ನಿಗಮ ಮಂಡಳಿಗಳಲ್ಲಿ ಎಲ್ಲಾ ರೀತಿಯ ಅಧ್ಯಕ್ಷರು ಪದಾಧಿಕಾರಿಗಳು ಮೊದಲನೆ ಅವಧಿಯನ್ನು ಮುಗಿಸಿರುತ್ತಾರೆ. ಮುಂದಿನ ಅವದಿಗೆ ಹಾಲಿ ಹುದೆಗಳನ್ನು ಕಾರ್ಯಕರ್ತರಿಗೆ ನೀಡುವುದಾಗಿ ಬಿ.ಕೆ.ಹರಿಪ್ರಸಾದ್‍ರವರು ತಿಳಿಸಿದ್ದು ತಿಂಗಳುಗಳೇ ಕಳೆದರು ನೇಮಕ ಮಾಡಿರುವುದಿಲ್ಲಾ, ನೇಮಕ ವಿಳಂಬದಿಂದ ಪಕ್ಷದ ಸಂಘಟನೆ ತೊಂದರೆಯಾಗುತ್ತದೆ. ಮುಂಬರುವ ಎಲ್ಲಾ ಚುನಾವಣೆಗಳು ಹಾಗೂ ಪಕ್ಷಬಲವರ್ದನೆ ಗಮನದಲ್ಲಿಟ್ಟುಕೊಂಡು ನಿಗಮ ಮಂಡಳಿಗಳಿಗೆ ಅಧ್ಯಕ್ಷರು/ ಪದಾಧಿಕಾರಿಗಳನ್ನು ನೇಮಿಸುವಂತೆ ಕಾಂಗ್ರೆಸ್ ಮುಖಂಡ ಉಪ್ಪಳ್ಳಿ ಕೆ. ಭರತ್ ಅವರು ಕೆಪಿಸಿಸಿ ರಾಜ್ಯಧ್ಯಕ್ಷರಾದ ಬಿ.ಕೆ.ಹರಿಪ್ರಸಾದ್ ರವರಿಗೆ ಮನವಿ ಮಾಡಿದ್ದಾರೆ .
ಈ ಬಗ್ಗೆ ಮಾಧ್ಯಮದವರಿಗೆ ಮಾಹಿತಿ ನೀಡಿದ ಅವರು. ಕೆಪಿಸಿಸಿ ಅಧ್ಯಕ್ಷರಾಗಿರುವ ಬಿ.ಕೆ.ಹರಿಪ್ರಸಾದ್ ರವರು ಈ ಹಿಂದೆಯೇ ನಿಗಮ ಮಂಡಲಿಗಳು ಹಾಗೂ ಪಕ್ಷದಲ್ಲಿ ್ಲ ಕಾರ್ಯಕರ್ತರಿಗೆ ಅವಕಾಶ ಕೊಡುವುದಾಗಿ ತಿಳಿಸಿದ್ದು. ಈಗ ಅಧ್ಯಕ್ಷರಾಗಿ ತಿಂಗಳುಗಳೆ ಕಳೆದಿದ್ದು, ಇಲ್ಲಿಯವರೆಗೆ ಈ ವಿಷಯದ ಬಗ್ಗೆ ತಾವು ಹಾಗೂ ಸಂಬಂಧಪಟ್ಟವರು ಯಾರೂ ಕೂಡಾ ಕ್ರಮ ತೆಗೆದುಕೊಳ್ಳದಿರುವುದು ಹಲವು ಕಾರ್ಯಕರ್ತರು ಮತ್ತು ನಾಯಕರುಗಳಿಗೆ ನೋವುಂಟಾಗಿದೆ
ಕಾರ್ಯಕರ್ತರು ಈಗಾಗಲೇ ತಮ್ಮ ನೋವುಗಳನ್ನು ಹಾದಿ ಬೀದಿಯಲ್ಲಿ ತೋಡಿಕೊಳ್ಳುತ್ತಿದ್ದಾರೆ ಆದ ಕಾರಣ ಪಕ್ಷ ಮುಂದಿನ ಅವಧಿಗೆ ಸಂಘಟನೆ ಹಾಗೂ ಮುಂದಿನ ಎಲ್ಲಾ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಕಾರ್ಯಕರ್ತರುಗಳಿಗೆ ಅವಕಾಶ ಮಾಡಿಕೊಡಬೇಕು. ಹಾಗೂ ಮಂಡಳಿಯ ಆಯಾ ಕಟ್ಟಿನ ಜವಾಬ್ದಾರಿಗಳಲ್ಲಿ ಹೊಸದಾಗಿ ಪಕ್ಷಕ್ಕೆ ಸೇರಿದವರಿಗೂ ಕೂಡಾ ಅವಕಾಶ ಕಲ್ಪಿಸಿಕೊಡಬೇಕು. ಹಾಗೂ ಪಕ್ಷದಲ್ಲಿಯೂ ಕೂಡಾ ಎಲ್ಲರಿಗೂ ಉತ್ತಮ ಜವಾಬ್ದಾರಿಗಳನ್ನು ನೀಡಿ ಪಕ್ಷ ಸಂಘಟನೆಗೆ ಒತ್ತು ನೀಡಬೇಕು ಮತ್ತು ಮಹಿಳೆಯರನ್ನು ಬಹುತೇಕ ನಿರ್ಲಕ್ಷಿಸುವಂತೆ ಕಾಣುತ್ತಿದೆ. ಮಹಿಳೆಯರು ಕೂಡಾ ಪಕ್ಷ ಮತ್ತು ನಿಗಮ ಮಂಡಳಿಗಳಲ್ಲಿ ಉತ್ತಮ ಜವಾಬ್ದಾರಿಯ ಸ್ಥಾನಮಾನಗಳನ್ನು ನೀಡುವ ಮುಖಾಂತರ ಅವರನ್ನೂ ಕೂಡಾ ಪಕ್ಷ ಸಂಘಟನೆಗೆ ಬಳಸಿಕೊಳ್ಳಲು ಮುಂದಾಗಬೇಕು. ಹಾಗೂ ತಾಲ್ಲೂಕುವಾರು ಕಾರ್ಯಕರ್ತರ ಸಮಸ್ಯೆ ಮತ್ತು ನೋವುಗಳನ್ನು ಹಾಗೂ ಮುಂದಿನ ಚುನಾವಣೆಗಳ ಪರವಾಗಿ ಯಾವ ರೀತಿ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಚರ್ಚಿಸುವಂತಾಗಬೇಕು ಹಾಗೂ ಕಾರ್ಯಗಾರಗಳನ್ಮ್ನ ನಡೆಸಬೇಕು. ಜಿಲ್ಲಾ ಉಸ್ತುವಾರಿ ಸಚಿವರುಗಳು ಇಲ್ಲಿಯವರೆಗೆ ಕಾರ್ಯಕರ್ತರೊಡನೆ ಸಮಾಲೋಚನೆಯಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದಿಲ್ಲ. ಸರ್ವರಿಗೂ ಸಮಪಾಲು ಸರ್ವರಿಗೂ ಸರ್ವಬಾಳು ಹಾಗೂ ಸಾಮಾಜಿಕ ನ್ಯಾಯದಡಿಯಲ್ಲಿ ನಮ್ಮ ಪಕ್ಷ ನಡೆದುಕೊಳ್ಳುತ್ತಿದೆ ಎಂದು ಎಲ್ಲರೂ ನಂಬಿದ್ದಾರೆ. ಆದ್ದರಿಂದ ಈ ಮಾನದಂಡವನ್ನು ಪರಿಪೂರ್ಣವಾಗಿ ಜಾರಿಗೆ ತರಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯದರ್ಶಿ ಸುನಿಲ್ ಕುಮಾರ್ ಕೆ. ಉಪಸ್ಥಿತರಿದ್ದರು.


