವತಿಸಲು ಉಲ್ಲೇಖ (1) ರಲ್ಲಿ ಆದೇಶಿಸಲಾಗಿರುತ್ತದೆ.

ಮುಂದುವರೆದು, ಉಲ್ಲೇಖ (2) ರ ಪ್ರಕಾರ 10 ಹೆಚ್.ಪಿ ಒಳಗಿನ ಸಣ್ಣ ಮತ್ತು ಮಧ್ಯಮ ಕಾಫಿ ಬೆಳೆಗಾರರ ಬಾಕಿ ವಿದ್ಯುತ್ ಶುಲ್ಕದ ಮೊತ್ತವನ್ನು ಪಾವತಿಸುವ/DBT ಅಡಿಯಲ್ಲಿ ಪಾವತಿಸುವ ಸಂಬಂಧ ದಿನಾಂಕ:09.02.2026 ರಂದು ಮಾನ್ಯ ಇಂಧನ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಕೆಳಗಿನಂತೆ ಸೂಚಿಸಲಾಗಿರುತ್ತದೆ.

“ದಿನಾಂಕ : 30.06.2022 ರ ಅಂತ್ಯದ ವಿದ್ಯುತ್ ಶುಲ್ಕದ ಒಟ್ಟು ಬಾಕಿ ಮೊತ್ತ ರೂ.16 ಕೋಟಿಗಳಲ್ಲಿ ದಿನಾಂಕ 31.12.2025 ರವರೆಗೆ ರೂ.6 ಕೋಟಿ ಬಡ್ಡಿ ಮೊತ್ತವನ್ನೊಳಗೊಂಡ ಬಾಕಿ ಮೊತ್ತವನ್ನು ಗ್ರಾಹಕರು ಪಾವತಿಸಲಾಗಿದ್ದು, ಬಡ್ಡಿ ಮೊತ್ತವನ್ನೊಳಗೊಂಡಂತೆ ರೂ.9 ಕೋಟಿ ಬಾಕಿ ಉಳಿದಿರುತ್ತದೆ. ಸದರಿ ಬಾಕಿ ಮೊತ್ತದಲ್ಲಿ ಬಡ್ಡಿ ಮೊತ್ತ ರೂ.4 ಕೋಟಿಗಳನ್ನು ಪೂರ್ಣವಾಗಿ ಮನ್ನಾ ಮಾಡುವ ಬಗ್ಗೆ ಈಗಾಗಲೇ ಪಾವತಿಸಿರುವ ಪ್ರಕರಣಗಳಲ್ಲಿ ಬಡ್ಡಿಗೆ ಹೊಂದಾಣಿಕೆಗೊಳಿಸಿರುವ ಮೊತ್ತವನ್ನು ಅಸಲಿನ ಮೊತ್ತಕ್ಕೆ ಹೊಂದಾಣಿಕೆಗೊಳಿಸಿ ಪರಿಷ್ಕೃತ ಬಾಕಿ ಮೊತ್ತವನ್ನು ಲೆಕ್ಕಾಚಾರಗೊಳಿಸುವ ಮತ್ತು ಬಾಕಿ ಇರುವ ಪ್ರಕರಣಗಳಲ್ಲಿ ವಿದ್ಯುತ್ ಶುಲ್ಕ ಮೊತ್ತವನ್ನು ಮೂರು ತಿಂಗಳ ಕಾಲಾವಕಾಶದೊಳಗಾಗಿ ಪಾವತಿಸಿದಲ್ಲಿ ಬಡ್ಡಿಯನ್ನು ಮನ್ನಾ ಮಾಡುವುದು ಹಾಗೂ ಪಾವತಿಯಾಗದಿರುವ ಪ್ರಕರಣಗಳಲ್ಲಿ ಗ್ರಾಹಕರಿಗೆ ಬಡ್ಡಿ ಮನ್ನಾ ಅನುಕೂಲವು ಅನ್ವಯಿಸದಿರುವ ಬಗ್ಗೆ ಸಂಬಂಧಿಸಿದ ಕಂಪನಿಯ ಆಡಳಿತ ನಿರ್ದೇಶಕರ ಮಂಡಳಿಯ ಸಭೆಯಲ್ಲಿ ಕ್ರಮವಹಿಸಲು ಸೂಚಿಸಲಾಗಿರುತ್ತದೆ”.

ಈ ಬಗ್ಗೆ ಮೆಸ್ಕಾಂನ ಮಾನ್ಯ ನಿರ್ದೇಶಕರ ಮಂಡಳಿಯಲ್ಲಿ ದಿನಾಂಕ 11.05.2026 ರಂದು ಜರುಗಿದ 118 ನೇ ಸಭೆಯಲ್ಲಿ ಚರ್ಚಿಸಲಾಗಿದ್ದು, ಈ ಕೆಳಗಿನಂತೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.

-1. ಈ ಕುರಿತು ದಿನಾಂಕ 30.06.2022 ರ ಅಂತ್ಯಕ್ಕೆ ಇರುವ ಬಾಕಿಯನ್ನು ಇಲ್ಲಿಯವರೆಗೆ ಪಾವತಿಸದೇ ಇರುವ ಪ್ರತಿಯೊಬ್ಬ ಗ್ರಾಹಕರಿಗೆ ಅಸಲು ಬಾಕಿಯನ್ನು 03 ತಿಂಗಳೊಳಗಾಗಿ ಪಾವತಿಸಲು ತಿಳುವಳಿಕೆ ಪತ್ರವನ್ನು ದಿನಾಂಕ 30.05.2006 ರ ಒಳಗಾಗಿ ಮುದ್ದಾಂ ಆಗಿ ಜಾರಿಗೊಳಿಸಿ ಸ್ವೀಕೃತಿ ಪಡೆದು ಪಾವತಿಗಾಗಿ 03 ತಿಂಗಳ ಕಾಲಾವಕಾಶ ನೀಡುವುದು.

