September 2, 2026
;
Screenshot_20260831-142424~2 (1)

 

 

ಮಾತು ವ್ಯಕ್ತಿ ಮನಸ್ಸನ್ನು ಅರಳಿಸಬೇಕೆ ಹೊರತು, ಕೆರಳಿಸಬಾರದು. ಮಾತು ಸಮಾಜದ ಉತ್ಕರ್ಷ ಎತ್ತರಿಸಬೇಕೆಂಬುದೇ ಮನೆ ಮನದೆಡೆಗೆ ಶುದ್ಧ ನುಡಿ-ನಡಿಗೆ ಪ್ರವಚನ ಮಾಲಿಕೆಯ ಆಶಯ ಎಂದು ವಾಗ್ಮಿ-ಚಿಂತಕ ಸಾಹಿತಿ ಚಟ್ನಳ್ಳಿಮಹೇಶ್ ನುಡಿದರು.

ಚಿಕ್ಕಮಗಳೂರು ಐಸಿರಿ ಫೌಂಡೇಶನ್, ಮಾಧ್ಯಮ ಸಂಸ್ಕøತಿ ಪ್ರತಿಷ್ಠಾನ, ಲಯನ್ಸ್ ಕ್ಲಬ್ ಸಹಯೋಗದೊಂದಿಗೆ ‘ಆಷಾಢ-ಶ್ರಾವಣ’ ಮಾಸದ ಪ್ರವಚನ ಮಾಲಿಕೆ ‘ಮನೆ-ಮನದಡೆಗೆ ಶುದ್ಧ ನುಡಿ ನಡಿಗೆ’ ಆಂದೋಲನದ ಸಮಾರೋಪ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ನಗರದ ಲಯನ್ಸ್ ಸೇವಾ ಭವನದಲ್ಲಿ ಅವರು ಮಾತನಾಡಿದರು.

ಲೋಕದಲ್ಲಿ ಪ್ರತಿಯೊಬ್ಬರದ್ದೂ ಅವರದ್ದೇ ಆದ ಮಹತ್ವವನ್ನು ಹೊಂದಿರುತ್ತದೆ. ತಂದೆ, ತಾಯಿ, ಶಿಕ್ಷಕ, ಸೈನಿಕ, ವ್ಯಾಪಾರಿ, ರೈತ, ಉಪನ್ಯಾಸಕ, ಕೈಗಾರಿಕೋದ್ಯಮಿ, ರಾಜಕಾರಣಿ ಹೀಗೆ ಎಲ್ಲ ಪಾತ್ರಗಳನ್ನೂ ಸಮರ್ಥವಾಗಿ ನಿರ್ವಹಿಸುವಂತಾದರೆ ಸುಂದರ ಸಮಾಜ ನಮ್ಮದಾಗುತ್ತದೆ. ಎಲ್ಲ ವೃತ್ತಿಗಳೂ ಶ್ರೇಷ್ಠವೇ ಯಾವುದೂ ಮೇಲಲ್ಲ-ಕೀಳಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕೆಂದರು.

