ಬಂಟರೆ ಯಾನೆ ನಾಡವರ ಸಂಘ ಮೂಡಿಗೆರೆ ಇದರ 2024-25 ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಮಹಾಸಭೆ ಭಾನುವಾರ ನೆರವೇರಿತು.
ಮೂಡಿಗೆರೆ ಅಡ್ಯಂತಾಯ ಅವೆನ್ಯೂ ಬಂಟರ ಭವನದಲ್ಲಿ ಹಮ್ಮಿಕೊಂಡಿದ್ದ ಮಹಾಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ರವಿಶಂಕರ ಅಡ್ಯಂತಾಯ ವಹಿಸಿ ಸುಸೂತ್ರವಾಗಿ ನಡೆಸಿಕೊಟ್ಟರು.

ಮುಖ್ಯ ಅತಿಥಿಗಳಾಗಿಚಿಕ್ಕಮಗಳೂರು ಕೃಷ್ಣ ಹೋಟೆಲ್ ಮಾಲೀಕರು ಆನಂದ ಶೆಟ್ಟಿ ಇವರು ಮಾತನಾಡಿದ ; ಬಂಟ ಸಮುದಾಯದ ಸಾಹಸ ಮನೋಭಾವನೆಗೆ ಹೆಸರಾಗಿದೆ. ವಿವಿಧ ಉದ್ಯಮಗಳಲ್ಲಿ ಬಂಟ ಸಮುದಾಯ ಸಾಧಿಸಿರುವ ಸಾಧನೆ, ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಬಂಟ ಸಮುದಾಯ ಉನ್ನತ ಸ್ಥಾನದಲ್ಲಿ ಗುರುತಿಸಿಕೊಂಡಿದೆ ಎಂದು ಅಭಿಮಾನದ ಮಾತುಗಳನ್ನು ಆಡಿದರು.
ಕಾರ್ಯಕ್ರಮದಲ್ಲಿ ಚಿಕ್ಕಮಗಳೂರು ಜಿಲ್ಲಾ ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಪುರಂದರ ಶೆಟ್ಟಿ, ಭಾರತೀಯ ವೈದ್ಯಕೀಯ ಸಂಘ ಮಂಗಳೂರು ಇದರ ಕಾರ್ಯದರ್ಶಿ ಡಾ. ಅವಿನ್ ಬಿ ಆರ್ ಆಳ್ವಾ ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷರಾದ ವಿನೋದ್ ಕುಮಾರ್ ಶೆಟ್ಟಿ, ಕಾರ್ಯದರ್ಶಿ ಗೋಪಾಲ್ ಶೆಟ್ಟಿ, ಖಜಾಂಚಿ ಸುರೇಶ್ ಬಿ ಶೆಟ್ಟಿ, ಸಹ ಕಾರ್ಯದರ್ಶಿ ಅಶೋಕ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಉನ್ನತ ವ್ಯಾಸಂಗದಲ್ಲಿ ಸಾಧನೆ ಮಾಡಿದ ಸಮುದಾಯದ ವಿದ್ಯಾರ್ಥಿಗಳನ್ನು ಮತ್ತು ಸಮುದಾಯದ ಹಿರಿಯರನ್ನು ಗೌರವಿಸಲಾಯಿತು.
ಸಂಘದ ಮಾಜಿ ಅಧ್ಯಕ್ಷರುಗಳಾದ ಡಾ.ರಾಮಚರಣ್ ಅಡ್ಯಂತಾಯ, ಅಶೋಕ್ ಎನ್. ಶೆಟ್ಟಿ ಮತ್ತು ನರೇಂದ್ರ ಬಿ. ಶೆಟ್ಟಿ ಉಪಸ್ಥಿತರಿದ್ದರು.



ಇದೇ ಸಂದರ್ಭದಲ್ಲಿ ಬಂಟರ ಯಾನೆ ನಾಡವರ ಸಂಘ ಮೂಡಿಗೆರೆ ಇದರ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು ಸಂಘದ ನೂತನ ಅಧ್ಯಕ್ಷರಾಗಿ ವಿನೋದ್ ಕುಮಾರ್ ಶೆಟ್ಟಿ, ಉಪಾಧ್ಯಕ್ಷರಾಗಿ ಸುರೇಶ್ ಬಿ ಶೆಟ್ಟಿ, ಶ್ರೀಮತಿ ಸುಮಂಗಲ ಯಶ್ ಶೆಟ್ಟಿ, ಕಾರ್ಯದರ್ಶಿಯಾಗಿ ಪ್ರೇಮನಾಥ್ ಶೆಟ್ಟಿ, ಸಹ ಕಾರ್ಯದರ್ಶಿಯಾಗಿ ರವೀಂದ್ರ ಶೆಟ್ಟಿ, ಖಜಾಂಚಿಯಾಗಿ ಸುರೇಶ್ ಬಿ ಶೆಟ್ಟಿ ಆಯ್ಕೆಯಾದರು.
ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಗೆ ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ ಶೆಟ್ಟಿ, ವಿವಿಧ ಸಂಘಸಂಸ್ಥೇಗಳ ಪದಾಧಿಕಾರಿಗಳು ಶುಭ ಹಾರೈಸಿದರು.



