ಚಿಕ್ಕಮಗಳೂರು ಜಿಲ್ಲಾಸ್ಪತ್ರೆ ಆವರಣದಲ್ಲಿ ಸೋಮವಾರ ಘೋಷಣೆಗಳ ಕಲರವ, ಒಂದೆಡೆ ಸಿ.ಟಿ.ರವಿಗೆ ಜೈ… ಮತ್ತೊಂದೆಡೆ ಜಾರ್ಜ್ ಗೆ ಜೈ, ಮಗದೊಡೆ ತಮ್ಮಯ್ಯನಿಗೆ ಜೈ…
ಜಿಲ್ಲಾಸ್ಪತ್ರೆಯ ಹೊರರೋಗಿ ವಿಭಾಗದ ಕಟ್ಟಡ ಉದ್ಘಾಟನೆ ವೇಳೆ ಈ ರೀತಿಯ ಘಟನೆ ನಡೆದಿದೆ. ಟೇಪ್ ಕಟ್ ಮಾಡುವಾಗ ಮೂವರು ನಾಯಕರ ಬೆಂಬಲಿಗರಿಂದ ಘೋಷಣೆ ಮೊಳಗಿದೆ. ಒಬ್ಬರಿಗೆ ಸೆಡ್ಡು ಹೊಡೆಯುವಂತೆ ಮತ್ತೊಬ್ಬರಿಂದ ಘೋಷಣೆ. ನೆರದಿದ್ದವರಿಗೆ ಯಾರೂ, ಯಾರ ಪರ ಕುಗ್ತಿದ್ದಾರೆಂಬುದೇ ತಿಳಿಯದೇ ಸಾರ್ವಜನಿಕರು ಮತ್ತು ಆಸ್ಪತ್ರೆಯ ಸಿಬ್ಬಂದಿಗಳು ತಬ್ಬಿಬ್ಬಾಗಿದ್ದಾರೆ.
ಸಿ.ಟಿ.ರವಿ ವೇದಿಕೆಯಿಂದ ಕೆಳಗಿಳಿಯುತ್ತಿದ್ದಂತೆ ಹೊತ್ತು ಕುಣಿದ ಕಾರ್ಯಕರ್ತರು, ಸಚಿವ ಜಾರ್ಜ್, ಶಾಸಕ ತಮ್ಮಯ್ಯ ಎದುರೇ ಸಿ.ಟಿ.ರವಿ ಹೊತ್ತು ಡ್ಯಾನ್ಸ್, ಕಾರ್ಯಕ್ರಮ ಮುಗಿಯುವ ಮುನ್ನವೇ ಬಿಜೆಪಿ ಕಾರ್ಯಕರ್ತರ ಘೋಷಣೆ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರಾಗಿದ್ದ ಜಿಲ್ಲಾಸ್ಪತ್ರೆ ಹೊರರೋಗಿ ವಿಭಾಗದ ಕಟ್ಟಡ. ಸೋಮವಾರ ಹೊರರೋಗಿ ವಿಭಾಗ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್.
ಇದೇ ಸಂದರ್ಭದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಮತ್ತು ಚಿಕ್ಕಮಗಳೂರು ಶಾಸಕ ಹೆಚ್.ಡಿ. ತಮ್ಮಯ್ಯ ತಮ್ಮ ಭಾಷಣದಲ್ಲಿ ಪರೋಕ್ಷವಾಗಿ ಒಬ್ಬರನ್ನೊಬ್ಬರು ದೂರುವ ಮೂಲಕ ಅವರಿಬ್ಬರ ನಡುವೆ ನಡೆಯುತ್ತಿರುವ ಮುಸುಕಿನ ಗುದ್ದಾಟ ಮಾತುಗಳಲ್ಲಿ ವ್ಯಕ್ತವಾಗುತ್ತಿತ್ತು.



