ಮೂಡಿಗೆರೆ ಜೇಸಿಐ ಸಂಸ್ಥೆ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿಯೂ ಪಟ್ಟಣದ ಜೇಸಿ ಭವನದಲ್ಲಿ ಸೆಪ್ಟಂಬರ್ 9ರಿಂದ 15ರವರೆಗೆ ಜೇಸಿ ಸಪ್ತಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಬಾರಿಯ ಜೇಸಿ ಸಪ್ತಾಹಕ್ಕೆ “ಪ್ರತಿಷ್ಟ” ಜೇಸಿ ಸಪ್ತಾಹ ಎಂದು ಹೆಸರಿಸಲಾಗಿದೆ.
ಕಾರ್ಯಕ್ರಮದಲ್ಲಿ ಪ್ರತಿದಿನ ವಿವಿಧ ಜನಪರ ಕಾರ್ಯಕ್ರಮ ಹಾಗೂ ಸಭಾ ಕಾರ್ಯಕ್ರಮ, ವಿವಿಧ ಸ್ಪರ್ಧೆಗಳು ನಡೆಯಲಿದೆ ಎಂದು ಜೇಸಿ ಅಧ್ಯಕ್ಷ ಪ್ರದೀಪ್ ಕುನ್ನಳ್ಳಿ ಹೇಳಿದರು.
ಅವರು ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಸೆಪ್ಟಂಬರ್ 9ರಂದು ಬೆಳಗ್ಗೆ 10,30 ಗಂಟೆಗೆ ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. 11 ಗಂಟೆಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮ್ಯಾರಾಥಾನ್ ನಡೆಯಲಿದೆ. ಸಂಜೆ 6 ಗಂಟೆಗೆ ಲೇಡಿ ಜೇಸಿ ಡೇ ಹಾಗೂ ಮಹಿಳಾ ಸಾಧಕರಿಗೆ ಸನ್ಮಾನ ಹಾಗೂ ನಂತರ ಜೇಸಿ ಕುಟುಂಬದ ಸದಸ್ಯರಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ.
ಸೆ.10ರಂದು ಬೆಳಗ್ಗೆ 10 ಗಂಟೆಗೆ ಪಟ್ಟಣದ ಬಾಲಕಿಯರ ಪ್ರೌಢ ಶಾಲೆಯಲ್ಲಿ ಲೈಪ್ ಸ್ಕಿಲ್ಸ್, ಕೇರಿಯರ್ ಗೈಡೆನ್ಸ್ ತರಬೇತಿ, ಸಂಜೆ 6 ಗಂಟೆಗೆ ಸಭಾ ಕಾರ್ಯಕ್ರಮ ನಂತರ ಎಲ್‍ಕೆಜಿಯಿಂದ 5 ನೇ ತರಗತಿ ಮಕ್ಕಳಿಗೆ ಛದ್ಮವೇಷ ಸ್ಪರ್ಧೆ ನಡೆಯಲಿದೆ.
ಸೆ.11ರಂದು ಬೆಳಗ್ಗೆ 10 ಗಂಟೆಗೆ ಕುನ್ನಳ್ಳಿ ಗ್ರಾಮದಲ್ಲಿ ಆರೋಗ್ಯ ತಪಾಸಣಾ ಶಿಬಿರ ಮತ್ತು ಆಟೋಟ ಸ್ಪರ್ಧೆ, ಸಂಜೆ ಜೆ.ಎಸ್. ಶಾಲೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಸೆ.12ರಂದು ಬೆಳಗ್ಗೆ 10.30ಕ್ಕೆ ತೋಟಗಾರಿಕಾ ಮಹಾವಿದ್ಯಾಲಯದಲ್ಲಿ ಬಿಸಿನೆಸ್, ನೆಟ್ವರ್ಕಿಂಗ್ ಮತ್ತು ಕಮ್ಯುನಿಕೇಷನ್ ತರಬೇತಿ, ಸಂಜೆ ಬಿ.ಜಿ.ಎಸ್.ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಸೆ.13ರಂದು ಬೆಳಗ್ಗೆ 10.30 ಗಂಟೆಗೆ ಜೇಸಿ ಭವನದಲ್ಲಿ ತಾಲೂಕು ಮಟ್ಟದ ರಸಪ್ರಶ್ನೆ ಸ್ಪರ್ಧೆ, ಸಂಜೆ ಎಂ.ಇ.ಎಸ್.ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಸೆ.14ರಂದು ಬೆಳಗ್ಗೆ 10.30ಕ್ಕೆ ಮಹಿಳೆಯರಿಗೆ ಕಾನೂನು ಅರಿವು ಮತ್ತು ಜೇಸಿಐ ಪರಿಚಯ, ಸಂಜೆ ತಾಲೂಕು ಮಟ್ಟದ ಸಮೂಹನೃತ್ಯ ಸ್ಪರ್ಧೆ ಏರ್ಪಡಿಸಲಾಗಿದೆ.
