kallara bandana

 

 

ಅಂತರ್ ಜಿಲ್ಲಾ ಕಳವು- ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರನ್ನು ಬಂಧಿಸಿರುವ ಚಿಕ್ಕಮಗಳೂರು ಪೊಲೀಸರು ಬಂಗಾರದ ಗಟ್ಟಿ ಸೇರಿದಂತೆ 25 ಲಕ್ಷ ಮೌಲ್ಯದ ವಸ್ತು ವಶಪಡಿಸಿಕೊಂಡಿದ್ದಾರೆ.

ಚಿಕ್ಕಮಗಳೂರು ನಗರದ ಬಸವನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಅನೇಕ ಕಳ್ಳತನ ಪ್ರಕರಣ  ನಡೆದಿದ್ದು ಪ್ರಭಾರ ವೃತ್ತ ನಿರೀಕ್ಷಕ ಗವಿರಾಜ್ ಪಿ.ಐ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು.
ಬೆಂಗಳೂರಿನ ಆರ್ ಟಿ ನಗರದಲ್ಲಿ ನೆಲೆಸಿದ್ದ ಚಿಕ್ಕಮಗಳೂರು ಉಪ್ಪಳ್ಳಿ ನಿವಾಸಿ ಮೊಹಮದ್ ಕಬೀರ್, ಡಿಜೆ ಹಳ್ಳಿವಾಸಿ ಯೂಸುಫ ಪಾಷಾ ನನ್ನು ಬಂಧಿಸಿ ಒಟ್ಟು 334 ಗ್ರಾಂ ಬಂಗಾರದ ಗಟ್ಟಿ, ಮತ್ತು ಕೃತ್ಯಕ್ಕೆಬಳಸಿದ್ದ ಬಜಾಜ್ ಪಲ್ಸರ್ ಬೈಕ್ ( ತುಮಕೂರಿನಲ್ಲಿ ಕಳವು ಮಾಡಿದ್ದು) ಒಟ್ಟು ಬೆಲೆ 25,00,000/- ವಶಪಡಿಸಿಕೊಳ್ಳಲಾಗಿದೆ.

ಮೊಹಮದ್ ಕಬೀರ್ ನನ್ನು 2023 ನೇ ಸಾಲಿನಲ್ಲಿಯೇ ಚಿಕ್ಕಮಗಳೂರು ನಗರ ಪೊಲೀಸ್‌ ಠಾಣೆಯಲ್ಲಿ ಬಂಧಿಸಿದ್ದು, ಆಗ 12 ಮನೆಕಳವು ಪ್ರಕರಣಗಳು ಪತ್ತೆಯಾಗಿದ್ದು, ಆರೋಪಿಯಿಂದ 295 ಗ್ರಾಂ ಚಿನ್ನ & 350 ಗ್ರಾಂ ಬೆಳ್ಳಿಯ ಭರಣ ಹಾಗೂ 1 ಪಿಸ್ತೂಲ್ & ಗುಂಡುಗಳು ದೊರೆತಿದ್ದವು.

ಪಿಸ್ತೂಲ್ ಅನ್ನು ವೈಜ್ಞಾನಿಕ ಪರೀಕ್ಷೆಗೆ ಕಳುಹಿಸಿದಾಗ  11.07.2020 ರಂದು ಚಿಕ್ಕಮಗಳೂರು ನಗರದ ಕೇಸರಿ ಜ್ಯೂಯೆಲರಿ ಚಿನ್ನದ ಅಂಗಡಿಯಲ್ಲಿ ಗುಂಡು ಹಾರಿಸಿ ದರೋಡೆಗೆ
ಪ್ರಯತ್ನಿಸಿದ್ದಾಗ ಸ್ಥಳದಲ್ಲಿ ದೊರೆತ ಗುಂಡಿಗೆ ಹೋಲಿಕೆಯಾಗಿರುವುದಾಗಿ ಎಫ್.ಎಸ್.ಎಲ್ ವರದಿಯಿಂದ ದೃಢಪಟ್ಟಿದೆ.

ಆರೋಪಿ ಕಬೀರ್ ಮತ್ತು ಆತನ ಸಹಚರರು ಹಲವು ದರೋಡೆ ಪ್ರಕರಣದಲ್ಲಿ ಭಾಗಿಯಾಗಿರುವುದೂ ಬೆಳಕಿಗೆ ಬಂದಿದೆ. ಈತನ ವಿರುದ್ಧ ಮಂಗಳೂರು ನಗರ, ಶಿವಮೊಗ್ಗ , ತುಮಕೂರು , ದಾವಣಗೆರೆ , ಚಾಮರಾಜನಗರ ಜಿಲ್ಲೆಗಳಲ್ಲಿ 50 ಕ್ಕೂ ಹೆಚ್ಚು ಕಳವು ಪ್ರಕರಣಗಳು ದಾಖಲಾಗಿದ್ದು, ಆರೋಪಿಯು ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದು ಈತನ ವಿರುದ್ಧ
ವಾರೆಂಟ್ ಹೊರಡಿಸಲಾಗಿತ್ತು, ಕಾರ್ಯಾಚರಣೆ ತಂಡಕ್ಕೆ ಪೊಲೀಸ್ ಅಧೀಕ್ಷಕರು  ಬಹುಮಾನ ಘೋಷಿಸಿದ್ದಾರೆ.

ಪೊಲೀಸ್ ತಂಡದಲ್ಲಿ PI CEN ಗವಿರಾಜ್ ಆರ್ ಪಿ, PSI  ಅಬ್ದುಲ್ ಖಾದರ್ ಮತ್ತು ಪೊಲೀಸ್ ಸಿಬ್ಬಂದಿಗಳಾದ   ನಂಜಪ್ಪ ಹೆಚ್ ಎಸ್,   ಪ್ರದೀಪ,   ಲೋಹಿತ್ ಸಿ ಎಂ,   ರವೀಂದ್ರ,   ಮಧುಸೂದನ್,   ಲಿಂಗಮೂರ್ತಿ,   ಗಿರೀಶ್,   ಅನ್ವರ್ ಪಾಷ,   ಹರಿಪ್ರಸಾದ್ ಮತ್ತು ಕು. ಪುಷ್ಪಾ ರವರು ಕಾರ್ಯನಿರ್ವಹಿಸಿರುತ್ತಾರೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