ನೀರು ಅಮೂಲ್ಯವಾದ ಪ್ರಾಕೃತಿಕ ಸಂಪತ್ತು, ಜೀವಜಲ, ನೀರನ್ನು ಸಂರಕ್ಷಣೆ ಮತ್ತು ಸದ್ಬಳಕೆ ಮಾಡುವುದು ನಮ್ಮೆಲ್ಲರ ಕರ್ತವ್ಯ ಎಂದು ಮೂಡಿಗೆರೆ ವಿಎಂಪಿಎಂ(ವಸ್ತಾರೆ ದಿ.ಮಂಜಮ್ಮ ದಿ.ಪುಟ್ಟಸ್ವಾಮಿ ಮೆಮೋರಿಯಲ್) ಟ್ರಸ್ಟ್ ನ ಸಂಸ್ಥಾಪಕ ವಿ.ಪಿ. ನಾರಾಯಣ ಅಭಿಪ್ರಾಯಿಸಿದರು.
ಅವರು ಇತ್ತೀಚೆಗೆ ಮೂಡಿಗೆರೆ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ಏರ್ಪಡಿದ್ದ ವಿಶ್ವಜಲದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ನೀರನ್ನು ಹಿತಮಿತವಾಗಿ ಬಳಸಿ ಸಂರಕ್ಷಣೆ ಮಾಡಬೇಕು. ಜಲಮೂಲಗಳನ್ನು ರಕ್ಷಿಸಬೇಕು, ಅಂತರ್ಜಲವನ್ನು ಯಥೇಚ್ಚವಾಗಿ ಬಳಸದೇ ಮುಂದಿನ ಪೀಳಿಗೆಗೆ ನೀರನ್ನು ಸಂರಕ್ಷಣೆ ಮಾಡಿ ಉಳಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ವಕೀಲರಾದ ಜಿ.ಬಿ. ವೆಂಕಟೇಶ್ ಕಳಸ ಇವರು ವಿವಿಧ ನಾಗರೀಕ ಕಾನೂನುಗಳ ಬಗ್ಗೆ ಉಪನ್ಯಾಸ ನೀಡಿದರು. ಮೂಡಿಗೆರೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಕೆ. ವೆಂಕಟೇಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಹಳಸೆ ಶಿವಣ್ಣ, ಮೂಡಿಗೆರೆ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್. ಬಾಲಕೃಷ್ಣ, ಮೂಡಿಗೆರೆ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ರಮೇಶ್ ಹೊಸಕೆರೆ ಮತ್ತು ಸದಸ್ಯರುಗಳಾದ ಆಶಾ ಮೋಹನ್, ಹಂಝಾ, ಖುರ್ಷಿದಾ ಬಾನು, ಕಸಾಪ ಅಧ್ಯಕ್ಷ ಡಿ.ಕೆ. ಲಕ್ಷ್ಮಣಗೌಡ, ಕಸಾಪ ಕಾರ್ಯದರ್ಶಿ ಸುಚಿತ್ರ ಪ್ರಸನ್ನ, ಕರವೇ ಅಧ್ಯಕ್ಷ ವಿನೋದ್ ಬಿದರಹಳ್ಳಿ, ಕಾಫಿಬೆಳೆಗಾರ ಬಿ.ಎಲ್. ಪ್ರಭಾಕರ್, ಕಸಾಪ ಕಸಬಾ ಹೋಬಳಿ ಅಧ್ಯಕ್ಷ ರವಿ ಕುನ್ನಹಳ್ಳಿ, ಕರ್ನಾಟಕ ಸಾಹಿತ್ಯ ಸಂಭ್ರಮ ಅಧ್ಯಕ್ಷ ಎಂ.ಎಸ್. ನಾಗರಾಜು, ವಿಎಂಪಿಎಂ ಟ್ರಸ್ಟ್ ನ ಭಾಗ್ಯ ನಾರಾಯಣ್, ನವೀನ್ ಆನೆದಿಬ್ಬ, ಕ.ಸಾ.ಪ ಬಣಕಲ್ ಹೋಬಳಿ ಅಧ್ಯಕ್ಷ ಲೋಕೇಶ್ ಬೆಟ್ಟಗೆರೆ, ಸವಿತಾ ಸಮಾಜದ ಅಧ್ಯಕ್ಷ ಮಹೇಶ್, ಸವಿತಾ ಸಮಾಜದ ಮಹಿಳಾ ಘಟಕದ ಅಧ್ಯಕ್ಷೆ ಕವಿತಾ ಲೋಕೇಶ್, ಪ.ಪಂ. ಮುಖ್ಯಾಧಿಕಾರಿ ಕಲಾವತಿ, ಶಿಕ್ಷಕಿ ನಾಗರತ್ನ ಮುಂತಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಮೂಡಿಗೆರೆ ಪಟ್ಟಣ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೀರುಗಂಟಿಗಳನ್ನು (ವಾಟರ್ ಮೆನ್) ಸನ್ಮಾನಿಸಿ ಗೌರವಿಸಲಾಯಿತು.