‘ನಾನು’ ‘ನನಗೇನಾಗಬೇಕು’ ಎಂದು ಸಾಮಾನ್ಯವಾಗಿ ಆಲೋಚಿಸುವ ಪ್ರವೃತ್ತಿ ನಮ್ಮೆಲ್ಲರದ್ದು. ಕೆಡುಕಾದರೆ ‘ನೀನು’ ಎಂದು ಕೈತೋರಿಸುತ್ತೇವೆ. ನಾನು ಮತ್ತು ನೀನು ಎರಡನ್ನೂ ಬದಿಗಿಟ್ಟು ‘ನಾವು’ ಎಂಬ ಸಮಷ್ಠಿಪ್ರಜ್ಞೆಯನ್ನು ರೂಢಿಸಕೊಂಡರೆ ಸಾಮರಸ್ಯದ ಸಮಾಜ ನಮ್ಮದಾಗುತ್ತದೆ. ಎಲ್ಲ ಪಾತ್ರಗಳೂ ಸಮರ್ಥವಾಗಿ ಕಾರ್ಯನಿರ್ವಹಿಸಿದಾಗ ಆರೋಗ್ಯಪೂರ್ಣ ಸಮಾಜ ನಮ್ಮದಾಗುತ್ತದೆ
ಮಾತಿಗೆ ಒಂದೇ ಅರ್ಥ ಗ್ರಹಿಸಬಹುದಾದರೆ, ಮೌನಕ್ಕೆ ಹಲವು ಅರ್ಥಗಳನ್ನು ಕಂಡುಕೊಳ್ಳಬಹುದು. ಮೌನದಿಂದ ಆತ್ಮೋನ್ನತಿ ಸಾಧ್ಯ. ಅದಕ್ಕಾಗಿಯೆ ಹಲವು ಋಷಿಮುನಿಗಳು ಮೌನದ ಮೂಲಕ ಆತ್ಮಶಕ್ತಿಯನ್ನು ವೃದ್ಧಿಸಿಕೊಳ್ಳುತ್ತಿದ್ದರು. ಬೆಂಗಳೂರಿನಲ್ಲಿ ದ್ರೌಪದಿ ಕರಗ ಹೊರುವವರು ಒಂಭತ್ತುದಿನ ಉಪವಾಸ-ಮೌನದಲ್ಲಿರುತ್ತಾರೆ. ಮೈಲಾರಲಿಂಗನ ಕಾರ್ಣೀಕ ಹೇಳುವವರೂ ಒಂಭತ್ತು ದಿನ ಉಪವಾಸದ ಜೊತೆಗೆ ಯಾರೊಂದಿಗೂ ಮಾತನಾಡದೆ ದೈವಿಕ ಅನುಭವ ಸಂಪಾದಿಸಿ ಎತ್ತರದ ಕಂಬಏರಿ ಒಗಟಿನ ಸಂದೇಶ ಸಾರಿ ತಕ್ಷಣ ನೆಲಕ್ಕುರುಳುವರೆಂದು ಉದಾಹರಿಸಿದರು.
ಮಹತ್ವದ ಯಾವುದೇ ದೊಡ್ಡಕೆಲಸ ಆರಂಭವಾಗುವುದು ಮೊದಲಹೆಜ್ಜೆಯಿಂದ. ಕಟ್ಟುವ ಕ್ರಿಯೆ ಕೆಲವರಿಂದ ಆರಂಭಗೊಂಡು ಸಮಾಜವನ್ನು ವ್ಯಾಪಿಸುತ್ತದೆ. ಹಿಮಾಲಯವನ್ನು ಮೊದಲು ಏರಿದ ಪರ್ವತಾರೋಹಿ ತೇನ್‍ಸಿಂಗ್ ಹೇಳಿದ್ದನ್ನು ಉಲ್ಲೇಖಿಸಿದ ಮಹೇಶ್, ‘ಕಣ್ಣುಮುಂದೆ ಇರುವ ದೊಡ್ಡಪರ್ವತ ಏರಿದ ಮೇಲೆ ತನ್ನ ಕಾಲಬುಡದಲ್ಲಿರುತ್ತದೆ’ ಎಂಬುದನ್ನು ಅರಿಯಬೇಕೆಂದರು.

ಎಲ್ಲವನ್ನೂ ಬಲ್ಲೆನೆಂದು ಬೀಗುವುದಕ್ಕಿಂತ ಬಾಗುವುದರಲ್ಲಿ ಹಿರಿತನವಿದೆ. ಎಲ್ಲರನ್ನೂ ಹಿರಿಯರನ್ನಾಗಿಸಿ ತನ್ನನ್ನು ಕಿರಿಯನೆಂದು ಬಣ್ಣಿಸಿದವರು ವಚನಕಾರರು. ಎನಗಿಂತ ಕಿರಿಯರಿಲ್ಲ, ಶಿವಭಕ್ತರಿಗಿಂತ ಹಿರಿಯರಿಲ್ಲ ಎಂದು ಬಸವಣ್ಣನವರು ಸಾರಿದರು. ಕಿಂಕರತ್ವವೇ ಶರಣತತ್ವ. ಶರಣಾಗತಿಯಿಂದ ಎತ್ತರಕ್ಕೇರಲು ಸಾಧ್ಯ ಎಂದ ಚಟ್ನಳ್ಳಿಮಹೇಶ್, ಬಯಲು ವಿಶ್ವವಿದ್ಯಾನಿಲಯದಲ್ಲಿ ಕಲಿತ ರೈತರ ಲೋಕಾನುಭವ ಅನನ್ಯ-ಅಪೂರ್ವ ಎಂದರು.

ಆಷಾಢ ಮತ್ತು ಶ್ರಾವಣದ 30ದಿನಗಳಲ್ಲಿ ಸದ್ವಿಚಾರಗಳನ್ನು ಜನಮನಕ್ಕೆ ಮುಟ್ಟಿಸುವಲ್ಲಿ ಪ್ರವಚನಮಾಲಿಕೆ ಯಶಸ್ವಿಯಾಗಿದೆ ಎಂದು ನಗರಸಭಾ ಮಾಜಿಅಧ್ಯಕ್ಷ ಕೆ.ಶ್ರೀನಿವಾಸ್ ಸಮಾರೋಪ ಸಮಾರಂಭ ಉದ್ಘಾಟಿಸಿ ನುಡಿದರು.

