ಮಾಜಿ ಸಚಿವ ದಿ.ಹೆಚ್.ಜಿ. ಗೋವಿಂದೇಗೌಡರ ಪುತ್ರ ಜೆಡಿಎಸ್ ಮುಖಂಡ ಹೆಚ್.ಜಿ. ವೆಂಕಟೇಶ್ ಅವರ ಮನೆಯಲ್ಲಿ 7 ಲಕ್ಷ ರೂ. ನಗದು ಹಾಗೂ ಚಿನ್ನಾಭರಣ ಕಳವಾಗಿದೆ.
ನೇಪಾಳ ಮೂಲದ ಮನೆಗೆಲಸದವರಿಂದಲೇ ಕಳ್ಳತನ ನಡೆದಿದೆ. ಗೋವಿಂದೇಗೌಡರ ಪುತ್ರ ವೆಂಕಟೇಶ್ ವಾಸವಿರುವ ಕೊಪ್ಪ ತಾಲೂಕಿನ ಮಣಿಪುರ ಎಸ್ಟೇಟ್‍ನಲ್ಲಿ ಈ ಕಳ್ಳತನ ನಡೆದಿದೆ. ಈ ಮನೆಗೆ ಕಳೆದ 15 ದಿನಗಳ ಹಿಂದಷ್ಟೇ ನೇಪಾಳ ಮೂಲದ ದಂಪತಿ ಕೆಲಸಕ್ಕೆ ಸೇರಿದ್ದರು. ಕಳೆದ ರಾತ್ರಿ ಮನೆಯಲ್ಲಿ ಎಲ್ಲರೂ ನಿದ್ರೆಗೆ ಜಾರಿದ್ದಾಗ, ದಂಪತಿ ಹಣ, ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.
ಈ ಸಂಬಂಧ ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಕಳ್ಳರ ಬಂಧನಕ್ಕೆ ಬಲೆ ಬೀಸಿದ್ದಾರೆ.