  1. ಸದರಿ ತಿಳುವಳಿಕೆ ಪತ್ರದಲ್ಲಿ ದಿನಾಂಕ 30.06.2022 ರ ಅಂತ್ಯಕ್ಕೆ ಪಾವತಿಸಲು ಬಾಕಿ ಇರುವ ಮೊತ್ತದ ಅಸಲು ಮತ್ತು ಬಡ್ಡಿ ವಿವರಗಳನ್ನು ಪ್ರತ್ಯೇಕವಾಗಿ ನಮೂದಿಸಿ ಅಸಲನ್ನು ಪಾವತಿಸಲು ಸೂಚಿಸುವುದು.
  2. ಈ ಯೋಜನೆಗೆ ಒಳಪಡುವ ಕಾಫಿ ಬೆಳೆಗಾರರು 30.06.2022 ಕ್ಕೆ ಪಾವತಿಸಲು ಬಾಕಿ ಇರುವ ಅಸಲು ಮತ್ತು ಬಡ್ಡಿ ಮೊತ್ತವನ್ನು ದಿನಾಂಕ 01.07.2022 ರಿಂದ 31.05.2026 ರವರೆಗಿನ ಅವಧಿಯಲ್ಲಿ ಪಾವತಿಸಿದ್ದಲ್ಲಿ ಪಾವತಿಸಿದ ಬಡ್ಡಿ ಮೊತ್ತವನ್ನು ದಿನಾಂಕ 30.06.2022 ಅಂತ್ಯಕ್ಕಿರುವ ಬಾಕಿ ಅಸಲು ಮೊತ್ತಕ್ಕೆ ಅಥವಾ ದಿನಾಂಕ 01.07.2022 ರ ನಂತರ ಮಾಡಲಾದ ಅಸಲು ಬೇಡಿಕೆ ಮೊತ್ತಕ್ಕೆ ಹೊಂದಾಣಿಕೆ ಮಾಡಲು ಪ್ರಸ್ತಾವಿಸುವುದು.
  3. ಹಾಗೆಯೇ, ಈ ಯೋಜನೆಗೆ ಒಳಪಡುವ ಕಾಫಿ ಬೆಳೆಗಾರರು 30.06.2022 ಕ್ಕೆ ಪಾವತಿಸಲು ಬಾಕಿ ಇರುವ ಅಸಲು ಮೊತ್ತವನ್ನು ದಿನಾಂಕ : 01.06.2026 ರಿಂದ 31.08.2026 ರವರೆಗಿನ ಅವಧಿಯಲ್ಲಿ ಪಾವತಿಸಿದ್ದಲ್ಲಿ ಅಂತಹ ಗ್ರಾಹಕರ 30.06.2022 ಕ್ಕೆ ಪಾವತಿಸಲು ಬಾಕಿ ಇರುವ ಬಡ್ಡಿ ಮೊತ್ತವನ್ನು ಮನ್ನಾ ಮಾಡಲು ಪ್ರಸ್ತಾವಿಸುವುದು.
  4. ಬಡ್ಡಿ ಮೊತ್ತದ ವಿವರಗಳನ್ನು ನಿರ್ದೇಶಕ ಮಂಡಳಿಯ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯುವ ಷರತ್ತಿಗೊಳಪಟ್ಟು ಮನ್ನಾ ಮಾಡಲು ಕ್ರಮವಹಿಸಲಾಗುವುದು. ಆದುದರಿಂದ ದಿನಾಂಕ 30.06.2022 ರಂದು ಇರುವ ಬಾಕಿಯನ್ನು ದಿನಾಂಕ :01.07.2022 ರಿಂದ 31.08.2026 ವರೆಗಿನ ಅವಧಿಯಲ್ಲಿ ಪಾವತಿಸಿದ ಸ್ಥಾವರವಾರು ಪ್ರತ್ಯೇಕ ಆಸಲು ಮತ್ತು ಬಡ್ಡಿಯ ವಿವರಗಳನ್ನು ಕಂಪನಿಯ ಆಂತರಿಕ ಪರಿಶೋಧನೆಗೆ ಒಳಪಡಿಸಿ ಲಗತ್ತಿಸಿದ ನಮೂನೆಯಲ್ಲಿ A3 ಹಾಳೆಯಲ್ಲಿ ಮುದ್ರಿತ ಪ್ರತಿಗಳನ್ನು ಕಾರ್ಪೋರೇಟ್ ಕಛೇರಿಗೆ ಸಲ್ಲಿಸುವುದು ಎಂದು ತನ್ನ ಆದೇಶದಲ್ಲಿ ತಿಳಿಸಿದೆ.

ಇಂದನ ಇಲಾಖೆಯ ಈ ಕ್ರಮವನ್ನು ಬೆಳೆಗಾರರ ಸಂಘಟನೆಗಳು ಸ್ವಾಗತಿಸಿದ್ದು, ರೈತರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಮನವಿ ಮಾಡಿವೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