ಆಗಸ್ಟ್ 31ರಿಂದ ಅಮೇರಿಕಾ ಪ್ರವಾಸ ಕೈಗೊಳ್ಳಲಿರುವ ಚಟ್ನಳ್ಳಿಮಹೇಶ್‍ರಿಗೆ ಅಭಿನಂದಿಸಿ ಮಾತನಾಡಿದ ಮಾಧ್ಯಮ ಸಂಸ್ಕøತಿ ಪ್ರತಿಷ್ಠಾನದ ಅಧ್ಯಕ್ಷ ಪ್ರಭುಲಿಂಗಶಾಸ್ತ್ರಿ 14ನೇ ಬಾರಿಗೆ ಪ್ರವಾಸಮಾಡಿ ಅತಿಹೆಚ್ಚು ಬಾರಿ ಅಕ್ಕ ಸಮ್ಮೇಳನಕ್ಕೆ ಆಹ್ವಾನಿತರಾಗಿರುವುದು ಕನ್ನಡ ನಾಡಿನ ಹೆಮ್ಮೆ. ಜನಪದ-ಶರಣಸಾಹಿತ್ಯವನ್ನು ಜಗತ್ತಿನಾದ್ಯಂತ ಪಸರಿಸುವಲ್ಲಿ ಮಹೇಶಣ್ಣನವರ ಪಾತ್ರ ಹಿರಿದು. ಅವರ ವಾಗ್ಝರಿ-ವೇಗದ ಮಾತಿನಿಂದ ಹತ್ತಾರುಸಾವಿರ ಜನರನ್ನು ಸೆಳೆಯಬಲ್ಲವರೆಂದರು. ದೇವಾಂಗಸಮಾಜ 10,000 ರೂ. ಮತ್ತು ಲಯನ್ಸ್ ಸಂಸ್ಥೆ 20,000ರೂ. ನೀಡಿ ಚಟ್ನಳ್ಳಿಮಹೇಶ್‍ರನ್ನು ವಿಶೇಷವಾಗಿ ಸನ್ಮಾನಿಸಿದರು.

ಲಯನ್ಸ್ ವಲಯಾಧ್ಯಕ್ಷ ಜಿ.ರಮೇಶ್ 30ದಿನಗಳ ಪ್ರಾಯೋಜಕರನ್ನು ಗೌರವಿಸಿದರು. ಸಮಾರಂಭ ಅಧ್ಯಕ್ಷತೆವಹಿಸಿದ್ದ ಲಯನ್ಸ್ ಅಧ್ಯಕ್ಷ ಟಿ. ನಾರಾಯಣಸ್ವಾಮಿ ಸ್ವಾಗತಿಸಿ, ನಿಕಟಪೂರ್ವ ಅಧ್ಯಕ್ಷ ಗೋಪಿಕೃಷ್ಣ ವಂದಿಸಿದರು.

ಐಸಿರಿ ಫೌಂಡೇಶನ್ ಅಧ್ಯಕ್ಷ ರೋಹನ್ ಭಾರ್ಗವಪುರಿ ಪ್ರಾಸ್ತಾವಿಸಿದ್ದು, ವೇಣುಗೋಪಾಲ್ ನೀತಿಸಂಹಿತೆ ಮಂಡಿಸಿ, ಚಂದನ್ ಪ್ರಾರ್ಥಿಸಿದರು. ನಜ್ಮಾಆಲಿ ಧ್ವಂಜವಂದನೆ ಮಾಡಿದ್ದು, ಡಾ.ಜಿ.ಟಿ.ಮಂಜುಳಾ ಕಾರ್ಯಕ್ರಮ ನಿರೂಪಿಸಿದರು.

ಭಗವತಿ ಕಾರ್ತೀಕ್ ಅತಿಥಿಗಳನ್ನು ಪರಿಚಯಿಸಿದರು. ಬೇಲೂರಿನ ಚಂದನ್ ತಂಡದಿಂದ ಸಂಗೀತ ಕಾರ್ಯಕ್ರಮ ಗಮನಸೆಳೆಯಿತು. ಲಯನ್ಸ್ ಖಜಾಂಚಿ ಅಣ್ಣವೇಲು, ಪಿಡಿಜಿ ಎಚ್.ಆರ್.ಹರೀಶ್, ಪ್ರೊ.ಜಗದೀಶಪ್ಪ, ಡಾ.ವೈದ್ಯ, ಭಗವತಿಹರೀಶ್ ಮತ್ತಿತರರು ಪಾಲ್ಗೊಂಡಿದ್ದರು.

 

 

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
;