ಸೆ.15ರಂದು ಸಂಜೆ 6.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಈ ಸಂದರ್ಭದಲ್ಲಿ ಕಮಲಪತ್ರ ಪ್ರದಾನ, ತಾಲೂಕಿನ ಸಾಧಕರಿಗೆ, ಯುವ ಪ್ರತಿಭೆಗಳಿಗೆ ಸನ್ಮಾನ ನಡೆಯಲಿದೆ.
ಈ ಎಲ್ಲಾ ಕಾರ್ಯಕ್ರಮಕ್ಕೆ ಸಾರ್ವಜನಿಕರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಜೇಸಿಐ ಅಲುಮ್ನಿ ಕ್ಲಬ್ ವಲಯ ಅಧ್ಯಕ್ಷ ಹೆಚ್.ಕೆ. ಯೋಗೇಶ್ ಮಾತನಾಡಿ ಜೇಸಿಐ ಸಂಸ್ಥೆಯು ವಿಶ್ವದ ಅತಿದೊಡ್ಡ ಯುವಜನ ವ್ಯಕ್ತಿತ್ವ ವಿಕಸನ ಸಂಸ್ಥೆಯಾಗಿದೆ. ಜೇಸಿ ಸಪ್ತಾಹ ಎಂಬುದು ಜೇಸಿ ಸಂಸ್ಥೆಯಲ್ಲಿ ಒಂದು ಅತ್ಯುತ್ತಮ ಕಾರ್ಯಯೋಜನೆಯಾಗಿದೆ. ದೇಶದಾದ್ಯಂತ ಒಂದು ವಾರಗಳ ಕಾಲ ಸಪ್ತಾಹವನ್ನು ಹಮ್ಮಿಕೊಳ್ಳಲಾಗುತ್ತದೆ. ಇಲ್ಲಿ ಅನೇಕ ಸಮಾಜಮುಖಿ ಕಾರ್ಯಗಳು, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಕಾರ್ಯಕ್ರಮಗಳು, ತರಬೇತಿಗಳು, ಸ್ಪರ್ದೇಗಳು ಏರ್ಪಡಿಸಲಾಗುತ್ತದೆ. ವಿಶೇಷವಾಗಿ ಮೂಡಿಗೆರೆಯಲ್ಲಿ ನಡೆಯುವ ಜೇಸಿ ಸಪ್ತಾಹವು ವಲಯ ಮತ್ತು ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯುತ್ತಿದೆ ಎಂದರು.
ಗೋಷ್ಠಿಯಲ್ಲಿ ಜೇಸಿ ಕಾರ್ಯದರ್ಶಿ ಹಮೀದ್ ಸಬ್ಬೇನಹಳ್ಳಿ, ಸಪ್ತಾಹದ ನಿರ್ದೇಶಕಿ ಕೃತಿ ಪ್ರದೀಪ್, ಖಜಾಂಚಿ ಸುದೀಪ್ ತ್ರಿಪುರ, ಪೂರ್ವಾಧ್ಯಕ್ಷರಾದ ಎಂ.ಡಿ. ವಿಜಯಕುಮಾರ್, ಲೇಡಿಜೇಸಿ ಪೂರ್ವಾಧ್ಯಕ್ಷೆ ಸುಚಿತ್ರ ಪ್ರಸನ್ನ, ಹಿರಿಯ ಸದಸ್ಯ ಕೆ.ಎನ್.ರವಿ ಉಪಸ್ಥಿತರಿದ್ದರು.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ :94826 86589, 87624 55403



